Thursday, November 21, 2024
Homeಬೆಂಗಳೂರುಬೆಂಗಳೂರಿಗರೇ ಹುಷಾರ್, ಗ್ಲಾಂಡರ್ಸ್ ಸೋಂಕು ಮಾರಕವಾಗುವ ಸಾಧ್ಯತೆ..!

ಬೆಂಗಳೂರಿಗರೇ ಹುಷಾರ್, ಗ್ಲಾಂಡರ್ಸ್ ಸೋಂಕು ಮಾರಕವಾಗುವ ಸಾಧ್ಯತೆ..!

ಬೆಂಗಳೂರು,ಏ.18- ಡಿಜೆ ಹಳ್ಳಿಯ ಕುದುರೆಗಳಲ್ಲಿ ಕಾಣಿಸಿಕೊಂಡಿರುವ ಗ್ಲಾಂಡರ್ಸ್ ಸೋಂಕು ಇದೀಗ ಮಾರಣಾಂತಿಕವಾಗಿ ಪರಿವರ್ತನೆಯಾಗುವ ಸಾಧ್ಯತೆ ಇರುವುದರಿಂದ ಸಿಲಿಕಾನ್ ಸಿಟಿಗೆ ಮತ್ತೊಂದು ಸಾಂಕ್ರಾಮಿಕ ರೋಗ ಎಂಟ್ರಿ ಪಡೆದಂತಾಗಿದೆ.ಗ್ಲಾಂಡರ್ಸ್ ಎಂಬ ಮಾರಕ ಸಾಂಕ್ರಾಮಿಕ ರೋಗ ನಗರದಲ್ಲಿ ಉಲ್ಬಣಗೊಂಡಿದ್ದು, ಸಾವು-ನೋವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಾಣಿಗಳಿಂದ ಮನುಷ್ಯರಿಗೂ ಹರಡಲಿರುವ ಗ್ಲಾಂಡರ್ಸ್ ಸೋಂಕಿಗೆ ಇದುವರೆಗೂ ಯಾವುದೇ ಲಸಿಕೆ ಇಲ್ಲವೆ ಚಿಕಿತ್ಸೆ ಇಲ್ಲದಿರುವುದು ಆತಂಕವನ್ನು ಹೆಚ್ಚಿಸಿದೆ.ಡಿಜೆ ಹಳ್ಳಿಯಲ್ಲಿ ಮೊದಲು ಒಂದು ಕುದುರೆಯಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ನಂತರ ಇತರ ಮೂರು ಕುದುರೆಗಳಲ್ಲಿ ಕಂಡು ಬಂದಿದೆ. ರೋಗ ಲಕ್ಷಣ ಕಂಡುಬಂದ ಎರಡು ಕುದುರೆ ಗಳು ಈಗಾಗಲೇ ಮರಣ ಹೊಂದಿವೆ.

ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಡಿಜೆ ಹಳ್ಳಿಯ ಸುತ್ತಮುತ್ತ 5 ಕಿ.ಮೀಟರ್ ಪ್ರದೇಶವನ್ನು ಸೋಂಕಿತ ವಲಯ ಎಂದು ಘೋಷಣೆ ಮಾಡಲಾಗಿದೆ.ಈ ಗ್ಲಾಂಡರ್ಸ್ ರೋಗ ಪ್ರಾಣಿಗಳಿಂದ ಮನುಷ್ಯರಿಗೂ ಹರಡುವ ಅಂಟು ರೋಗವಾಗಿರುವುದರಿಂದ ಈ ಸೋಂಕನ್ನು ಪತ್ತೆ ಮಾಡಿ ನಿರ್ಮೂಲನೆ ಮಾಡಬೇಕಿದೆ. ಸದ್ಯ ರೋಗ ಹರಡದಂತೆ ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸಿದೆ ಹಾಗೂ ನಗರದಲ್ಲಿನ ಎಲ್ಲಾ ಕುದುರೆಗಳ ರಕ್ತ ಪರೀಕ್ಷೆಗೆ ಮುಂದಾಗಿದೆ.

ನಗರದ ಕುದುರೆ ಸ್ಟ್ಯಾಂಡ್. ರೇಸ್ ಕೋರ್ಸ್ನಲ್ಲಿರೋ ಎಲ್ಲಾ ಕುದುರೆಗಳ ಪರೀಕ್ಷೆ ಗೆ ಪಶುಪಾಲನೆ ಇಲಾಖೆ ಆದೇಶ ಹೊರಡಿಸಿದೆ.ಗ್ಲಾಂಡರ್ಸ್ ರೋಗ ಕುದುರೆಗಳು ಹಾಗೂ ಹೇಸರಗತ್ತೆಗಳಲ್ಲಿ ಕಂಡು ಬರುತ್ತವೆ. ಸೋಂಕು ಕಾಣಿಸಿಕೊಂಡ ಪ್ರಾಣಿಗಳ ಗಂಟಲಿನಲ್ಲಿ ಹುಣ್ಣು..ಗಾಯ ಕಂಡುಬರುತ್ತವೆ. ಕುದುರೆ ಮೂಗಿನಿಂದ ಹೊರ ಸೂಸುವ ದ್ರವದಿಂದ ಚರ್ಮದ ಮೇಲೆ ಗಂಟು ಕಾಣಿಸಿಕೊಳ್ಳುವುದು ಈ ಸೋಂಕಿನ ಲಕ್ಷಣಗಳಾಗಿವೆ ಎಂದು ಪಶುಪಾಲನೆ ಇಲಾಖೆ ನಿರ್ದೇಶಕ ರವಿಕುಮಾರ್ ತಿಳಿಸಿದ್ದಾರೆ.

RELATED ARTICLES

Latest News