Thursday, November 21, 2024
Homeಜಿಲ್ಲಾ ಸುದ್ದಿಗಳು | District Newsಹೇಮಾವತಿ ಜಲಾಶಯ ಸಂತ್ರಸ್ಥರಿಂದ ಡಿಸಿ ಕಚೇರಿ ಎದುರು ಅರೆಬೆತ್ತಲೆ ಧರಣಿ

ಹೇಮಾವತಿ ಜಲಾಶಯ ಸಂತ್ರಸ್ಥರಿಂದ ಡಿಸಿ ಕಚೇರಿ ಎದುರು ಅರೆಬೆತ್ತಲೆ ಧರಣಿ

ಹಾಸನ,ಸೆ.27-ಹಲವು ದಶಕದಿಂದ ಹೋರಾಟ ನಡೆಸಿದರೂ ಸ್ಪಂದಿಸದ ಜಿಲ್ಲಾಡಳಿತದ ಕ್ರಮ ವಿರೋಸಿ ಹೇಮಾವತಿ ಜಲಾಶಯ ಸಂತ್ರಸ್ತರ ಹೋರಾಟ ಸಮಿತಿ ಸದಸ್ಯರು ಡಿಸಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನಾ ಧರಣಿ ನಡೆಸಿದರು.ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಎಸ್.ಕೃಷ್ಣ , ನಾವು ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದರು ನ್ಯಾಯ ದೊರೆಯುತ್ತಿಲ್ಲ.

ಮುಖ್ಯಮಂತ್ರಿ, ಲೋಕಸಭಾ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಕಾಧಿರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಪಹಣಿ, ಪೋಡಿ ಮಾಡದೆ ಸತಾಯಿಸಲಾಗುತ್ತಿದೆ. ನಮಗೆ ಅಗತ್ಯ ದಾಖಲೆ ಕೊಡದಿದ್ದಲ್ಲಿ ಜಲಾಶಯಕ್ಕೆ ಕೊಟ್ಟಿರುವ ನಮ್ಮ ಭೂಮಿ ವಾಪಸ್ ನೀಡಲಿ ಎಂದು ಆಗ್ರಹಿಸಿದರು.

ನಮಗೆ ನೀಡಿರುವ ಭೂಮಿಗೆ ಸಂಬಂಧಿಸಿದ ಅಗತ್ಯ ದಾಖಲೆ ಇಲ್ಲದೆ ಸರ್ಕಾರದಿಂದ ಯಾವುದೆ ಸೌಲಭ್ಯ ಪಡೆಯುಲು ಆಗುತ್ತಿಲ್ಲ. ಅಲ್ಲದೆ, ಬೆಳೆ ಹಾನಿ ಪರಿಹಾರ ಪಡೆಯಲು ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಯರ್-ಫೋನ್ ವಿಚಾರಕ್ಕೆ ಸ್ನೇಹಿತನನ್ನೆ ಕೊಂದ 9ನೇ ತರಗತಿ ವಿದ್ಯಾರ್ಥಿಗಳು

ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಯಾವುದೇ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸದೆ ಬೇಕಾಬಿಟ್ಟಿ ಉತ್ತರ ನೀಡುತ್ತಾರೆ. ಯಾವುದೇ ರಾಜಕಾರಣಿಗಳು ನಮ್ಮ ಗೋಳು ಕೇಳುತ್ತಿಲ್ಲ. ಆದ್ದರಿಂದ 35 ಸಾವಿರ ಸಂತ್ರಸ್ಥರು ಮುಂದಿನ ಲೋಕಸಭಾ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೃಷ್ಣ ತಿಳಿಸಿದರು.

ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ಜಿಲ್ಲೆಯ ಸುಮಾರು 10 ಸಾವಿರ ರೈತ ಕುಟುಂಬಗಳಿಗೆ ಪರಿಹಾರವಾಗಿ ಜಿಲ್ಲೆಯ ವಿವಿಧೆಡೆ ಹಲವು ದಶಕಗಳ ಹಿಂದೆಯೇ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿಯನ್ನು ನೀಡಲಾಗಿದೆ.

ಇದಕ್ಕೆ ಹಣ ಕಟ್ಟಿಸಿಕೊಂಡಿದ್ದು, ಇಲ್ಲಿಯವರೆಗೆ ಬಹು ಪಾಲು ಸಂತ್ರಸ್ತ ಕುಟುಂಬಗಳಿಗೆ ಜಮೀನುಗಳನ್ನು ಗುರುತಿಸಿ, ಖಾತೆ, ಪಹಣಿ ಮುಂತಾದ ಹಕ್ಕುಪತ್ರಗಳನ್ನು ನೀಡದೆ ಸರ್ಕಾರ ಹಾಗೂ ಜಿಲ್ಲಾಡಳಿತ ಅನ್ಯಾಯವೆಸಗುತ್ತಿದೆ. ನಮಗೆ ಅಗತ್ಯ ದಾಖಲೆ ಒದಗಿಸಲು ಯಾವುದೇ ತೊಡಕು ಇಲ್ಲದಿದ್ದರು ಅಧಿಕಾರಿಗಳ ವರ್ತನೆ ಖಂಡನೀಯ ಎಂದರು. ಪ್ರತಿಭಟನೆಯಲ್ಲಿ ವೆಂಕಟರಾಮೇಗೌಡ, ಜಯರಾಮ, ರಾಜೇಗೌಡ, ಸ್ವಾಮಿ ಸೇರಿದಂತೆ 30 ಕ್ಕೂ ಹೆಚ್ಚು ಮಂದಿ ಇದ್ದರು.

RELATED ARTICLES

Latest News