ಚಿಕ್ಕಮಗಳೂರು,ಅ.15-ಹೆಂಡತಿಯನ್ನುಕೊಂದು ಶವವನ್ನು ಕೊಳವೇ ಬಾವಿಯಲ್ಲಿ ಹೂತು ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು, ಭಾರತಿ (28) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.ಒಂದೂವರೆ ತಿಂಗಳ ಹಿಂದೆ ನಡೆದಿದ್ದು ಪ್ರಕರಣ, ತನಿಖೆಯಲ್ಲಿ ಗಂಡನೇ ಹಂತಕ ಎನ್ನುವುದು ಬಹಿರಂಗವಾಗಿದೆ. ತವರಿಗೆ ಹೊರಟಿದ್ದ ಪತ್ನಿ ಭಾರತಿ ಕೆನ್ನೆಗೆ ಪತಿ ವಿಜಯ್ ಹೊಡೆದಿದ್ದರಿಂದ ಆಕೆ ಮೃತಪಟ್ಟಿದ್ದಾಳೆ.
ಬಂಧನದ ಭೀತಿಯಿಂದ ಪತ್ನಿಯ ಶವವನ್ನು ತಮ ತೋಟದ ಕೊಳವೆ ಬಾವಿಯಲ್ಲಿ ಹೂತುಹಾಕಿ ಕಡೂರು ಠಾಣೆಗೆ ಪತ್ನಿ ನಾಪತ್ತೆಯಾಗಿದ್ದಾಳೆಂದು ವಿಜಯ್ ದೂರು. ಒಂದೂವರೆ ತಿಂಗಳ ನಂತರ ಪೊಲೀಸರ ತನಿಖೆಯಲ್ಲಿ ಪತಿ ವಿಜಯೇ ಹಂತಕನೆಂದು ತನಿಖೆಯಿಂದ ಸಾಬೀತು ಆಗಿದೆ.
ಕಡೂರು ಪೊಲೀಸರಿಂದ ವಿಜಯ್, ಅತ್ತೆ ತಾಯಮ, ಮಾವ ಗೋವಿಂದಪ್ಪ ಬಂಧನಕ್ಕೆ ಒಳಗಾಗಿದ್ದಾರೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಲಾಗಿದೆ.ದೇವರಿಗೆ ಪೂಜೆ, ನನ್ನ ಹೆಂಡತಿ ದೆವ್ವ ಆಗಬಾರದು,ಪ್ರಕರಣ ಬೆಳಕಿಗೆ ಬರಬಾರದು, ಒಂದು ವೇಳೆ ಬಂದ್ರು ಕೋರ್ಟ್‌ನಲ್ಲಿ ಕೇಸ್ ನಿಲ್ಲಿಬಾರದೆಂದು ತಗಡಿನ ಶೀಟ್‌ನಲ್ಲಿ ಹೆಂಡತಿಯ ಹೆಸರು ಬರೆದು, ಫೋಟೋವನ್ನು ಮರಕ್ಕೆ ಮೊಳೆ ಹೊಡೆದು ಅಂಟಿಸಿದ್ದ. ಆದರೂ ಕರ್ಮ ಬಿಡಲಿಲ್ಲ. ಕೊನೆಗೆ ಕಿರಾತಕ ಪತಿ ಸಿಕ್ಕಿ ಹಾಕಿಕೊಂಡಿದ್ದಾನೆ.