Wednesday, April 2, 2025
HomeUncategorizedಪತ್ನಿ-ಪ್ರಿಯಕರರಿಂದ ಕೊಲೆಗೆ ಷಡ್ಯಂತ್ರ, ರಕ್ಷಣೆ ಕೋರಿ ಸಿಎಂಗೆ ಪತಿ ಪತ್ರ

ಪತ್ನಿ-ಪ್ರಿಯಕರರಿಂದ ಕೊಲೆಗೆ ಷಡ್ಯಂತ್ರ, ರಕ್ಷಣೆ ಕೋರಿ ಸಿಎಂಗೆ ಪತಿ ಪತ್ರ

ಭೂಪಾಲ್‌,ಮಾ.31- ನನ್ನ ಹೆಂಡತಿಗೆ ಒಬ್ಬನಲ್ಲ. ನಾಲ್ವರು ಪ್ರಿಯಕರರಿದ್ದು, ಅವರೊಂದಿಗೆ ಸೇರಿ ನನ್ನ ಮಗನನ್ನು ಕೊಲ್ಲಲು ಪತ್ನಿ ಷಡ್ಯಂತ್ರ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಪತಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ಗೆ ಪತ್ರ ಬರೆದಿದ್ದಾನೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 38 ವರ್ಷದ ವ್ಯಕ್ತಿಯೊಬ್ಬ, ತನ್ನ ಪತ್ನಿಯ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದು, ಈಗಾಗಲೇ ಚಿಕ್ಕ ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾಳೆ. ಈಗ ನನ್ನ ಕೊಲ್ಲಲು ಕೂಡ ಸಂಚು ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ.

ನನ್ನ ಪತ್ನಿಯ ಬಾಯ್‌ಫ್ರೆಂಡ್‌ಗಳು ನನ್ನನ್ನು ಸಾಯಿಸುತ್ತಾರೆ. ಇತ್ತೀಚೆಗೆ ಈ ಹಿಂದೆ ಗಂಡನನ್ನು ಹತ್ಯೆ ಮಾಡಿ ಡ್ರಮ್‌ನಲ್ಲಿ ತುಂಬಿಸಿದ ಮೀರತ್‌ನಲ್ಲಿ ನಡೆದ ಮಾದರಿಯಲ್ಲೇ ಹತ್ಯೆಗೆ ಪ್ಲ್ಯಾನ್‌ ಮಾಡಿದ್ದಾರೆ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

ಸಂತ್ರಸ್ತ ಹೇಳುವ ಪ್ರಕಾರ ಈಗಾಗಲೇ ಆತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನಂತೆ. ಆದರೆ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ನಾನೀಗ ನಿಸ್ಸಾಹಯಕನಾಗಿದ್ದೇನೆ ಎಂದು ಗ್ವಾಲಿಯರ್‌ನ ಪುಲ್‌ಭಾಗ್‌ ರಸ್ತೆಯ ನಡುವೆ ಕುಳಿತು ಪ್ರತಿಭಟನೆ ಮಾಡಿದ್ದಾನೆ. ಸಿಎಂಗೆ ಪತ್ರ ಬರೆದು ನನ್ನ ನೋವನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ನನಗೆ ನ್ಯಾಯ ಒದಗಿಸುತ್ತಾರೆ ಎಂದು ಭರವಸೆಯಿಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾನೆ.

RELATED ARTICLES

Latest News