Friday, November 22, 2024
Homeರಾಜಕೀಯ | Politicsನನ್ನ ಬದ್ಧತೆ, ನಿಲುವು ಮಂಡ್ಯದ ವಿಷಯದಲ್ಲಿ ಬದಲಾಗುವುದಿಲ್ಲ : ಸಂಸದೆ ಸುಮಲತಾ

ನನ್ನ ಬದ್ಧತೆ, ನಿಲುವು ಮಂಡ್ಯದ ವಿಷಯದಲ್ಲಿ ಬದಲಾಗುವುದಿಲ್ಲ : ಸಂಸದೆ ಸುಮಲತಾ

ಬೆಂಗಳೂರು,ಜ.30-ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿರುವ ಸಂಸದೆ ಸುಮಲತಾ, ಒಂದು ವೇಳೆ ಜೆಡಿಎಸ್ ನಾಯಕರು ಮಾತುಕತೆಗೆ ಮುಂದಾಗಿದ್ದಾದರೆ ಸ್ವಾಗತಿಸುತ್ತೇನೆ. ಆದರೆ ನನ್ನ ಬದ್ಧತೆ ಮತ್ತು ನಿಲುವು ಮಂಡ್ಯದ ವಿಷಯದಲ್ಲಿ ಬದಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ರಾಜಕಾರಣಕ್ಕೆ ಬಂದಿದ್ದೇ ಮಂಡ್ಯಗೋಸ್ಕರ. ಹೀಗಾಗಿ ಈ ಕ್ಷೇತ್ರವನ್ನು ಹೊರತುಪಡಿಸಿ ಬೇರೆ ಯಾವ ಕ್ಷೇತ್ರ ಅಥವಾ ಹುದ್ದೆಗಳ ಬಗ್ಗೆಯೂ ಆಸಕ್ತಿ ಇಲ್ಲ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಸಂಭಾವನೀಯ ಅಭ್ಯರ್ಥಿಯಾಗುವ ಅಥವಾ ರಾಜ್ಯಸಭೆಗೆ ನೇಮಕವಾಗುವ ಸಾಧ್ಯತೆಯನ್ನು ತಳ್ಳಿಹಾಕಿದರು.+

ಅಂತರ್ಧರ್ಮೀಯ ದಂಪತಿಗಳ ಭದ್ರತೆಗೆ ಆಗ್ರಹಿಸಿದ ಅರ್ಜಿ ವಜಾ

ಜೆಡಿಎಸ್-ಬಿಜೆಪಿ ಮೈತ್ರಿಯ ಬಳಿಕ ರಾಜಕೀಯ ಬೆಳವಣಿಗೆಗಳನ್ನು ಕಾದುನೋಡುತ್ತಿದ್ದೇನೆ. ಇದೊಂದು ವಿಚಿತ್ರವಾದ ಸನ್ನಿವೇಶ ಸೃಷ್ಟಿಯಾಗಿದೆ. ಬಿಜೆಪಿ ನಾಯಕರು ಅದನ್ನು ಹೇಗೆ ಬಗೆಹರಿಸುತ್ತಾರೆ ಎಂದು ಗೊತ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ತಮ್ಮೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ನಾಯಕರ ಭೇಟಿಗೆ ಸಮಯ ಸಿಕ್ಕರೆ ಅವರೊಂದಿಗೂ ಮಾತುಕತೆ ನಡೆಸುತ್ತೇನೆ. ಆದರೆ ನನ್ನ ಬಗ್ಗೆ ಈಗಾಗಲೇ ರಾಷ್ಟ್ರೀಯ ನಾಯಕರಿಗೆ ಎಲ್ಲಾ ಮಾಹಿತಿ ಗೊತ್ತಿದೆ. ವಿಶೇಷವಾಗಿ ನಾನು ಮನವರಿಕೆ ಮಾಡಿಕೊಡಬೇಕಿಲ್ಲ ಎಂದರು.

