Sunday, January 5, 2025
Homeರಾಜಕೀಯ | Politicsವಿಜಯೇಂದ್ರನನ್ನ ಭೇಟಿಯಾಗೊ ಅವಶ್ಯಕತೆ ನನಗಿಲ್ಲ : ಯತ್ನಾಳ್ ತಿರುಗೇಟು

ವಿಜಯೇಂದ್ರನನ್ನ ಭೇಟಿಯಾಗೊ ಅವಶ್ಯಕತೆ ನನಗಿಲ್ಲ : ಯತ್ನಾಳ್ ತಿರುಗೇಟು

I don't need to meet Vijayendra: Yatnal

ಬೆಂಗಳೂರು, ಜ.2-ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಯಾಗುವ ಅವಶ್ಯಕತೆ ನನಗಿಲ್ಲ, ಅವರಾಗಿಯೇ ಬಂದು ನನ್ನ ಜೊತೆ ಮಾತನಾಡಿಸಿದರೂ ನಾನು ಮಾತನಾಡುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು. ಒಂದು ವೇಳೆ ವಿಜಯೇಂದ್ರ ಅವರು ಮಾತನಾಡಿಸಿದರೆ ಮಾತನಾಡುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಏಕೆ ವಿಜಯೇಂದ್ರ ಅವರ ಜೊತೆ ಮಾತನಾಡಬೇಕು? ಹೈಕಮಾಂಡ್ ಕರೆದು ಮಾತನಾಡಿಸಿದರೆ ಮಾತನಾಡುತ್ತೇನೆ. ನಮಗೆ ಏನು ಅನ್ಯಾಯ ಆಗಿದೆ ಎಂಬುದು ನಮಗೆ ಗೊತ್ತಿದೆ. ನಮ ನೋವು ನಮಗೆ ಇದೆ.

ಹೈಕಮಾಂಡ್ ನಾಯಕರು ಕರೆದು ಮಾತಾಡಲಿ ಎಂದು ಹೇಳುತ್ತೇವೆ ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ವಿಜಯೇಂದ್ರ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಹೊಸ ವರ್ಷ ಯುಗಾದಿ. ವಿಜಯೇಂದ್ರ ಅವರಿಗೆ ಯಾವುದು ಹೊಸ ವರ್ಷ ಎಂಬುದು ನನಗೆ ಗೊತ್ತಿಲ್ಲ. ಪಕ್ಷದಿಂದ ನನ್ನ ಉಚ್ಚಾಟನೆ ಆಗುವುದಿಲ್ಲ. ಉಚ್ಚಾಟನೆ ಎನ್ನುವುದು ಮಾಧ್ಯಮಗಳು ಸೃಷ್ಟಿ ಮಾಡಿರುವುದು. ನನ್ನನ್ನ ಏಕೆ ಉಚ್ಚಾಟನೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು.

ನಾನು ಯಾರ ಜೊತೆಯೂ ಅಡ್ಜೆಸೆಂಟ್ ಮಾಡಿಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹದ್ ಖಾನ್ ಜೊತೆ ನನ್ನ ಅಡ್ಜೆಸೆಂಟ್ ಇಲ್ಲ. ವಿಜಯೇಂದ್ರಗೆ ದೆಹಲಿ ನಾಯಕರು ಪದೇ ಪದೇ ಅಪಾಯಿಟೆಂಟ್ ಕೊಡುತ್ತಿದ್ದಾರೆ. ಅದಕ್ಕೆ ಹೋಗುತ್ತಾರೆ. ಆದರೆ ನಾವು ಯಾರ ಅಪಾಯಿಟೆಂಟ್ ಅನ್ನು ಕೇಳಿಲ್ಲ.

ನಾವು ಯಾರ ಮೇಲೂ ದೂರು ಕೊಡುವುದಿಲ್ಲ. ನಮದು ಜನರ ಆಂದೋಲ. ನಮದು ದಿಲ್ಲಿ ಆಂದೋಲ ಅಲ್ಲ. ನನ್ನಂತ ಪಕ್ಷ ನಿಷ್ಠ ಯಾರು ಇಲ್ಲ. ನಾನು ಕಾಂಗ್ರೆಸ್ ಭಿಕ್ಷೆಯಿಂದ ಶಾಸಕನಾಗಿಲ್ಲ, ನಾನು ಹಿಂದೂಗಳಿಂದ, ಬಿಜೆಪಿಯಿಂದ ಶಾಸಕ ಆಗಿರೋದು. ವಿಜಯೇಂದ್ರ ಭೇಟಿಯಾಗುವ ಅವಶ್ಯಕತೆ ನನಗೆ ಇಲ್ಲ. ಯತ್ನಾಳ್ ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ವಕ್‌್ಫ ವಿಚಾರವಾಗಿ ಮಾತನಾಡಿ, ವಕ್ಫ್ ಎರಡನೇ ಹಂತದ ಪ್ರವಾಸ ನಾಳೆ ನಿರ್ಧಾರ ಮಾಡುತ್ತೇವೆ. ನಾಳೆ ನಡೆಯುವ ಸಭೆಯಲ್ಲಿ ನಿರ್ಧಾರ ಆಗುತ್ತದೆ. ನಮ ನಡೆ ಜನರ ಕಡೆಗೆ. ನಮ ನಡೆ ದೆಹಲಿ ಕಡೆಯಲ್ಲ ಎಂದು ತಿಳಿಸಿದರು.

RELATED ARTICLES

Latest News