ನವದೆಹಲಿ, ಸೆ.30- ಉಜ್ಜಯಿನಿಯಲ್ಲಿ ಅತ್ಯಾಚಾರಕ್ಕೊಳಗಾದ 15 ವರ್ಷದ ಬಾಲಕಿಗೆ ಸಹಾಯ ಮಾಡದವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಬಾಲಕಿಯು ಮನೆಮನೆಗೆ ತೆರಳಿ ಅಂಗಲಾಚಿದರೂ ಸಹಾಯಕ್ಕೆ ಬಾರದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ತೀವ್ರ ರಕ್ತಸ್ರಾವವಾಗುತ್ತಿದ್ದರೂ ಆಕೆಗೆ ಸಹಾಯ ಮಾಡಲು ಮುಂದಾಗದ ಜನರ ವಿರುದ್ಧ ಮಕ್ಕಳ ಲೈಂಗಿಕ ದೌರ್ಜನ್ಯ ಕಾನೂನುಗಳಡಿ ಪ್ರಕರಣ ದಾಖಲಿಸಬಹುದು ಎಂದಿದ್ದಾರೆ.ಅಪರಾಧದ ಕುರಿತು ಗೊತ್ತಿದ್ದರೂ, ಪೊಲೀಸರಿಗೆ ಮಾಹಿತಿ ನೀಡದೇ ಇರುವುದು ಕಾನೂನು ರೀತಿ ತಪ್ಪು. ಅತ್ಯಾಚಾರದ ಬಗ್ಗೆ ಮಾಹಿತಿ ನೀಡಲು ವಿಫಲರಾದವರು ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಕ್ರಮ ಎದುರಿಸಬಹುದು ಎಂದು ಹೇಳಿದ್ದಾರೆ.
ಮಕ್ಕಳ ಜೊತೆ ಸೇರಿ ಪತ್ನಿಯ ತಲೆ ಕಡಿದ ಪತಿ..!
ಈ ಕುರಿತು ಮಾತನಾಡಿರುವ ಉಜ್ಜಯಿನಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಂತ್ ಸಿಂಗ್ ರಾಥೋಡ್, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಬಗ್ಗೆ ಕಾಳಜಿ ತೋರಿಸದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಆಟೋ ರಿಕ್ಷಾ ಚಾಲಕನೊಬ್ಬನಿಗೆ ಸಂತ್ರಸ್ತೆಯ ಕುರಿತು ತಿಳಿದಿದ್ದರೂ ಆತ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಆತನ ವಿರುದ್ಧವೂ ಕ್ರಮ ಕೈಗೊಳ್ಳಲು ನಾವು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಭರತ್ ಸೋನಿಗೆ ಮರಣದಂಡನೆ ಶಿಕ್ಷೆಯಾಗಬೇಕು. ಸಾವಿನ ಹೊರತಾಗಿ ಆತನಿಗೆ ಬೇರೆ ಶಿಕ್ಷೆ ಬೇಕಿಲ್ಲ. ಆತ ಎಸಗಿರುವುದು ಘೋರ ತಪ್ಪು. ಆತನಿಗೆ ಮರಣದಂಡನೆಯಂತಹ ಶಿಕ್ಷೆಯೇ ಸರಿ. ನಾನಾಗಿದ್ದರೆ ಆತನನ್ನು ಕೊಲ್ಲುತ್ತಿದ್ದೆ ಎಂದು ಸ್ವತಃ ಆರೋಪಿಯ ತಂದೆ ರಾಜಾ ಸೋನಿ ಹೇಳಿದ್ದಾರೆ. ಆರೋಪಿಯೂ ಆಟೋ ರಿಕ್ಷಾ ಚಾಲಕನಾಗಿದ್ದು, ಸುಮಾರು 700 ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡುವ ಮೂಲಕ ಆತನನ್ನು ಪತ್ತೆ ಹಚ್ಚಲಾಗಿದೆ.
ಆಟೋ ರಿಕ್ಷಾ ಚಾಲಕನನ್ನು ರಾಕೇಶ್ ಮಾಳವೀಯ ಎಂಬಾತ ತನ್ನ ವಾಹನದಲ್ಲಿ ಸಂತ್ರಸ್ತ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ. ಆಟೋ ಸೀಟಿನಲ್ಲಿ ರಕ್ತದ ಕಲೆಗಳನ್ನು ಕಂಡುಬಂದರೂ, ಆತ ಪೊಲೀಸರಿಗೆ ಮಾಹಿತಿನೀಡಿಲ್ಲ. ಆತನ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.