Monday, October 7, 2024
Homeರಾಷ್ಟ್ರೀಯ | Nationalಅಸ್ಸಾಂ ಎಂದಿಗೂ ಮ್ಯಾನ್ಮಾರ್ ಭಾಗವಾಗಿರಲಿಲ್ಲ : ಹಿಮಂತ ಬಿಸ್ವಾ ಶರ್ಮಾ

ಅಸ್ಸಾಂ ಎಂದಿಗೂ ಮ್ಯಾನ್ಮಾರ್ ಭಾಗವಾಗಿರಲಿಲ್ಲ : ಹಿಮಂತ ಬಿಸ್ವಾ ಶರ್ಮಾ

ಗುವಾಹಟಿ,ಡಿ.9 ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಅಸ್ಸಾಂ ಮ್ಯಾನ್ಮಾರ್‍ನ ಭಾಗವಾಗಿದೆ ಎಂದು ಹೇಳಿದ್ದ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್‍ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ನೀಡಿದ್ದಾರೆ.ಪೌರತ್ವ ಕಾಯಿದೆ, 1955 ರ ಸೆಕ್ಷನ್ 6 ಎ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸಿಬಲ್ ಅವರು ಈ ಕಾಮೆಂಟ್ ಮಾಡಿದ್ದಾರೆ ಎಂದು ವರದಿಯಾಗಿತ್ತು. ಅಸ್ಸಾಂನ ಇತಿಹಾಸದ ಬಗ್ಗೆ ಅರಿವಿಲ್ಲದವರು ಮಾತನಾಡಬಾರದು.

ಅಸ್ಸಾಂ ಎಂದಿಗೂ ಮ್ಯಾನ್ಮಾರ್‍ನ ಭಾಗವಾಗಿರಲಿಲ್ಲ. ಅಲ್ಪಾವಧಿಗೆ ಘರ್ಷಣೆಗಳು ನಡೆದವು. ಅದೊಂದೇ ಸಂಬಂಧವಾಗಿತ್ತು. ಇಲ್ಲದಿದ್ದರೆ, ಅಸ್ಸಾಂ ಒಂದು ಭಾಗವಾಗಿದೆ ಎಂದು ಹೇಳುವ ಯಾವುದೇ ಡೇಟಾವನ್ನು ನಾನು ನೋಡಿಲ್ಲ ಎಂದಿದ್ದಾರೆ.

ಈಶಾನ್ಯ ಭಾಗದ ಬಿಜೆಪಿಯ ತಂತ್ರಗಾರ ಎಂದು ಕರೆಯಲ್ಪಡುವ ಶರ್ಮಾ ಮತ್ತು ಮೇ 2022 ರಲ್ಲಿ ಕಾಂಗ್ರೆಸ್ ತೊರೆದ ರಾಜ್ಯಸಭಾ ಸಂಸದ ಸಿಬಲ್ ನಡುವೆ ಪದೆ ಪದೇ ಮಾತಿನ ಸಮರ ನಡೆಯುತ್ತಿರುತ್ತದೆ ಆದರಲ್ಲೂ ಮ್ಯಾನ್ಮಾರ್‍ನಿಂದ ಅಕ್ರಮ ವಲಸಿಗರ ಸಮಸ್ಯೆ ಇರುವ ಮಣಿಪುರದ ಬಿಕ್ಕಟ್ಟು ಕುರಿತಂತೆ ಹೆಚ್ಚು ಚರ್ಚೆ ನಡೆಯುವುದು ವಿಶೇಷ.

ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಹಲವು ನಾಯಕರು ಈಶಾನ್ಯ ರಾಜ್ಯದಲ್ಲಿ ಅಶಾಂತಿಯ ಹಿಂದಿನ ಪ್ರಮುಖ ಅಂಶಗಳಲ್ಲಿ ಅಕ್ರಮ ವಲಸಿಗರ ಪ್ರವೇಶವೂ ಒಂದು ಎಂದು ಹೇಳಿದ್ದಾರೆ.

ಕಾರಿಗೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ, ಒಂದೇ ಕುಟುಂಬದ ಐವರ ಸಾವು

ಬುಧವಾರದ ಸುಪ್ರೀಂ ಕೋರ್ಟ್ ಕಲಾಪದಲ್ಲಿ, ಸಿಬಲ್ ಯಾವುದೇ ವಲಸೆಯನ್ನು ಮ್ಯಾಪ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಮತ್ತು ನೀವು ಅಸ್ಸಾಂನ ಇತಿಹಾಸವನ್ನು ನೋಡಿದರೆ, ಯಾರು ಯಾವಾಗ ಬಂದರು ಎಂದು ಕಂಡುಹಿಡಿಯುವುದು ಅಸಾಧ್ಯವೆಂದು ನೀವು ಅರ್ಥಮಾಡಿಕೊಳ್ಳುತ್ತೀರಿ.

ಅಸ್ಸಾಂ ಮೂಲತಃ ಮ್ಯಾನ್ಮಾರ್‍ನ ಒಂದು ಭಾಗವಾಗಿತ್ತು. ಮತ್ತು ಅದು 1824 ರಲ್ಲಿ ಬ್ರಿಟಿಷರು ಪ್ರದೇಶದ ಒಂದು ಭಾಗವನ್ನು ವಶಪಡಿಸಿಕೊಂಡ ನಂತರ ಅಸ್ಸಾಂ ಅನ್ನು ಬ್ರಿಟಿಷರಿಗೆ ಹಸ್ತಾಂತರಿಸುವ ಒಪ್ಪಂದವನ್ನು ಮಾಡಲಾಯಿತು ಎಂದು ಸಿಬಲ್ ಹೇಳಿದ್ದರು.

RELATED ARTICLES

Latest News