Thursday, November 21, 2024
Homeಬೆಂಗಳೂರುಕಾನೂನು ಬಾಹಿರ ಚಟುವಟಿಕೆ : 4 ವಿದೇಶಿ ಪ್ರಜೆಗಳು ಸೇರಿ 40 ಮಂದಿ ವಶಕ್ಕೆ

ಕಾನೂನು ಬಾಹಿರ ಚಟುವಟಿಕೆ : 4 ವಿದೇಶಿ ಪ್ರಜೆಗಳು ಸೇರಿ 40 ಮಂದಿ ವಶಕ್ಕೆ

ಬೆಂಗಳೂರು,ಜೂ.11- ನಗರ ವ್ಯಾಪ್ತಿಯಲ್ಲಿ ಏಪ್ರಿಲ್‌ನಲ್ಲಿ ಕಾರ್ಯಾಚರಣೆ ಕೈಗೊಂಡು ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ 26 ಎನ್‌ಡಿಪಿಎಸ್‌‍ ಪ್ರಕರಣಗಳನ್ನು ದಾಖಲಿಸಿ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ 40 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಿಂದ 52 ಕೆಜಿ ಗಾಂಜಾ, 2 ಕೆಜಿ ಆಶಿಷ್‌ ಆಯಿಲ್‌, 741 ಗ್ರಾಂ ಚರಸ್‌‍, 5 ಗ್ರಾಂ ಕೊಕೈನ್‌, 1 ಕೆಜಿ ಎಂಡಿಎಂಎ ಹಾಗೂ 7 ಎಲ್‌ಎಸ್‌‍ಡಿ ಸ್ಟ್ರಿಪ್‌್ಸ ವಶಪಡಿಸಿಕೊಂಡಿದ್ದಾರೆ.

ತಲೆಮರೆಸಿಕೊಂಡಿದ್ದ 16 ಮಂದಿ ಬಂಧನ:
ಎಲ್‌ಪಿಆರ್‌ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ 16 ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದಿಂದ ವಾರಂಟ್‌ ಮತ್ತು ಪ್ರೊಕ್ಲಮೇಷನ್‌ ಹೊರಡಿಸಲಾಗಿದೆ.

ರೌಡಿಗಳ ವಿರುದ್ಧ ಕ್ರಮ:
ತಲೆಮರೆಸಿಕೊಂಡಿರುವ ರೌಡಿಗಳ ಪೈಕಿ 10 ಮಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, 5 ರೌಡಿಗಳ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ.

ಎನ್‌ಡಿಪಿಎಸ್‌‍ ಪ್ರಕರಣ:
ಸಿಸಿಬಿ ಮಾದಕದ್ರವ್ಯ ನಿಗ್ರಹದಳದವರು ವಿವಿಧ ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿ ಮೂವರು ವಿದೇಶಿಯರು ಸೇರಿದಂತೆ 8 ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ 2.74 ಕೋಟಿ ಮೌಲ್ಯದ ನಿಷೇಧಿತ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ವ್ಯಕ್ತಿ ಸೆರೆ:
ಮಾದಕವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿ 4.34 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES

Latest News