ಬೆಂಗಳೂರು, ಆ.31- ಎಸ್‌ಐಟಿಯ ಮುಂದೆ ನನಗೆ ತಿಳಿದಿರುವ ಎಲ್ಲಾ ಅಂಶಗಳನ್ನು ಹೇಳಿ ಬಂದಿದ್ದೇನೆ. ಇನ್ನು ಮುಂದೆ ನಾನು ಈ ಕೂಪದಲ್ಲಿ ಇರುವುದಿಲ್ಲ ಎಂದು ಸುಜಾತಾಭಟ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾರ್ಯಾರು ಏನೇನು ಮಾಡಿದ್ದಾರೋ ಅದಕ್ಕೆ ತಕ್ಕಂತೆ ಅವರು ಅನುಭವಿಸುತ್ತಾರೆ. ನಾನು ಏಕಾಂಗಿಯಾಗಿಯೇ ಎಸ್‌ಐಟಿ ತನಿಖೆಯನ್ನು ಎದುರಿಸಿ ಬಂದಿದ್ದೇನೆ. ಇನ್ನು ನನಗೆ ಯಾರ ಸಹವಾಸವೂ ಬೇಡ. ಯಾವ ಕೂಪಗಳಲ್ಲೂ ನಾನು ಇರುವುದಿಲ್ಲ ಎಂದು ಹೇಳಿದ್ದಾರೆ.
ಕೊಲೆ ಯಾಗಿದ್ದಾರೆ ಎಂದು ಹೇಳಲಾಗುವ ವಾಸಂತಿ ಇನ್ನು ಬದುಕಿದ್ದಾರೆ ಎಂದು ನನ್ನ ಮನಸ್ಸು ಹೇಳುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದಿದ್ದಾರೆ.ವಾಸಂತಿ ಅವರ ಶವ ಹರಿಯುವ ನದಿಯಲ್ಲಿ ಸಿಕ್ಕಿತ್ತು ಎಂದು ಹೇಳಲಾಗಿದೆ. ಬಟ್ಟೆಗಳೆಲ್ಲಾ ಹಾಳಾಗಿದ್ದವು ಎನ್ನುತ್ತಾರೆ. ಹಾಗಿದ್ದ ಮೇಲೆ ಆಕೆಯ ಕೊರಳಲ್ಲಿದ್ದ ತಾಳಿಯ ಸರ ಹರಿಯುವ ನೀರಿನಲ್ಲಿ ಕೊಚ್ಚಿಹೋಗದೇ ಹೇಗೆ ಉಳಿದುಕೊಳ್ಳಲು ಸಾಧ್ಯ ಎಂಬ ಅನುಮಾನವನ್ನು ಸುಜಾತಾ ಭಟ್ ವ್ಯಕ್ತಪಡಿಸಿದ್ದಾರೆ.
ವಾಸಂತಿ ಅವರ ದೇಹವನ್ನು ಗಂಡನ ಮನೆಯವರಿಗೂ ತೋರಿಸಿಲ್ಲ. ವಾಸಂತಿ ಅವರ ಗಂಡ ಬದುಕಿಲ್ಲ. ಆಕೆ ಬದುಕಿರಬಹುದು ಎಂಬ ಅನುಮಾನ ನನಗೆ ಇದೆ ಎಂದು ಹೇಳಿದರು.ಅನನ್ಯಭಟ್ ವಿಚಾರವಾಗಿ ಎಸ್‌ಐಟಿ ಅಧಿಕಾರಿಗಳ ಮುಂದೆ ನಾನು ಹೇಳಬೇಕಿದ್ದ ಎಲ್ಲಾ ವಿಚಾರಗಳನ್ನು ತಿಳಿಸಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
- ವಿಶ್ವದ ಗಮನ ಸೆಳೆದ ಮೋದಿ-ಜಿನ್ಪಿಂಗ್ ಮೀಟಿಂಗ್: ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಬದ್ಧ
- ಧರ್ಮಸ್ಥಳ ಪ್ರಕರಣ ಕುರಿತು ಎಸ್‌ಐಟಿ ತನಿಖೆ ಹಿಂದೆ ಗಾಂಧಿ ಕುಟುಂಬದ ಷಡ್ಯಂತ್ರ : ಯತ್ನಾಳ್ ಗಂಭೀರ ಆರೋಪ
- ದಸರಾ ನಾಡ ಹಬ್ಬ, ಎಲ್ಲಾ ಧರ್ಮದವರಿಂದ ಆಚರಣೆ : ಸಿಎಂ ಸಿದ್ದರಾಮಯ್ಯ
- ಕೃಷಿ ಹೊಂಡದಲ್ಲಿ ಪುರುಷ ಹಾಗೂ ಮಹಿಳೆಯ ಶವ ಪತ್ತೆ
- ರಾಯಚೂರು : ಗಣೇಶ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು