Friday, November 22, 2024
Homeಕ್ರೀಡಾ ಸುದ್ದಿ | Sportsನಾನು ನಿವೃತ್ತಿ ಘೋಷಿಸಿಲ್ಲ : ಮೇರಿ ಕೋಮ್

ನಾನು ನಿವೃತ್ತಿ ಘೋಷಿಸಿಲ್ಲ : ಮೇರಿ ಕೋಮ್

ನವದೆಹಲಿ, ಜ.25- ಒಲಿಂಪಿಕ್ ಕಂಚಿನ ಪದಕ ವಿಜೇತೆ ಮತ್ತು ಆರು ಬಾರಿ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ನಿವೃತ್ತಿ ಘೋಷಣೆ ಕುರಿತ ವರದಿಯನ್ನು ತಳ್ಳಿಹಾಕಿದ್ದಾರೆ. ಹವ್ಯಾಸಿ ಬಾಕ್ಸಿಂಗ್‍ನಲ್ಲಿ ಸ್ರ್ಪಧಿಸಲು ವಯಸ್ಸಿನ ಅರ್ಹತೆಯನ್ನು ಮೀರಿರುವ ಮಣಿಪುರಿಯ 41 ವರ್ಷ ವಯಸ್ಸಿನ ಕೋಮ್ ಬಾಕ್ಸಿಂಗ್ ತ್ಯಜಿಸುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಬಂದಿತ್ತು.

ನಿವೃತಿ ಬಗ್ಗೆ ನನ್ನ ಮನಸ್ಸಿನಲ್ಲಿ ಮೂಡಿಲ್ಲ ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ ಕೆಲವರು ತಪ್ಪಾಗಿ ಉಲ್ಲೇಖಿಸಿದ್ದರೆ ನಾನು ಅದನ್ನು ಘೋಷಿಸಲು ಬಯಸಿದಾಗ ನಾನು ವೈಯಕ್ತಿಕವಾಗಿ ಮಾಧ್ಯಮಗಳ ಮುಂದೆ ಬರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಹವ್ಯಾಸಿ ಬಾಕ್ಸರ್‍ಗಳಿಗೆ 40 ವರ್ಷ ವಯೋಮಿತಿ ಕಡಿತಗೊಳಿಸಿದ್ದರಿಂದ ಆಕೆ ನಿವೃತ್ತಿಯಾಗಬೇಕಾಯಿತು ಎಂದು ಮತುಗಳು ಕೇಳಿಬಂದಿದ್ದವು.

ನಾನು ನಿನ್ನೆ ದಿಬ್ರುಗಢ್ (ಅಸ್ಸಾಂ) ನಲ್ಲಿ ನಡೆದ ಶಾಲಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ, ಅದರಲ್ಲಿ ನಾನು ಮಕ್ಕಳನ್ನು ಕ್ರೀಡೆಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಮಾತನಾಡುವಾಗ ನನಗೆ ಇನ್ನೂ ಕ್ರೀಡೆಯಲ್ಲಿ ಸಾಧನೆ ಮಾಡುವ ಹಸಿವು ಇದೆ ಆದರೆ ಒಲಿಂಪಿಕ್ಸ್‍ನಲ್ಲಿ ವಯಸ್ಸಿನ ಮಿತಿಯು ನನಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ನಾನು ಹೇಳಿದೆ ಎಂದು ಮೇರಿ ಕೋಮ್ ಅವರು ಹೇಳಿದರು.

ಹಿಂಡೆನ್‍ಬರ್ಗ್ ಆರೋಪದಿಂದ ಅಮೂಲ್ಯ ಪಾಠ ಕಲಿತಿದ್ದೇವೆ ; ಅದಾನಿ

ನಾನು ಇನ್ನೂ ನನ್ನ ಫಿಟ್ನೆಸ್ ಬಗ್ಗೆ ಗಮನಹರಿಸುತ್ತಿದ್ದೇನೆ ಮತ್ತು ನಾನು ನಿವೃತ್ತಿ ಘೋಷಿಸಿದಾಗ ನಾನು ಎಲ್ಲರಿಗೂ ತಿಳಿಸುತ್ತೇನೆ. ದಯವಿಟ್ಟು ಸರಿಪಡಿಸಿ ಎಂದು ಅವರು ಹೇಳಿದರು. ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಪ್ರೀ ಕ್ವಾರ್ಟರ್‍ಫೈನಲ್ ಸೋತ ನಂತರ ಮೇರಿ ಕೋಮ್ ಸ್ಪರ್ಧೆಗಳಲ್ಲಿ ಕಾಣಿಸಿಕೊಂಡಿಲ್ಲ, ಇದು ಚತುರ್ವಾರ್ಷಿಕ ಪ್ರದರ್ಶನದಲ್ಲಿ ಅವರ ಕೊನೆಯ ಪ್ರದರ್ಶನವಾಗಿತ್ತು.

ಅರ್ಧ ಡಜನ್ ವಿಶ್ವ ಚಿನ್ನದ ಪದಕಗಳೊಂದಿಗೆ ಆರು ಏಷ್ಯನ್ ಪ್ರಶಸ್ತಿಗಳೊಂದಿಗೆ ಸಾರ್ವಕಾಲಿಕ ಹೆಚ್ಚು ಪದಕ ಗಳಿಸಿದ ಭಾರತೀಯ ಕ್ರೀಡಾಪಟುಗಳಲ್ಲಿ ಒಬ್ಬರು.ಖೇಲ್ ರತ್ನ ಪ್ರಶಸ್ತಿ ಪುರಸ್ಕøತರಾಗಿದ್ದಾರೆ ಮತ್ತು ರಾಜ್ಯಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ.ಕಳೆದ 2020 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ.

RELATED ARTICLES

Latest News