Friday, November 22, 2024
Homeಅಂತಾರಾಷ್ಟ್ರೀಯ | Internationalರಾಮಮಂದಿರ ಉದ್ಘಾಟನೆ : ಅಮೆರಿಕದಲ್ಲಿನ ಹಿಂದೂ ಸಮುದಾಯದಿಂದ ಕಾರು ರ‍್ಯಾಲಿ

ರಾಮಮಂದಿರ ಉದ್ಘಾಟನೆ : ಅಮೆರಿಕದಲ್ಲಿನ ಹಿಂದೂ ಸಮುದಾಯದಿಂದ ಕಾರು ರ‍್ಯಾಲಿ

ವಾಷಿಂಗ್ಟನ್,ಡಿ.17- ಮುಂದಿನ ತಿಂಗಳು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಯಾಗುತ್ತಿರುವುದರಿಂದ ಅಮೆರಿಕದಲ್ಲಿರುವ ಹಿಂದೂ ಸಮುದಾಯದ ಸದಸ್ಯರು ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಕಾರ್ ರ‍್ಯಾಲಿಯನ್ನು ಆಯೋಜಿಸಿ ಒಂದು ತಿಂಗಳ ಆಚರಣೆಗೆ ಚಾಲನೆ ನೀಡಿದ್ದಾರೆ. ಫ್ರೆಡೆರಿಕ್ ಸಿಟಿ ಮೇರಿಲ್ಯಾಂಡ್ ಬಳಿಯ ಅಯೋಧ್ಯಾ ಮಾರ್ಗದಲ್ಲಿರುವ ಶ್ರೀ ಭಕ್ತ ಆಂಜನೇಯ ದೇವಸ್ಥಾನದಲ್ಲಿ ನೂರಾರು ಮಂದಿ ಜಮಾಯಿಸಿದರು.

22-1-2024 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ಭವ್ಯ ಉದ್ಘಾಟನೆ ನಿಗದಿಯಾಗಿದ್ದು ಅದಕ್ಕೆ ಪೂರಕವಾಗಿ ಇಂದಿನಿಂದ ಅಮೆರಿಕದಲ್ಲಿ ಒಂದು ತಿಂಗಳ ಆಚರಣೆಯನ್ನು ಪ್ರಾರಂಭಿಸಿತು ಎಂದು ಸಂಘಟಕರು ಹೇಳಿದರು. ಹಿಂದೂಗಳ 500 ವರ್ಷಗಳ ಹೋರಾಟದ ನಂತರ, ಭಗವಾನ್ ಶ್ರೀರಾಮ ಮಂದಿರವನ್ನು ಉದ್ಘಾಟಿಸಲಾಗುತ್ತಿದೆ ಮತ್ತು ನಾವು ಇಲ್ಲಿ ಸುಮಾರು 1,000 ಹಿಂದೂ ಕುಟುಂಬಗಳೊಂದಿಗೆ ಮುಂದಿನ ವರ್ಷ ಜನವರಿ 20 ರಂದು ವಾಷಿಂಗ್ಟನ್, ಡಿಸಿ ಪ್ರದೇಶದಲ್ಲಿ ಐತಿಹಾಸಿಕ ಆಚರಣೆಯನ್ನು ಆಯೋಜಿಸುತ್ತಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಆಫ್ ಅಮೇರಿಕಾ ಡಿಸಿ ಘಟಕದ ಮಹೇಂದ್ರ ಸಾಪಾ ಹೇಳಿದರು.

ಶ್ರೀರಾಮನ ಲೀಲೆ, ಶ್ರೀರಾಮನ ಕಥೆಗಳು, ಪ್ರಾರ್ಥನೆಗಳು, ಭಜನೆಗಳು (ಭಕ್ತಿಗೀತೆಗಳು) ಒಳಗೊಂಡಿರುತ್ತದೆ ಎಂದು ಸಾಪಾ ಹೇಳಿದರು. ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಸುಮಾರು 45 ನಿಮಿಷಗಳ ಕಾಲ ವಿವಿಧ ವಯೋಮಾನದ ಮಕ್ಕಳು ಶ್ರೀರಾಮ ದೇವರ ಜೀವನದ ಕುರಿತಾದ ಪ್ರದರ್ಶನ ಕೂಡ ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

ಹೊಂದಾಣಿಕೆ ರಾಜಕಾರಣದ ಅನುಮಾನ, ಸೈಲೆಂಟಾಗಿ ಮುಗಿದೋಯ್ತು ಬೆಳಗಾವಿ ಅಧಿವೇಶನ

ಸಹ-ಸಂಘಟಕ ಮತ್ತು ಸ್ಥಳೀಯ ತಮಿಳು ಹಿಂದೂ ನಾಯಕ, ಪ್ರೇಮಕುಮಾರ್ ಸ್ವಾಮಿನಾಥನ್ ಅವರು ತಮಿಳು ಭಾಷೆಯಲ್ಲಿ ಶ್ರೀರಾಮನನ್ನು ಸ್ತುತಿಸುವ ಹಾಡನ್ನು ಹಾಡಿದರು. ಅಯೋಧ್ಯೆಯಲ್ಲಿ ನಿಜವಾದ ಉದ್ಘಾಟನೆಗೆ ಆಹ್ವಾನವನ್ನು ನೀಡಿದರು. ಇತರ ಸಂಘಟಕರು ಕನ್ನಡ, ತೆಲುಗು ಮತ್ತು ಇತರ ಭಾಷೆಗಳಲ್ಲಿ ಮಾತನಾಡಿ, ವಿಶ್ವದಾದ್ಯಂತ ವಾಸಿಸುವ ಹಿಂದೂಗಳಿಗೆ ಮಾದರಿಯಾಗಿರುವ ಭಗವಾನ್ ಶ್ರೀರಾಮನ ಮಹತ್ವವನ್ನು ವಿವರಿಸಿದರು.

ಅನೇಕ ಹಿಂದೂ ತಲೆಮಾರುಗಳು ಮತ್ತು ಕುಟುಂಬಗಳು ಅಮೆರಿಕನ್ ಸಂಸ್ಕøತಿಯ ಮಾದರಿ ನಾಗರಿಕರಾಗಲು ಅಯೋಧ್ಯೆ ಮಂದಿರದ ಐತಿಹಾಸಿಕ ಉದ್ಘಾಟನೆಯನ್ನು ನೆನಪಿಟ್ಟುಕೊಳ್ಳುವುದು ಮುಖ್ಯ ಎಂದು ಸ್ಥಳೀಯ ಹಿಂದೂ ಮುಖಂಡ ಅಂಕುರ್ ಮಿಶ್ರಾ ಹೇಳಿದರು.

RELATED ARTICLES

Latest News