Tuesday, March 18, 2025
Homeರಾಜ್ಯಕಚೇರಿಗೆ ನುಗ್ಗಿ ಬಿಜೆಪಿ ಮುಖಂಡನಿಗೆ ಕಾಂಗ್ರೆಸ್ ನಾಯಕರಿಂದ ಧಮ್ಕಿ

ಕಚೇರಿಗೆ ನುಗ್ಗಿ ಬಿಜೆಪಿ ಮುಖಂಡನಿಗೆ ಕಾಂಗ್ರೆಸ್ ನಾಯಕರಿಂದ ಧಮ್ಕಿ

ಬೆಂಗಳೂರು, ಏ.18- ಏಕಾಏಕಿ ಬಿಜೆಪಿ ಕಚೇರಿಗೆ ನುಗ್ಗಿ ಇಲ್ಲಿ ಪ್ರಚಾರ ಮಾಡಬಾರದು, ಟೇಬಲ್ ಹಾಕಂಗಿಲ್ಲ, ನಾವು ಹೇಳಿದಂತೆ ಕೇಳಿದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬಿಜೆಪಿ ಮುಖಂಡನಿಗೆ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ಹಾಗೂ ಇತರರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬೇಗೂರು ವಾರ್ಡಿನ ಬಿಜೆಪಿ ಮುಖಂಡರಾದ ದೊಡ್ಡಕಮ್ಮನಹಳ್ಳಿ ನಿವಾಸಿ ಅಭಿಷೇಕ್ ಅವರು ನಿನ್ನೆ ರಾತ್ರಿ 8 ಗಂಟೆ ಸುಮಾರಿನಲ್ಲಿ ಆಂಜನೇಯ ದೇವಾಲದ ಸಮೀಪ ಬಿಜೆಪಿ ಕಚೇರಿಯಲ್ಲಿ ಸ್ನೇಹಿತರೊಂದಿಗೆ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದರು.

ಆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕಮ್ಮನಹಳ್ಳಿ ಶ್ರೀನಿವಾಸ್ ತನ್ನ ಹಿಂಬಾಲಕರೊಂದಿಗೆ ಹೋಗಿ ಏಕಾಏಕಿ ಕಚೇರಿಯೊಳಗೆ ನುಗ್ಗಿ ಅಭಿಷೇಕ್ ಅವರಿಗೆ ಧಮ್ಕಿ ಹಾಕಿದ್ದಾರೆ.ಆ ವೇಳೆ ಆತಂಕಗೊಂಡು ಕಚೇರಿಯಿಂಧ ಹೊರ ಬರಲು ಅಭಿಷೇಕ್ ಹಾಗೂ ಸ್ನೇಹಿತ ಮಂಜುನಾಥ್ ಯತ್ನಿಸಿದಾಗ ಅವರನ್ನು ತಡೆದು ಹಲ್ಲೆ ನಡೆಸಿ, ನೀವಿಲ್ಲಿ ಬಿಜೆಪಿ ಪರ ಪ್ರಚಾರ ಮಾಡಂಗಿಲ್ಲ, ಟೇಬಲ್ ಹಾಕಬಾರದು, ಒಂದು ವೇಳೆ ನಾನು ಹೇಳಿದ ಹಾಗೆ ಕೇಳದಿದ್ದರೆ ಪರಿಣಾಮ ಬೇರೆ ರೀತಿಯೇ ಆಗುತ್ತದೆ ಎಂದು ಬೆದರಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ವರ್ತನೆಯಿಂದ ಆತಂಕಗೊಂಡ ಅಭಿಷೇಕ್ ಅವರು ತಕ್ಷಣ ಹುಳಿಮಾವು ಪೊಲೀಸರಿಗೆ ದೂರು ನೀಡಿ ಬೆದರಿಕೆ ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News