Thursday, December 5, 2024
Homeರಾಷ್ಟ್ರೀಯ | Nationalಟ್ರಕ್‌ಗೆ ಬಸ್ ಡಿಕ್ಕಿ, ಪ್ರಯಾಣಿಕ ಸಾವು

ಟ್ರಕ್‌ಗೆ ಬಸ್ ಡಿಕ್ಕಿ, ಪ್ರಯಾಣಿಕ ಸಾವು

Mumbai-Pune Expressway Accident MSRTC Bus Hits Truck

ಮುಂಬೈ, ಅ. 19 (ಪಿಟಿಐ) ಮುಂಬೈ- ಪುಣೆ ಎಕ್ಸ್‌ಪ್ರೆಸ್‌ ವೇಯಲ್ಲಿ ಇಂದು ಮುಂಜಾನೆ ಸರ್ಕಾರಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುಣೆ ಜೆಲ್ಲೆಯ ಲೋನಾವಾಲಾ ಬಳಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಥರ್ಡಿ ಡಿಪೋದಿಂದ (ಅಹ್ಮದ್‌ನಗರದಲ್ಲಿ) ಮುಂಬೈಗೆ ತೆರಳುತ್ತಿದ್ದಾಗ ಹಿಂದಿನಿಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳು ಒಂದೇ ದಿಕ್ಕಿನಲ್ಲಿ ಹೋಗುತ್ತಿದ್ದವು ಎಂದು ಅವರು ಹೇಳಿದರು.

ಘಟನೆಯಲ್ಲಿ ವಿಶ್ವನಾಥ ಭಗವಾನ್ ವಾಘಮಾರೆ ಎಂದು ಗುರುತಿಸಲಾದ ಪುರುಷ ಪ್ರಯಾಣಿಕ ಸಾವನ್ನಪ್ಪಿದ್ದು, ಏಳರಿಂದ ಎಂಟು ಪ್ರಯಾಣಿಕರಿಗೆ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾ ರೆ, ಈ ಮಾರ್ಗದಲ್ಲಿ ಸ್ವಲ್ಪ ಸಮಯದವರೆಗೆ ಸಂಚಾರ ಅಸ್ತವ್ಯಸ್ತವಾಗಿತ್ತು, ಆದರೆ ಅಧಿಕಾರಿಗಳು ಶೀಘ್ರದಲ್ಲೇ ಅದನ್ನು ತೆರವುಗೊಳಿಸಿದರು.

RELATED ARTICLES

Latest News