Thursday, December 5, 2024
Homeಬೆಂಗಳೂರುಶೀಲ ಶಂಕಿಸಿ ಪತ್ನಿಯನ್ನು ಕೊಂದು ಪರಾರಿಯಾದ ಪತಿ

ಶೀಲ ಶಂಕಿಸಿ ಪತ್ನಿಯನ್ನು ಕೊಂದು ಪರಾರಿಯಾದ ಪತಿ

Husband kills wife in Bengaluru

ಬೆಂಗಳೂರು, ನ.24– ಶೀಲ ಶಂಕಿಸಿ ಪತ್ನಿಯ ಕುತ್ತಿಗೆಯನ್ನು ವೇಲ್ನಿಂದ ಬಿಗಿದು ಕೊಂದು ಪತಿ ಪರಾರಿಯಾಗಿರುವ ಘಟನೆ ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಗೊಂಡನಹಳ್ಳಿ 3ನೆ ಮುಖ್ಯರಸ್ತೆ ನಿವಾಸಿ ಗೌಸಿಯಾಬಿ (31) ಕೊಲೆಯಾದ ಗೃಹಿಣಿ.

ವೆಲ್ಡಿಂಗ್ ಕೆಲಸ ಮಾಡುವ ಇಮ್ರಾನ್ ಖಾನ್ ಎಂಬುವವರನ್ನು ವಿವಾಹವಾಗಿದ್ದು, ಇವರಿಗೆ ನಾಲ್ಕು ವರ್ಷದ ಗಂಡುಮಗುವಿದೆ.ಕಳೆದ ಶುಕ್ರವಾರ ದಂಪತಿ ನಡುವೆ ಜಗಳ ನಡೆದು ಪತಿ ಆಕೆಯ ಮೇಲೆ ಹಲ್ಲೆ ನಡೆಸಿ ವೇಲ್ನಿಂದ ಕುತ್ತಿಗೆ ಬಿಗಿದು ಗೌಸಿಯಾಬಿ ಅವರನ್ನು ಕೊಂದು ಮನೆಯ ಬಾಗಿಲು ಮುಚ್ಚಿಕೊಂಡು ಪರಾರಿಯಾಗಿದ್ದಾನೆ.

ನಿನ್ನೆ ರಾತ್ರಿ ಗೌಸಿಯಾಬಿ ಅವರ ಸಹೋದರ ಮೊಬೈಲ್ ಕರೆ ಮಾಡಿದಾಗ ಆಕೆ ಸ್ವೀಕರಿಸದಿದ್ದಾಗ ಮನೆಗೆ ಬಂದು ನೋಡಿದಾಗ ಬಾಗಿಲು ಮುಚ್ಚಿರುವುದು ಕಂಡುಬಂತು. ನಂತರ ಬಲವಂತವಾಗಿ ಬಾಗಿಲು ತಳ್ಳಿ ಒಳಹೋಗಿ ನೋಡಿದಾಗ ಸೋದರಿ ಸತ್ತು ಬಿದ್ದಿರುವುದನ್ನು ನೋಡಿ ಆತಂಕಗೊಂಡಿದ್ದಾರೆ.

ನಂತರ ಅವರು ಚಂದ್ರಾಲೇಔಟ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕೊಲೆ ಮಾಡಿ ಪರಾರಿಯಾಗಿರುವ ಇಮ್ರಾನ್ಖಾನ್ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News