ಬೆಂಗಳೂರು, ಅ.19- ರಾಜ್ಯದ ವಿವಿಧೆಡೆ ಹಿಂಗಾರು ಮಳೆ ಚುರುಕುಗೊಂಡಿದ್ದು, ಉತ್ಪಾದನೆ ಕುಂಠಿತವಾಗಿ ತರಕಾರಿಗಳ ಬೆಲೆ ಮತ್ತೆ ಗಗನಕ್ಕೇರಿದ್ದು, ದೀಪಾವಳಿ ಹಬ್ಬಕ್ಕೆ ಮತ್ತಷ್ಟು ತುಟ್ಟಿಯಾಗುವ ಸಾಧ್ಯತೆಗಳಿವೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಶಿವಮೊಗ್ಗ, ಬಳ್ಳಾರಿ, ರಾಯಚೂರು, ಹಾಸನ , ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೈಗೆ ಬಂದ ಫಸಲು ನೆಲಕಚ್ಚಿದ್ದು, ಉತ್ಪಾದನೆ ಕುಂಠಿತವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಮಾಲು ಬಾರದಿರುವುದರಿಂದ ಬೆಲೆ ಹೆಚ್ಚಳವಾಗದೆ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕೆಜಿಗೆ ಎಲ್ಲಾ ತರಕಾರಿಗಳ ಬೆಲೆ 10 ರೂ. ಏರಿಕೆಯಾಗಿದೆ. ಅದರಲ್ಲೂ ಲಾಟರಿ ಬೆಳೆ ಎಂದೇ ಕರೆಯುವ ಕೆಂಪು ಸುಂದರಿ ಬೆಲೆ\ಏರಿಕೆಯಾಗುತ್ತಲೆ ಇದೆ. ಮಳೆ ಹೆಚ್ಚಾದ ಕಾರಣ ಗಿಡದಲ್ಲಿ ಇದ್ದ ಟೊಮ್ಯಾಟೋ ನಾಶವಾಗಿದ್ದು ಬೆಲೆ ಹಚ್ಚಳವಾಗಿದೆ. ರಾಜ್ಯದಲ್ಲೇ ದೊಡ್ಡ ಮಾರುಕಟ್ಟೆಯಾದ ಕೋಲಾರ ಮಾರುಕಟ್ಟೆಯಿಂದ ರಾಜ್ಯ ಹಾಗೂ ಅಂತಾರಾಜ್ಯಗಳಿಗೆ ಟೊಮ್ಯಾಟೋ ಸರಬರಾಜು ಆಗುತ್ತದೆ. ಆದರೆ ಅಲ್ಲೇ ನಿರೀಕ್ಷಿತ ಪ್ರಮಾಣದಲ್ಲಿ ಮಾಲು ಬರುತ್ತಿಲ್ಲ . ಹಾಗಾಗಿ ಕೆಜಿಗೆ 60ರೂ. ನಿಂದ 70 ರೂ.ಗೆ ಮಾರಾಟವಾಗುತ್ತಿದೆ.
ಅದರಲ್ಲೂ ನಾಟಿ ಬೀನ್ಸ್ ಶತಕ ಬಾರಿಸಿ ಮುನ್ನುಗ್ಗುತ್ತಲೆ ಇದೆ. ಕೆಜಿಗೆ 120 ರೂ.ಗೆ ಮಾರಾಟವಾಗುತ್ತದೆ. ರಿಂಗ್ ಬೀನ್ಸ್ ಕೂಡ 100 ರೂ. ಇದೆ. ಅದೇ ರೀತಿ ಕ್ಯಾರೆಟ್ 60ರೂ., ಮೂಲಂಗಿ 40ರೂ., ಕ್ಯಾಪ್ಸಿಕಂ 80ರೂ., ಹೀರೆಕಾಯಿ 60ರೂ., ಬದನೆ 50ರೂ., ನವಿಲುಕೋಸು 50ರೂ., ಆಲೂಗೆಡ್ಡೆ 50ರೂ.. ಸೌತೆಕಾಯಿ 30ರೂ., ಗ್ರೀನ್ ಚಿಲ್ಲಿ 80ರೂ., ನುಗ್ಗೆಕಾಯಿ 120ರೂ.ಗೆ ಚಿಲ್ಲರೆಯಾಗಿ ಮಾರಾಟವಾಗುತ್ತಿದೆ.
ಸದ್ಯಕ್ಕಿಳಿಯಲ್ಲ ಈರುಳ್ಳಿ ಬೆಲೆ: ಕಳೆದ ಒಂದು ತಿಂಗಳಿನಿಂದಲೂ ಸ್ಥಿರತೆ ಕಾಯ್ದುಕೊಂಡು ಬಂದಿರುವ ಈರುಳ್ಳಿ ಬೆಲೆ ಸದ್ಯಕ್ಕೆ ಇಳಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ನೂರು ರೂ.ಗೆ 5 ಕೆಜಿ ಮಾರಾಟವಾಗುತ್ತಿದ್ದ ಈರುಳ್ಳಿ ಕಳೆದ ಒಂದು ತಿಂಗಳಿನಿಂದಲೂ ಕೆಜಿಗೆ 60 ರೂ.ಗೆ ಮಾರಾಟವಾಗುತ್ತಿದೆ. ಹೆಚ್ಚು ಈರುಳ್ಳಿ ಬೆಳೆಯುವ ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಬೆಳೆ ನಾಶವಾದ್ದರಿಂದ ಮಾರುಕಟ್ಟಗೆ ನಿಗದಿತ ಪ್ರಮಾಣದಲ್ಲಿ ಮಾರು ಬಾರದಿರುವುದರಿಂದ ಬೆಲೆ ಹೆಚ್ಚಳವಾಗಿದೆ,.
ಮದುವೆ ಹಾಗೂ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿದ್ದು ಬೇಡಿಕೆ ಹೆಚ್ಚಾಗಿದೆ ಉತ್ಪಾದನೆ ಕಡಿಮೆಯಾಗಿದೆ ಹಾಗಾಗಿ ಬೆಲೆ ಹೆಚ್ಚಳವಾಗಿದೆ ಇನ್ನೂ ಕೆಲವು ದಿನಗಳ ಕಾಲ ಇದೆ ಬೆಲೆ ಇರಲಿದೆ ಎಂದು ತರಕಾರಿ ವ್ಯಾಪಾರಿಗಳುತಿಳಿಸಿದ್ದಾರೆ.