ಚಂಡೀಗಢ, ಅ. 18 (ಪಿಟಿಐ) – ಪಾಕಿಸ್ತಾನ ಮೂಲದ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ್ದ ಮಾದಕವಸ್ತು ಕಳ್ಳಸಾಗಣೆದಾರನೊಬ್ಬರನ್ನು ಪಂಜಾಬ್ ಪೊಲೀಸರು ಬಂಧಿಸಿ ಒಂದು ಕಿಲೋಗ್ರಾಂಗೂ ಹೆಚ್ಚು ಮೌಲ್ಯದ ಹೆರಾಯಿನ್ ವಶಪಡಿಸಿ ಕೊಂಡಿದ್ದಾರೆ.
ಗಡಿಯಾಚೆಗಿನ ಕಳ್ಳಸಾಗಣೆ ಜಾಲಗಳ ವಿರುದ್ಧ ಪ್ರಮುಖ ಪ್ರಗತಿಯಲ್ಲಿ, ಪಠಾಣ್‌ಕೋಟ್ ಕೌಂಟರ್ ಇಂಟೆಲಿಜೆನ್ಸ್, ಗುರುದಾಸ್‌ಪುರ ಪೊಲೀಸರ ಜಂಟಿ ಕರ‍್ಯಾಚರಣೆಯಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿ ಕಳ್ಳಸಾಗಣೆದಾರನ ವಶದಿಂದ 1.350 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮಹಾನರ‍್ದೇಶಕ ಗೌರವ್ ಯಾದವ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಂಧಿತ ವ್ಯಕ್ತಿ, ಪಾಕಿಸ್ತಾನ ಮೂಲದ ಕಾರ್ಯಕರ್ತರನ್ನ ಹೊಂದಿದ್ದು, ಭಾರತಕ್ಕೆ ಮಾದಕವಸ್ತು ಕಳ್ಳಸಾಗಣೆ ಮಾಡಲು ಡ್ರೋನ್‌ಗಳನ್ನು ಬಳಸಿದ್ದು, ಈ ಪ್ರಕರಣದಲ್ಲಿ ಹೆಚ್ಚಿನ ಬಂಧನವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಎಫ್‌ಐಆರ್ ದಾಖ ಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಡಿಜಿಪಿ ತಿಳಿಸಿದ್ದಾರೆ