Sunday, November 24, 2024
Homeಅಂತಾರಾಷ್ಟ್ರೀಯ | Internationalಭಾರತಕ್ಕೆ ಸಂಬಂಧಿಸಿದ ಮತ್ತೊಂದು ಬಾಂಬ್‌ ಸಿಡಿಸಲು ಸಜ್ಜಾದ ಹಿಂಡನ್‌ಬರ್ಗ್‌, ಈ ಬಾರಿ ಯಾರು ಟಾರ್ಗೆಟ್..?

ಭಾರತಕ್ಕೆ ಸಂಬಂಧಿಸಿದ ಮತ್ತೊಂದು ಬಾಂಬ್‌ ಸಿಡಿಸಲು ಸಜ್ಜಾದ ಹಿಂಡನ್‌ಬರ್ಗ್‌, ಈ ಬಾರಿ ಯಾರು ಟಾರ್ಗೆಟ್..?

ವಾಷಿಂಗ್ಟನ್‌,ಆ.10- ಭಾರತದ ಖ್ಯಾತ ಉದ್ಯಮಿ ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು 2023ರ ಜನವರಿಯಲ್ಲಿ ವರದಿ ಪ್ರಕಟಿಸಿದ ದೇಶಾದ್ಯಂತ ಸಂಚಲ ಮೂಡಿಸಿತ್ತು. ಇದೀಗ ಮತ್ತೊಮೆ ಭಾರತ ಕೇಂದ್ರಿತ ವರದಿ ಪ್ರಕಟಿಸುವುದಾಗಿ ಘೋಷಿಸಿದೆ.

ಈ ಬಗ್ಗೆ ಇಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸೂಚನೆ ನೀಡಿದೆ. ಶೀಘ್ರದಲ್ಲೇ ಭಾರತದಲ್ಲಿ ಏನೋ ಬಹುದೊಡ್ಡ ಬದಲಾವಣೆ ನಡೆಯಲಿದೆ ಎಂದು ಸಂಸ್ಥೆ ಬರೆದುಕೊಂಡಿದೆ. ಅದಾನಿ ಗ್ರೂಪ್‌ ಆಂತರಿಕ ವ್ಯಾಪಾರ ಮತ್ತು ಷೇರು ಮಾರುಕಟ್ಟೆಯಲ್ಲಿ ನಿಯಮ ಉಲ್ಲಂಘನೆಗಳನ್ನು ಮಾಡುತ್ತಿದೆ ಎಂದು ಆರೋಪಿಸಿ ಹಿಂಡನ್‌ಬರ್ಗ್‌ ವರದಿ ಪ್ರಕಟಿಸಿದ ಸುಮಾರು ಒಂದೂವರೆ ವರ್ಷದ ಬಳಿಕ ಮತ್ತೊಂದು ಬಾಂಬ್‌ ಸಿಡಿಸಲು ಸಜ್ಜಾಗಿದೆ.

ಜನವರಿ 2023 ರಲ್ಲಿ, ಹಿಂಡನ್‌ಬರ್ಗ್‌ ಅದಾನಿ ಗ್ರೂಪ್‌ನ ಹಣಕಾಸು ಅಕ್ರಮಗಳ ಆರೋಪದ ವರದಿಯನ್ನು ಪ್ರಕಟಿಸಿತು. ಇದು ಕಂಪನಿಯ ಷೇರು ಬೆಲೆಯಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಯಿತು. ಅದಾನಿ ಗ್ರೂಪ್‌ ಹಿಂಡನ್‌ಬರ್ಗ್‌ ವರದಿಯನ್ನು ತಳ್ಳಿಹಾಕಿತ್ತು. ಹಿಂಡನ್‌ಬರ್ಗ್‌ ವರದಿಯು ಅದಾನಿ ಸಮೂಹದಿಂದ ಸ್ಟಾಕ್‌ ಮ್ಯಾನಿಪ್ಯುಲೇಷನ್‌ ಮತ್ತು ವಂಚನೆಯನ್ನು ಆರೋಪಿಸಿದೆ.

