Thursday, December 5, 2024
Homeರಾಷ್ಟ್ರೀಯ | Nationalಮನೆಗೆ ಬೆಂಕಿ ಬಿದ್ದು ಇಬ್ಬರು ಸಾವು, 2 ಮಕ್ಕಳ ರಕ್ಷಣೆ

ಮನೆಗೆ ಬೆಂಕಿ ಬಿದ್ದು ಇಬ್ಬರು ಸಾವು, 2 ಮಕ್ಕಳ ರಕ್ಷಣೆ

Shahdara Fire: 2 Dead, 2 Children Rescued After Fire Breaks Out at Delhi Home

ನವದೆಹಲಿ,ಅ.18– ಮನೆಗೆ ಬೆಂಕಿ ಹೊತ್ತಿಕೊಂಡು ಇಬ್ಬರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಶಹದಾರಾ ಪ್ರದೇಶದಲ್ಲಿ ನಡೆದಿದೆ. ಬೆಳಿಗ್ಗೆ 5.25 ಕ್ಕೆ ಮನೆಗೆ ಬಿಂಕಿ ಬಿದ್ದಿರುವ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆರು ಅಗ್ನಿಶಾಮಕ ವಾಹನ ತೆರಳಿ ಬೆಂಕಿ ನಂದಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್‌‍) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ವೇಳೆ ಕಟ್ಟಡದ ಒಳಗಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. 6 ಹಂತಸ್ತಿನ ಕಟ್ಟಡದ ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎರಡು ಗಂಟೆಗಳಲ್ಲಿ ಸತತ ಶ್ರಮದ ನಂತರ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮನೆಯೊಳಗಿಂದ ಎರಡು ಶವಗಳನ್ನು ಹೊರತೆಗೆಯಲಾಗಿದೆ, ಅವುಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು, ಮಕ್ಕಳನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಅನಾಹುತಕ್ಕೆ ಶಾರ್ಟ್‌ ಸಕ್ಯೂಯೂಟ್‌ ಕಾರಣ ಎಂದು ಶಂಕಿಸಲಾಗಿದೆ ಆದರೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

RELATED ARTICLES

Latest News