ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆಗೆ ಮಹೂರ್ತ ಫಿಕ್ಸ್..?

ಬೆಂಗಳೂರು,ಮಾ.9- ಕಳೆದ ಹಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯೆ ಸುಮಲತಾ ಅಂಬರೀಶ್ ಕೊನೆಗೂ ಬಿಜೆಪಿ ಸೇರಲು ವೇದಿಕೆ ಸಿದ್ದವಾಗಿದೆ.ಸುಮಲತಾ ಅಂಬರೀಶ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ವರಿಷ್ಠರು ಹಸಿರುನಿಶಾನೆ ತೋರಿದ್ದು, ಎಲ್ಲವೂ ನಿರೀಕ್ಷೆ ಯಂತೆ ನಡೆದರೆ ಶುಕ್ರವಾರವೇ ಬಿಜೆಪಿಗೆ ಸೇರ್ಪಡೆಯಾಗುವ ಸಾದ್ಯತೆ ಇದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಮಂಡ್ಯದ ನಿವಾಸದಲ್ಲಿ ಸುಮಲತ ಅಂಬರೀಶ್ ಪತ್ರಿಕಾಗೋಷ್ಠಿ ಕರೆದಿದ್ದು ತಮ್ಮ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ಅವರು ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ. […]