ಕುಮಾರಸ್ವಾಮಿಯವರು ಮಾತುಕತೆಗೆ ಮುಂದಾಗುವುದು ಅಥವಾ ತಮ್ಮ ಮನೆಗೆ ಬರುವುದಾದರೆ ಗೌರವಪೂರ್ವಕವಾಗಿಯೇ ಸ್ವಾಗತಿಸುತ್ತೇನೆ. ಕಳೆದ 30 ವರ್ಷಗಳಲ್ಲಿ ಅನೇಕ ಬಾರಿ ನಮ್ಮ ಮನೆಗೆ ಬಂದಿದ್ದಾರೆ. ಈ ಸಂದರ್ಭದಲ್ಲೂ ಅವರನ್ನು ಆತ್ಮೀಯವಾಗಿಯೇ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಭೇಟಿಯಾದಾಗಲೆಲ್ಲಾ ನೀವು ನಮ್ಮ ಪಕ್ಷದಲ್ಲಿರಬೇಕು ಎಂದು ಹೇಳುತ್ತಾರೆ. ಅಂಬರೀಶ್‍ರವರು 25 ವರ್ಷ ಕಾಂಗ್ರೆಸ್‍ನಲ್ಲಿದ್ದರು. ಹೀಗಾಗಿ ನನಗೆ ಆ ಪಕ್ಷ ಅಪರಿಚಿತವೇನಲ್ಲ. ಆದರೆ ಕಾಂಗ್ರೆಸ್ ಸೇರುವ ಕುರಿತಂತೆ ಯಾವುದೇ ಚರ್ಚೆಗಳನ್ನು ಅಥವಾ ವಿಶೇಷ ಸಭೆಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಟಿಪಿಕಲ್ ರಾಜಕಾರಣಿಯಂತೆ ಸ್ವಾರ್ಥಕ್ಕಾಗಿ ಪದೇಪದೇ ಪಕ್ಷ ಬದಲಿಸುವುದು, ಅವಕಾಶಗಳ ಬೆನ್ನತ್ತಿ ಹೋಗುವುದನ್ನು ಮಾಡುವುದಿಲ್ಲ. ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಆ ನಿಲುವಿಗೆ ಬದ್ಧಳಾಗಿದ್ದೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆಯೋ, ಇಲ್ಲವೋ, ಸಿಗದೇ ಇದ್ದರೆ ಏನೆಲ್ಲಾ ಮಾಡಬೇಕೆಂಬುದರ ಕುರಿತು ಸದ್ಯಕ್ಕೆ ಪ್ರತಿಕ್ರಿಯಿಸುವುದಿಲ್ಲ. ಸಮಯ ಬಂದಾಗ ಉತ್ತರಿಸುತ್ತೇನೆ ಎಂದರು.

ದ್ವೇಷದ ಬಿರುಗಾಳಿಯಲ್ಲಿ ಸತ್ಯದ ಜ್ವಾಲೆ ನಂದಿಸಲು ಬಿಡಬಾರದು : ಕಾಂಗ್ರೆಸ್

ಮಂಡ್ಯ ಜಿಲ್ಲೆಯ ಕೆರಗೋಡು ಧ್ವಜ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲಾಗಿಲ್ಲ. ಲೆಟರ್ ಆಫ್ ಲಾ, ಮೋರ್‍ದ್ಯಾನ್ ಸ್ಪಿರಿಟ್ ಆಫ್ ಲಾ ಎಂಬ ಮಾತಿದೆ. ಹಾಗಾಗಿ ಮಂಡ್ಯದಲ್ಲಿ ಕಳೆದ 5 ವರ್ಷಗಳಿಂದಲೂ ನಾನು ಅಕ್ರಮ ಗಣಿಗಾರಿಕೆ ವಿಚಾರವಾಗಿ ಹೋರಾಟ ಮಾಡುತ್ತಿದ್ದೇನೆ. ಎಲ್ಲವನ್ನೂ ಕಾನೂನು ಪ್ರಕಾರವಾಗಿಯೇ ಮಾಡುವುದಾದರೆ ಬಹಳಷ್ಟು ಸಮಸ್ಯೆಗಳನ್ನು ಕಾನೂನು ದೃಷ್ಟಿಯಿಂದಲೇ ನೋಡಬೇಕು. ಆದರೆ ಜನರ ಭಾವನೆಗಳು ಎಲ್ಲದಕ್ಕಿಂತಲೂ ಮಿಗಿಲಾದುದು ಎಂದರು.

RELATED ARTICLES

Latest News