Wednesday, May 1, 2024
Homeರಾಜ್ಯ"ದರಿದ್ರ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಇಸ್ಲಾಂಮೀಕರಣ ಹೆಚ್ಚಾಗಿದೆ" : ಆರ್.ಅಶೋಕ್ ಆಕ್ರೋಶ

“ದರಿದ್ರ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಇಸ್ಲಾಂಮೀಕರಣ ಹೆಚ್ಚಾಗಿದೆ” : ಆರ್.ಅಶೋಕ್ ಆಕ್ರೋಶ

ಬೆಂಗಳೂರು,ಏ.18- ಕಾಂಗ್ರೆಸ್ ಸರ್ಕಾರಕ್ಕೆ ಧಮ್ಮು, ತಾಕತ್ತು ಇದ್ದರೆ ಜೈಶ್ರೀರಾಮ್ ಎಂದು ಘೋಷಣೆ ಕೂಗಬಾರದೆಂದು ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿರುವವರ ಮೇಲೆ ಗೂಂಡಾ ಕಾಯ್ದೆಯಡಿ ದೂರು ದಾಖಲಿಸಿ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಬಹಿರಂಗ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬರು ದೇಶ ವಿಭಜನೆ ಬಗ್ಗೆ ಮಾತನಾಡುತ್ತಾರೆ. ಇನ್ನು ಕೆಲವರು ಜೈಶ್ರೀರಾಮ್ ಎಂದು ಕೂಗಬಾರದು. ಇಲ್ಲಿ ಅಲ್ಲಾವೋ ಎಂದು ಕೂಗಬೇಕೆಂದು ಜೀವ ಬೆದರಿಕೆ ಹಾಕುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಒಂದು ಮೂಲಭೂತವಾದಿಗಳ ಅಟ್ಟಹಾಸ , ಮತ್ತೊಂದು ಕಡೆ ದರಿದ್ರ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಿರಂತರವಾಗಿದೆ. ಲಕ್ಷ್ಮಣ ಸವದಿಯವರು ಮಲ್ಲಿಕಾರ್ಜುನ ಖರ್ಗೆ ಕೇಳಿ ಭಾರತ್ ಮಾತಾ ಕೀ ಜೈ ಎನ್ನಬಹುದಾ ಎನ್ನುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರಾಮ ದೇವರೇ ಅಲ್ಲ ಅಂತಾರೆ. ನಾನು ಮನೆಯಲ್ಲಿ ರಾಮನ ಫೋಟೋನೇ ಇಟ್ಟಿಲ್ಲ ಎನ್ನುತ್ತಾರೆ. ಹಿಂದೂಗಳು ಭಯದಿಂದ ಜೀವನ ಮಾಡುವಂತಹ ಪರಿಸ್ಥಿತಿ ಬಂದಿದೆ ಎಂದರು.

ಚಿಕ್ಕಪೇಟೆಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದರು. ಒಂದು ರೀತಿಯಲ್ಲಿ ಇವರಿಗೆ ಕಾಂಗ್ರೆಸ್ ನವರು ಬೆಂಬಲ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಈಗ ಅವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ನಮ್ಮನ್ನು ಹೇಳುವವರು, ಕೇಳುವವರು ಯಾರೂ ಇಲ್ಲ. ಏನು ಬೇಕಾದರೂ ಮಾಡಬಹುದೆಂಬ ಮನಸ್ಥಿತಿಗೆ ಕೆಲವು ಅಲ್ಪಸಂಖ್ಯಾತ ಮೂಲಭೂತವಾದಿಗಳು ಬಂದಿದ್ದಾರೆ. ಅಲ್ಲಾ ಅಕ್ಬರ್ ಎಂದು ಕೂಗಬೇಕು. ಜೈಶ್ರೀರಾಮ್ ಹೇಳಬಾರದು ಎಂದು ಬೆದರಿಕೆ ಹಾಕಿರುವವರ ವಿರುದ್ಧ ಸರ್ಕಾರ ಕೂಡಲೇ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ದೇಶದ್ರೋಹ ದೂರು ದಾಖಲಿಸಬೇಕೆಂದು ಒತ್ತಾಯಿಸಿದರು.

