Sunday, February 23, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಅನಾರೋಗ್ಯದಿಂದ ಹೊಳೆನರಸೀಪುರ ಡಿವೈಎಸ್ಪಿ ಅಶೋಕ್‌ ನಿಧನ

ಅನಾರೋಗ್ಯದಿಂದ ಹೊಳೆನರಸೀಪುರ ಡಿವೈಎಸ್ಪಿ ಅಶೋಕ್‌ ನಿಧನ

Holenarasipur DySP Ashok passes away due to illness

ಹಾಸನ,ಫೆ.13 – ಹೊಳೆನರಸೀಪುರದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ್‌ ರವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದ ಅಶೋಕ್ (54) ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

2022 ರಲ್ಲಿ ರಾಷ್ಟ್ರಪತಿ ಪದಕ, 2023 ರಲ್ಲಿ ಕೇಂದ್ರ ಗೃಹಸಚಿವರ ಪದಕಕ್ಕೆ ಭಾಜನರಾಗಿದ್ದ ಅಶೋಕ್‌ ರವರು ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿಯವರು.

ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಶೋಕ್‌ ರವರು ಆಗಲಿದ್ದಾರೆ. ಇಂದು ಸಂಜೆ ಮೃತರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಡಿವೈಎಸ್ಪಿ ಅಶೋಕ್‌ ರವರ ನಿಧನಕ್ಕೆ ಎಸ್ಪಿ ಮಹಮ್ಮದ್ ಸುಜೀತಾ ಅವರು ಸಂತಾಪ ಸೂಚಿಸಿದ್ದಾರೆ.

RELATED ARTICLES

Latest News