Monday, April 22, 2024
Homeರಾಜ್ಯಕಾಂಗ್ರೆಸ್ ಸೋತರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ; ಶಿವರಾಜ್ ಗಂಗ

ಕಾಂಗ್ರೆಸ್ ಸೋತರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ; ಶಿವರಾಜ್ ಗಂಗ

ದಾವಣಗೆರೆ,ಮಾ.22- ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಚನ್ನಗಿರಿ ಕ್ಷೇತ್ರದ ವಿಧಾನಸಭಾ ಸದಸ್ಯ ಶಿವರಾಜ್ ಗಂಗ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ತಾಕತ್ತಿದ್ದರೆ ಎಲ್ಲರೂ ಒಟ್ಟಾಗಿ ಬಂದು ಚುನಾವಣೆ ಮಾಡಿ ಬಿಜೆಪಿಯನ್ನು ಗೆಲ್ಲಿಸಿಕೊಳ್ಳಲಿ. ನಾಳೆ ಕಾಂಗ್ರೆಸ್ ಗೆದ್ದ ಬಳಿಕ ನಮ್ಮಲ್ಲಿ ಬಂಡಾಯ ಎದ್ದು ಆ ಕಾರಣಕ್ಕೆ ಸೋಲಾಗಿದೆ ಎಂದು ಸಬೂಬು ಹೇಳಬೇಡಿ ಎಂದರು.

ದಾವಣಗೆರೆ ಲೋಕಸಭೆಗೆ ಕಾಂಗ್ರೆಸ್ ಗೆಲ್ಲುವುದು ಖಚಿತವಾಗಿದೆ. ಹೀಗಾಗಿ ಬಿಜೆಪಿಯವರು ಸೋಲನ್ನು ಅಂದಾಜಿಸಿ ಅದರ ಹೊಣೆಗಾರಿಕೆ ಹೊತ್ತುಕೊಳ್ಳಲು ಈಗಲೇ ಒಟ್ಟಾಗಿ ಷಡ್ಯಂತ್ರ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಬಂಡಾಯವಿತ್ತು ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಈಗಲೂ ಸವಾಲು ಹಾಕುತ್ತೇನೆ. ಬಿಜೆಪಿಯ ಎಲ್ಲಾ ನಾಯಕರೂ ಒಟ್ಟಾಗಿ ಬನ್ನಿ. ನಿಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಿ. ಒಂದು ವೇಳೆ ಕಾಂಗ್ರೆಸ್ ಸೋಲು ಕಂಡರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮುಂಗಡವಾಗಿಯೇ ಜೂ.6 ನೇ ತಾರೀಖಿಗೆ ರಾಜೀನಾಮೆ ಪತ್ರವನ್ನು ಬರೆದುಕೊಡುತ್ತೇನೆ ಎಂದು ಹೇಳಿದರು.

RELATED ARTICLES

Latest News