ಕೊರಟಗೆರೆ, ಫೆ.8- ಸಂಸಾರಿಕ ಜೀವನದಲ್ಲಿ ಜಿಗುಪ್ಸೆಗೊಂಡು, ದಂಪತಿ ನಡುವೆ ಸಾಮರಸ್ಯವಿಲ್ಲದೆ ಗಂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಕೊರಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಮದ ನಂಜೇಗೌಡ ಎಂಬುವನೇ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. ಈತ ಹೆಂಡತಿ ಲಾವಣ್ಯಳಿಂದ ಬಹಳಷ್ಟು ಕಿರುಕುಳ ಅನುಭವಿಸಿ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ನಂಜೇಗೌಡ ಇತ್ತೀಚಿಗಷ್ಟೇ ತುಮಕೂರಿನಲ್ಲಿ ದೊಡ್ಡ ಮನೆಯೊಂದನ್ನು ಕಟ್ಟಿ ಗೃಹಪ್ರವೇಶ ನಡೆಸಿ ಸ್ವಗ್ರಾಮದಲ್ಲಿ ಕೋಳಿ ಫಾರಂ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈತನಿಗೆ ಸ್ವಗ್ರಾಮ ಅರಸಾಪುರಕ್ಕೆ ಹೋಗದಂತೆ ಹೆಂಡತಿ ಲಾವಣ್ಯ ಹಲವು ಬಾರಿ ನಿಬಂಧನೆಗಳನ್ನು ವಿಧಿಸಿ ಪದೇಪದೇ ಇದೇ ವಿಚಾರಕ್ಕೆ ಜಗಳವಾಡುತ್ತಿದ್ದರು ಎನ್ನಲಾಗಿದೆ.
ತಂದೆ ತಾಯಿ ಜೊತೆ ಬಿಡದೆ ಗಂಡನನ್ನ ಪದೇ ಪದೇ ತಡೆಯುತ್ತಿದ್ದ ಹೆಂಡತಿಯ ಕಿರುಕುಳ ತಾಳಲಾರದೆ ಮಗ ಆತಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಿದ್ದು ಕಂಡುಬಂತು. ಒಟ್ಟಾರೆ ಸಂಸಾರಿಕ ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ಅಂತ್ಯ ಕಂಡಿರುವುದು ಶೋಚನೀಯ ವಿಚಾರವಾಗಿದೆ.