ಶಿಮ್ಲಾ, ಆ.14- ಹಿಮಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಭಾರಿ ಪ್ರವಾಹ ಉಂಟಾಗಿದ್ದು ಓರ್ವ ಗಾಯಾಳು ಸೇರಿದಂತೆ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರನ್ನು ಸೇನಾ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಇಂದು ಬಿಡುಗಡೆ ಮಾಡಲಾದ ಅಧಿಕೃತ ಪ್ರಕಟಣೆ ತಿಳಿಸಿದೆ.
ನಿನ್ನೆ ರಾತ್ರಿ ಕಿನ್ನೌರ್ ಜಿಲ್ಲೆಯ ರಿಷಿ ಡೋಗ್ರಿ ಕಣಿವೆಯಲ್ಲಿ ಎತ್ತರದ ಪ್ರದೇಶಗಳಲ್ಲಿ ಮೇಘಸ್ಫೋಟದಿಂದ ತೀವ್ರ ಪ್ರವಾಹ ಉಂಟಾಗಿದ್ದು ಸಟ್ಲೇಜ್ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಜಲಾವೃತವಾಯಿತು.
ಈ ಪ್ರದೇಶವು ಗಂಗ್‌ತಂಗ್ ಬ್ರಲಾಂ ದಿಕ್ಕಿನ ಲೋಕೋಪಯೋಗಿ ರಸ್ತೆ ನಿರ್ಮಾಣದ ಕಾಮಗಾರಿ ನಡೆಯುತ್ತಿರುವ ವಲಯವಾಗಿದೆ ಎಂದು ಸೇನೆ ಹೇಳಿದೆ.ಕಿನ್ನೌರ್ ಪೊಲೀಸ್ ವರಿಷ್ಠಾಧಿಕಾರಿಯವರಿಂದ ತುರ್ತು ಮನವಿ ಸ್ವೀಕರಿಸಿದ ಸೇನೆಯು ತಕ್ಷಣವೇ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯ ಆರಂಭಿಸಿತು.
ಕತ್ತಲೆ, ವೇಗವಾದ ಪ್ರವಾಹ, ಅಸ್ಥಿರ ಗಾಳಿಯನ್ನು ಲೆಕ್ಕಿಸದೆ ರಕ್ಷಣಾ ತಂಡವು ಸ್ಥಳಕ್ಕೆ ತಲುಪಿ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರನ್ನು ಪತ್ತೆ ಮಾಡಿ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು ಎಂದು ಹೇಳಿಕೆ ವಿವರಿಸಿದೆ.
- ಭಾರತದ ಮೇಲೆ ವಿನಾಕಾರಣ ದ್ವೇಷ ಕಾರುತ್ತಿದ್ದಾರೆ ಟ್ರಂಪ್ ; ಬೊಲ್ಟನ್ ಬೇಸರ
- ಲಿವ್ ಇನ್ನಲ್ಲಿದ್ದ ಮಗಳನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆ
- ದೇಶ ವಿಭಜಿಸಿ ಭಾರತ ಮಾತೆಗೆ ಕಾಂಗ್ರೆಸ್ ನೋವುಂಟು ಮಾಡಿದೆ ; ಅಮಿತ್ ಶಾ
- ಪಂಜಾಬ್ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಇಬ್ಬರು ಸದಸ್ಯರ ಬಂಧನ
- ಟ್ರಕ್-ಆಟೋ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಬಲಿ