Saturday, July 20, 2024
Homeರಾಜ್ಯವಿಡಿಯೋಗಳನ್ನು ಕಾಂಗ್ರೆಸ್‌ನವರಿಗೆ ನಾನು ಕೊಟ್ಟಿಲ್ಲ : ಕಾರು ಚಾಲಕ ಕಾರ್ತಿಕ್‌ ಸ್ಪಷ್ಟನೆ

ವಿಡಿಯೋಗಳನ್ನು ಕಾಂಗ್ರೆಸ್‌ನವರಿಗೆ ನಾನು ಕೊಟ್ಟಿಲ್ಲ : ಕಾರು ಚಾಲಕ ಕಾರ್ತಿಕ್‌ ಸ್ಪಷ್ಟನೆ

ಬೆಂಗಳೂರು, ಏ.30- ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋ ಮತ್ತು ಪೋಟೊಗಳನ್ನು ನಾನು ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಮಾತ್ರ ಕೊಟ್ಟಿದ್ದೇನೆ ಹೊರತು ಕಾಂಗ್ರೆಸ್‌ನವರಿಗೆ ಕೊಟ್ಟಿಲ್ಲ ಎಂದು ಪ್ರಜ್ವಲ್‌ ಅವರ ಕಾರಿನ ಮಾಜಿ ಚಾಲಕ ಕಾರ್ತಿಕ್‌ ಅವರು ಸ್ಪಷ್ಟ ಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ತಿಕ್‌ ಅವರು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ತುಣುಕು ಮಾಧ್ಯಮಕ್ಕೆ ಲಭ್ಯವಾಗಿದೆ. ನಾನು ಕಾಂಗ್ರೆಸ್‌ನವರಿಗೆ ಕೊಡುವುದಾಗಿದ್ದರೆ ದೇವರಾಜೇಗೌಡರ ಬಳಿ ಏಕೆ ಹೋಗುತ್ತಿದ್ದೆ. ಇವರಿಗೆ ಬಿಟ್ಟರೇ ವಿಡಿಯೋದ ಒಂದು ತುಣುಕನ್ನು ಯಾರಿಗೂ ಕೊಟ್ಟಿಲ್ಲ. ವಿನಾಕಾರಣ ಕಾಂಗ್ರೆಸ್‌ನವರ ಹೆಸರನ್ನು ಬೆರಸಬೇಡಿ ಎಂದು ಕಾರ್ತಿಕ್‌ ವಿಡಿಯೋದಲ್ಲಿ ಹೇಳಿದ್ದಾರೆ.

15 ವರ್ಷದಿಂದ ಪ್ರಜ್ವಲ್‌ ಹಾಗೂ ಅವರ ಕುಟುಂಬದ ಕಾರು ಚಾಲಕನಾಗಿ ನಾನು ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ನನ್ನ ಜಮೀನನ್ನು ಬರೆಸಿಕೊಂಡು ನನ್ನ ಹಾಗೂ ನನ್ನ ಪತ್ನಿ ಮೇಲೆ ಹಲ್ಲೆ ಮಾಡಿ ಹಿಂಸೆ ಕೊಟ್ಟರು. ಹಾಗಾಗಿ ನಾನು ಒಂದು ವರ್ಷದಿಂದೀಚೆಗೆ ಕೆಲಸ ಬಿಟ್ಟು ಅವರ ಮನೆಯಿಂದ ಹೊರ ಬಂದೆ. ಆ ಸಂದರ್ಭದಲ್ಲಿ ನನಗೆ ಯಾರೂ ನ್ಯಾಯ ಕೊಡಿಸಲಿಲ್ಲ. ಹಾಗಾಗಿ ಬಿಜೆಪಿ ಮುಖಂಡ ದೇವರಾಜೇಗೌಡ ಬಳಿ ಹೋಗಿ ತನಗಾದ ಅನ್ಯಾಯವನ್ನು ವಿವರಿಸಿದೆ.

ಅದೇ ಸಂದರ್ಭದಲ್ಲಿ ದೇವರಾಜೇಗೌಡ ಅವರು ಪ್ರಜ್ವಲ್‌ ಕುಟುಂಬದ ವಿರುದ್ಧ ಹೋರಾಟ ಮಾಡುತ್ತಿದ್ದರು. ನಿನ್ನ ಬಳಿ ಇರುವ ವಿಡಿಯೋ ಮತ್ತು ೇಟೊಗಳನ್ನು ನನಗೆ ಕೊಡು, ನಾನು ಯಾರಿಗೂ ತೋರಿಸುವುದಿಲ್ಲ ಎಂದು ಭರವಸೆ ನೀಡಿದ್ದರಿಂದ ಅವರ ಮಾತನ್ನು ನಂಬಿ ನನ್ನ ಬಳಿ ಇದ್ದ ವಿಡಿಯೋದ ಒಂದು ಕಾಪಿಯನ್ನು ಅವರಿಗೆ ಕೊಟ್ಟೆ.

ಆದರೆ ಅವರು ಅದನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಯಾರು ಪೆನ್‌ಡ್ರೈವ್‌ ಹಂಚಿದ್ದಾರೋ ಎಂಬುದು ನನಗೆ ಗೊತ್ತಿಲ್ಲ. ವಿನಾಕಾರಣ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಎಲ್ಲಾ ವಿಚಾರವನ್ನು ಎಸ್‌ಐಟಿ ಮುಂದೆ ಹೇಳುತ್ತೇನೆ ಎಂದು ಅವರು ವಿಡಿಯೋ ತುಣುಕಿನಲ್ಲಿ ತಿಳಿಸಿದ್ದಾರೆ.

RELATED ARTICLES

Latest News