Saturday, November 23, 2024
Homeಬೆಂಗಳೂರುಮತದಾನದ ದಿನದಂದು ಬೆಂಗಳೂರಲ್ಲಿ ಐಟಿ ಬಿಟಿ ಕಂಪನಿಗಳಿಗೆ ರಜೆ

ಮತದಾನದ ದಿನದಂದು ಬೆಂಗಳೂರಲ್ಲಿ ಐಟಿ ಬಿಟಿ ಕಂಪನಿಗಳಿಗೆ ರಜೆ

ಬೆಂಗಳೂರು,ಏ.16- ನಗರದಲ್ಲಿ ಮೊದಲ ಹಂತದ ಚುನಾವಣೆ ನಡೆಯುವ ಏ.26ರಂದು ಐಟಿ-ಬಿಟಿ ಸಂಸ್ಥೆಗಳಿಗೆ ರಜೆ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ಗಿರಿನಾಥ್ ಸೂಚಿಸಿದ್ದಾರೆ.

ಈ ಕುರಿತಂತೆ ಐಟಿಬಿಟಿ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿರುವ ಅವರು ನಗರದಲ್ಲಿ ಮತದಾನದ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶದಿಂದ ಎಲ್ಲಾ ಸಂಸ್ಥೆಗಳು ಮತದಾನದ ದಿನದಂದು ರಜೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಏ.26 ರಂದು ಸರ್ಕಾರ ಕೂಡ ರಜೆ ಘೋಷಣೆ ಮಾಡಿರುವುದರಿಂದ ಐಟಿ ಬಿಟಿ ಸಂಸ್ಥೆಗಳು ಅಂದು ರಜೆ ನೀಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ. ರಜೆ ನೀಡುವ ಸಂಬಂಧ ಇಂದು ಐಟಿಬಿಟಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿರುವ ಚುನಾವಣಾಧಿಕಾರಿಗಳು ಮತದಾನದಂದು ಕಡ್ಡಾಯವಾಗಿ ರಜೆ ಘೋಷಣೆ ಮಾಡಬೇಕು ಎಂದು ಔಟರ್ ರಿಂಗ್ ರೋಡ್ ಅಸೋಸಿಯೇಷನ್ ಗೆ ಪತ್ರ ಬರೆದಿದ್ದಾರೆ.

RELATED ARTICLES

Latest News