Monday, November 25, 2024
Homeರಾಷ್ಟ್ರೀಯ | Nationalಬಿಆರ್‌ಎಸ್‌, ಬಿಜೆಪಿ ವಿರುದ್ಧ ರಾಹುಲ್ ಕಿಡಿ

ಬಿಆರ್‌ಎಸ್‌, ಬಿಜೆಪಿ ವಿರುದ್ಧ ರಾಹುಲ್ ಕಿಡಿ

ಹೈದರಾಬಾದ್, ಏ.7- ಲೋಕಸಭೆ ಚುನಾವಣೆಗೂ ಮುನ್ನ ತೆಲಂಗಾಣ ಫೋನ್ ಕದ್ದಾಲಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ರಾಷ್ಟ್ರ ಸಮಿತಿ ಮತ್ತು ಬಿಜೆಪಿ ವಿರುದ್ಧ ದ್ವಿಮುಖ ವಾಗ್ದಾಳಿ ನಡೆಸಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಮಾಜಿ ಮುಖ್ಯಮಂತ್ರಿ (ಕೆ ಚಂದ್ರಶೇಖರ ) ಇಲ್ಲಿ ಏನು ಮಾಡಿದರು, ಪ್ರಧಾನಿ ಮತ್ತು ಬಿಜೆಪಿ ದೆಹಲಿಯಲ್ಲಿ ಏನು ಮಾಡುತ್ತಿದ್ದಾರೆ, ಜಾರಿ ನಿರ್ದೇಶನಾಲಯವು ಸುಲಿಗೆ ನಿರ್ದೇಶನಾಲಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರೀಯ ಸಂಸ್ಥೆಯ ಕುರಿತಾದ ಗಾಂಧಿಯವರ ಹೇಳಿಕೆಗಳು ನರೇಂದ್ರ ಮೋದಿ ಸರ್ಕಾರದ ಮೇಲೆ ಪ್ರತಿಪಕ್ಷಗಳ ಆರೋಪದ ಭಾಗವಾಗಿದೆ, ಇದು ರಾಜಕೀಯ ಉದ್ದೇಶಗಳಿಗಾಗಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ರ್ಯಾಯಲ್ಲಿ ಇಂಡಿಯಾ ಒಕ್ಕೂಟದ ನಾಯಕರು ಈ ವಿಷಯದ ಬಗ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಹಿರಿಯ ಪೊಲೀಸ್ ಅಧಿಕಾರಿಗಳು ಹಾಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಮತ್ತು ಹಲವಾರು ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳ ಫೋನ್‍ಗಳನ್ನು ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಸಿಆರ್ ನೇತೃತ್ವದ ಬಿಆರ್‍ಎಸ್ ಸರ್ಕಾರ ಭಾರಿ ವಿವಾದದ ಕೇಂದ್ರಬಿಂದುವಾಗಿದೆ.
ರೆಡ್ಡಿ ಪ್ರಕರಣದ ತನಿಖೆಗೆ ಆದೇಶಿಸಿದ ನಂತರ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಬಿಆರ್‍ಎಸ್ ಪಕ್ಷದ ನಿvಗೆ ಕೊಡುಗೆ ನೀಡುವಂತೆ ಬ್ಲ್ಯಾಕ್‍ಮೇಲ್ ಮಾಡಲು ಉದ್ಯಮಿಗಳ ಕಣ್ಗಾವಲು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಒಂದು ವೇಳೆ ಫೋನ್ ಕದ್ದಾಲಿಕೆ ನಡೆದಿದ್ದರೆ ಅದು ಕೆಲ ಗೊಂದಲಿಗರಿಗೆ ಅಥವಾ ಕ್ರಿಮಿನಲ್‍ಗಳಿಗೆ ಸೀಮಿತವಾಗಿರಬಹುದು ಎಂದು ಮಾಜಿ ಸಚಿವ ಹಾಗೂ ಕೆಸಿಆರ್ ಪುತ್ರ ಕೆಟಿ ರಾಮರಾವ್ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ಇದನ್ನು ಅಂತರರಾಷ್ಟ್ರೀಯ ಹಗರಣ ಎಂದು ಉತ್ಪ್ರೇಕ್ಷಿಸುತ್ತಿದೆ ಎಂದು ಪಕ್ಷದ ಸಭೆಯಲ್ಲಿ ಹೇಳಿದರು. ಇದು ಮುಖ್ಯಮಂತ್ರಿಯಿಂದ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಪಡೆಯಿತು, ಕೆಟಿಆರ್ ಫೋನ್ ಟ್ಯಾಪಿಂಗ್ ಮಾಡುವುದನ್ನು ನಾಚಿಕೆಯಿಲ್ಲದೆ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಹೇಳಿದರು ಮತ್ತು ಹೊಣೆಗಾರಿಕೆಗೆ ಕರೆ ನೀಡಿದರು.

ತೆಲಂಗಾಣದ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಆರೋಪಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಬಿಆರ್‍ಎಸ್ ಮಾನ್ಯತೆಯನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಇದು ಸಾಮಾನ್ಯ ಪ್ರಕರಣವಲ್ಲ, ಇದು ತುಂಬಾ ಗಂಭೀರವಾದ ವಿಷಯವಾಗಿದೆ. ಇದು ಕೇವಲ ರಾಜಕೀಯ ಸೇಡಿನ ಕ್ರಮವಲ್ಲ ಮತ್ತು ಕೇವಲ ರಾಜಕೀಯ ಲಾಭಕ್ಕಾಗಿ ಫೋನ್ ಕದ್ದಾಲಿಕೆ ವಿಷಯವಲ್ಲ. ಆದರೆ, ವೈಯಕ್ತಿಕ ಗೌಪ್ಯತೆ, ವ್ಯಕ್ತಿಗಳ ಗೌರವ ಮತ್ತು ಸಂಬಂಧಿತ ನಿಯಮಗಳ ಉಲ್ಲಂಘನೆಯಾಗಿದೆ. , ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

RELATED ARTICLES

Latest News