ಬೆಂಗಳೂರು,ಜ.16- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಉತ್ತರಕನ್ನಡ ಕ್ಷೇತ್ರದ ಅನಂತಕುಮಾರ್ ಹೆಗಡೆ ವಿರುದ್ಧ ಕುಮಟಾದಲ್ಲಿ ಎಫ್‍ಐಆರ್ ದಾಖಲಾಗಿದೆ. ಸಾಕ್ಷ್ಯ ಸಂಗ್ರಹಿಸಿ ಬಂಧಿಸಬೇಕೋ, ಬೇಡವೋ ಎಂಬುದನ್ನು ಸ್ಥಳೀಯ ಪೊಲೀಸರು ನಿರ್ಧರಿಸಲಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ದಾಖಲಾಗಿರುವ ಪ್ರಕರಣದ ಆಧಾರದ ಮೇಲೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಬಂಧಿಸಬೇಕೋ, ಬೇಡವೋ ಎಂಬುದನ್ನು ಸ್ಥಳೀಯವಾಗಿ ನಿರ್ಧರಿಸುತ್ತಾರೆ. ನಾವು ಸ್ಥಳೀಯ ಪೊಲೀಸರಿಗೆ ಯಾವುದೇ ರೀತಿಯ ನಿರ್ದೇಶನಗಳನ್ನು ನೀಡುವುದಿಲ್ಲ. ಅವರನ್ನು ಬಂಧಿಸಿ ಅಥವಾ ಬಿಟ್ಟುಬಿಡಿ ಎಂದು ನಾವು ಯಾರಿಗೂ ಹೇಳುವುದಿಲ್ಲ ಎಂದರು.
ಯಾವ ಸೆಕ್ಷನ್‍ನಡಿ ಪ್ರಕರಣ ದಾಖಲಿಸಿಕೊಳ್ಳಬೇಕು, ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಸ್ಥಳೀಯ ಪೊಲೀಸರೇ ನಿರ್ಧರಿಸುತ್ತಾರೆ.
ಮಥುರಾದ ಶಾಹಿ ಈದ್ಗಾ ಮಸೀದಿ ಸರ್ವೆಗೆ ಸುಪ್ರೀಂ ತಡೆ
ಕನ್ನಡಪರ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಈವರೆಗೂ ಯಾರೂ ಕೇಳಿಲ್ಲ. ಒಂದು ವೇಳೆ ಈ ನಿಟ್ಟಿನಲ್ಲಿ ಬೇಡಿಕೆಗಳು ಬಂದರೆ ಸರ್ಕಾರ ಸೂಕ್ತ ಉತ್ತರ ನೀಡಲಿದೆ. ಇಂದು ಪೊಲೀಸ್ ಹಿರಿಯ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಈ ವಿಚಾರ ಚರ್ಚೆಯಾಗುವುದಿಲ್ಲ. ಸಭೆಯ ಅಜೆಂಡಾವೇ ಬೇರೆ ಇದೆ ಎಂದು ಹೇಳಿದರು.
ಜೆಟ್‍ಲ್ಯಾಕ್ ಪಬ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು, ಕಾನೂನಾತ್ಮಕವಾಗಿ ಯಾವುದು ಸೂಕ್ತ, ಯಾವುದು ಕಾನೂನು ಬಾಹಿರ ಎಂಬುದನ್ನು ಸ್ಥಳೀಯ ಪೊಲೀಸರು ಮತ್ತು ಡಿಸಿಪಿ ನೋಡಿಕೊಳ್ಳುತ್ತಾರೆ.
ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಕರ್ನಾಟಕದ ವೀಣಾವಾದನ
ಗೃಹಸಚಿವನಾಗಿ ನಾನು ಕಾನೂನುಬಾಹಿರವಾಗಿದ್ದರೂ ಪರವಾಗಿಲ್ಲ ಬಿಟ್ಟುಬಿಡಿ ಎಂದು ಹೇಳಲು ಬರುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನಾತ್ಮಕವಾಗಿ ತೆಗೆದುಕೊಂಡ ಕ್ರಮಗಳನ್ನು ಸರ್ಕಾರ ಒಪ್ಪಿಕೊಳ್ಳಲಿದೆ ಎಂದು ಹೇಳಿದರು. ವಿರೋಧಪಕ್ಷಗಳು ಪ್ರತಿಯೊಂದು ಪ್ರಕರಣಕ್ಕೂ ಎಸ್‍ಐಟಿ ರಚಿಸಿ ಸಿಬಿಐ, ಸಿಐಡಿ ತನಿಖೆ ಮಾಡಿ ಎಂದು ಹೇಳುತ್ತಿರುತ್ತಾರೆ. ಅವರು ಹೇಳಿದಂತೆಲ್ಲಾ ಕೇಳುತ್ತಾ ಕುಳಿತರೆ ನಾವು ಆಡಳಿತ ಮಾಡಲಾಗುವುದಿಲ್ಲ. ಹಿಂದೆ ನಾವು ವಿರೋಧಪಕ್ಷದಲ್ಲಿದ್ದಾಗ ಸಾಕಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಅದನ್ನೆಲ್ಲಾ ಅವರು ಕೇಳಿದರೆ, ವಿರೋಧ ಪಕ್ಷದವರು ಹೇಳಿದಂತೆಲ್ಲಾ ಕೇಳುತ್ತಾ ಕೂರಲಾಗುವುದಿಲ್ಲ. ಜನಪರವಾಗಿ ಆಡಳಿತ ನೀಡುವುದಷ್ಟೇ ನಮ್ಮ ಆದ್ಯತೆ ಎಂದು ಹೇಳಿದರು.