ಈ ಪ್ರಕರಣವು ಅದಾನಿ ತನ್ನ ಷೇರು ಬೆಲೆಗಳನ್ನು ಹೆಚ್ಚಿಸಿದೆ ಎಂಬ ಆರೋಪಗಳಿಗೆ (ಶಾರ್ಟ್‌-ಸೆಲ್ಲರ್‌ ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿಯ ಭಾಗ) ಸಂಬಂಧಿಸಿದೆ.ಈ ಆರೋಪಗಳನ್ನು ಪ್ರಕಟಿಸಿದ ನಂತರ, ಇದು ವಿವಿಧ ಅದಾನಿ ಸಮೂಹದ ಕಂಪನಿಗಳ ಷೇರುಗಳಲ್ಲಿ ತೀವ್ರ ಕುಸಿತಕ್ಕೆ ಕಾರಣವಾಯಿತು. ವರದಿಯ ಪ್ರಕಾರ 100 ಶತಕೋಟಿಯಷ್ಟು ನಷ್ಟವಾಗಿತ್ತು. ಅದಾನಿ ಸಮೂಹವು ಹಿಂಡನ್‌ಬರ್ಗ್‌ ಸಂಶೋಧನಾ ವರದಿಯಲ್ಲಿನ ಎಲ್ಲಾ ಆರೋಪಗಳನ್ನು ಪದೇ ಪದೇ ನಿರಾಕರಿಸಿದೆ.

ಹಿಂಡನ್‌ಬರ್ಗ್‌ ವರದಿಯಲ್ಲಿ ಏನಿತ್ತು? :
ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. ಹೂಡಿಕೆದಾರರಿಗೆ ಅದಾನಿ ಗ್ರೂಪ್‌ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಅದಾನಿ ಗ್ರೂಪ್‌ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು. ಅಲ್ಲದೆ ಅದಾನಿ ಗ್ರೂಪ್‌ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಹಿಂಡನ್‌ಬರ್ಗ್‌ ವರದಿ ಕುರಿತು ತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹಲವರು ಮೊರೆ ಹೋಗಿದ್ದರು. ಅಲ್ಲದೆ ಅದಾನಿ ಗ್ರೂಪ್‌ ಅಕ್ರಮ ಪತ್ತೆಹಚ್ಚುವಲ್ಲಿ ಸೆಬಿ ವಿಲವಾಗಿದೆ. ಹಾಗಾಗಿ ತನಿಖೆಗೆ ಎಸ್‌‍ಐಟಿ ರಚಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ಸರ್ವೋಚ್ಚ ನ್ಯಾಯಾಲಯವು 2023ರ ಮಾರ್ಚ್‌ನಲ್ಲಿ ಸೆಬಿ ತನಿಖೆ ಮೇಲೆ ನಿಗಾ ಇರಿಸಲು, ತನಿಖೆಯಲ್ಲಿ ದೋಷ ಪತ್ತೆಹಚ್ಚಲು ಆರು ಸದಸ್ಯರ ತನಿಖಾ ಸಮಿತಿ ರಚಿಸಿತ್ತು. ಇದಾದ ಎರಡು ತಿಂಗಳ ಬಳಿಕ ಸೆಬಿಯು ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿತ್ತು. ಅದಾನಿ ಗ್ರೂಪ್‌ ವಂಚನೆ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಈ ಹಂತದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಉಲ್ಲೇಖಿಸಿತ್ತು.

ಗೌತಮ್‌ ಅದಾನಿ-ಹಿಂಡನ್‌ಬರ್ಗ್‌ ವರದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ನಡೆಸುತ್ತಿರುವ ತನಿಖೆಯ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತ್ತು. ಸೆಬಿಯು ತನಿಖೆ ಹಾಗೂ ನಿಯಂತ್ರಕ ಸಂಸ್ಥೆಯಾಗಿರುವುದರಿಂದ ಅದರ ತನಿಖೆಯಲ್ಲಿ ಸುಪ್ರೀಂ ಕೋರ್ಟ್‌ ಹಸ್ತಕ್ಷೇಪ ಮಾಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿತ್ತು. ಇದರಿಂದಾಗಿ ಗೌತಮ್‌ ಅದಾನಿ ನೇತೃತ್ವದ ಗ್ರೂಪ್‌ಗೆ ರಿಲೀ್‌‍ ಸಿಕ್ಕಿತ್ತು.

RELATED ARTICLES

Latest News