ಸಿಕ್ಕಿಬಿದ್ದಿರುವ ಆರೋಪಿಗಳು ಮದ್ಯ ಸೇವಿಸಿದ್ದರು. ಗಾಂಜಾ ಸೇವನೆ ಮಾಡಿದ್ದಾರೆ ಎಂದು ಪೊಲೀಸರು ಕಥೆ ಹೇಳಬಾರದು. ಮುಸ್ಲಿಮರು ಮುನಿಸಿಕೊಳ್ಳಬಹುದೆಂದು ಪೊಲೀಸರಿಗೆ ಒತ್ತಡ ಹಾಕುವ ಕೆಲಸವು ಸರ್ಕಾರದಿಂದ ನಡೆದಿದೆ. ಸುಳ್ಳು ನೆಪ ಹೇಳಿ ಅವರನ್ನು ಹೊರಬಿಟ್ಟರೆ ಮುಂದೆ ಇವರು ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲೂ ಹಿಂದೆಮುಂದೆ ನೋಡುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಆರೋಪಿಗಳನ್ನು ರಕ್ಷಿಸುವ ಕಾರ್ಯ ಸರ್ಕಾರದ ಮೇಲೆ ನಡೆಯುತ್ತಿದೆ. ಅವರ ವಿರುದ್ಧ ದೂರು ದಾಖಲಿಸಿದರೆ ಲೋಕಸಭೆ ಚುನಾವಣೆಯಲ್ಲಿ ಮತಗಳು ಕೈ ಕೊಡಬಹುದೆಂಬ ಆತಂಕ ಕಾಂಗ್ರೆಸ್ ಸರ್ಕಾರಕ್ಕಿದೆ. ಮುಸ್ಲಿಮರು ಏನೇ ಮಾಡಿದರೂ ಅವರನ್ನು ರಕ್ಷಣೆ ಮಾಡಲು ಕಾಗಕ್ಕ ಬೂಬಕ್ಕನ ಕಥೆ ಕಟ್ಟುತ್ತಾರೆ. ತನಿಖೆ ನಡೆಯುವ ಮೊದಲೇ ಗಾಂಜಾ ಸೇವನೆ ಮಾಡಿದ್ದರು, ಮದ್ಯಪಾನ ಸೇವಿಸಿದ್ದು, ಮಾನಸಿಕವಾಗಿ ಅಸ್ವಸ್ಥರು ಎಂದು ತನಿಖೆಯಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ, ಇಲ್ಲಿ ಮುಸ್ಲಿಂ ಮೂಲಭೂತವಾದಿಗಳ ಆಟ ನಡೆಯುವುದಿಲ್ಲ. ಸುಳ್ಳು ಕಾರಣಗಳನ್ನು ಕೊಟ್ಟು ಆರೋಪಿಗಳನ್ನು ಬಿಟ್ಟು ಕಳುಹಿಸಿದರೆ ನಾವು ಸುಮ್ಮನಿರುವುದಿಲ್ಲ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು. ಸಿದ್ದರಾಮಯ್ಯ ನವರ ಸರ್ಕಾರ ಬಂದಮೇಲೆ ರಾಜ್ಯದಲ್ಲಿ ದಿನೇದಿನೇ ಇಸ್ಲಾಮಿಕ್ ಸಂಘಟನೆಗಳು, ಪಾಕಿಸ್ತಾನ ಬೆಂಬಲಿತ ಕಾರ್ಯಕರ್ತರು, ಟಿಪ್ಪು ಸಿದ್ಧಾಂತ ಇಟ್ಟುಕೊಂಡಿರುವವರು ಹೆಚ್ಚಾಗಿದ್ದಾರೆ. ಭಯೋತ್ಪಾದನಾ ಚಟುವಟಿಕೆ, ಇಸ್ಲಾಮೀಕರಣ, ಮತೀಯ ಧೋರಣೆ ಹೆಚ್ಚಾಗಿದೆ.

ಕಾಂಗ್ರೆಸ್‍ನವರು ಹಿಂದೂಗಳನ್ನು ಬೈದು ಬೈದು ಇಸ್ಲಾಂಮೀಕರಣ ಜಾಸ್ತಿಯಾಗಿದೆ. ಗೂಡಾಗಿರಿ ಮಾಡುವ ವ್ಯಕ್ತಿಗಳನ್ನು ನಿಯಂತ್ರಣದಲ್ಲಿ ಇಡುವುದನ್ನು ಬಿಟ್ಟು, ಪರೋಕ್ಷವಾಗಿ ಸರ್ಕಾರ ಬೆಂಬಲ ಕೊಡುತ್ತಿದೆ, ನೀವು ಏನಾದರೂ ಮಾಡ್ಕೊಳ್ಳಿ ವೋಟ್ ಹಾಕಿ ಅನ್ನುತ್ತಾರೆ. ಕಾಂಗ್ರೆಸ್‍ನವರ ಸಪೋರ್ಟ್‍ನಿಂದ ಇಸ್ಲಾಂ ಮೂಲಭೂತವಾದಿಗಳು ಮಿತಿಮೀರಿದ್ದಾರೆ.
ಸಿದ್ದರಾಮಯ್ಯ ನವರು ಇವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ. ಅರೆಸ್ಟ್ ಮಾಡಿದ್ದೀರಿ ಬಿರಿಯಾನಿ ಕೊಡುತ್ತೀರಿ, ಬಿಟ್ಟು ಕಳಿಸುತೀರಾ? ಈ ಮೂಲಭೂತ ವಾದ ರಾಜ್ಯಕ್ಕೆ ಅಪಾಯ ತಂದೊಡ್ಡುತ್ತದೆ. ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟ. ಏನಾಗುತ್ತಿದೆ ಇಲ್ಲಿ? ಎಂದು ಆತಂಕ ವ್ಯಕ್ತಪಡಿಸಿದರು.

ಪಿಎಸ್‍ಐ ಹಗರಣ ಕಿಂಗ್‍ಪಿನ್ ಬಿ.ಆರ್.ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಕಿಂಗ್‍ಪಿನ್ ಜತೆ ಗುರುತಿಸಿಕೊಳ್ಳುವುದು ಬೇರೆ, ಮತ ಕೇಳುವುದು ಬೇರೆ. ಚುನಾವಣೆ ವೇಳೆ ಮತ ಕೇಳುವುದು ಧರ್ಮ, ಎಲ್ಲರನ್ನೂ ಕೇಳುತ್ತೇವೆ ಎಂದು ಸಮರ್ಥಿಸಿಕೊಂಡರು.

RELATED ARTICLES

Latest News