Sunday, May 5, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-12-2023)

ನಿತ್ಯ ನೀತಿ : ಸಂಸ್ಕಾರ, ಸಂಸ್ಕøತಿಗಳು ನಮ್ಮ ನಡವಳಿಕೆಗಳನ್ನು ತಿದ್ದುವುದಕ್ಕಿವೆಯೇ ಹೊರತು, ನಮ್ಮ ಅನ್ಯೋನ್ಯತೆಯನ್ನು ದೂರ ಮಾಡುವುದಕ್ಕಲ್ಲ.

ಪಂಚಾಂಗ ಭಾನುವಾರ 17-12-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಧನಿಷ್ಠಾ / ಯೋಗ: ಹರ್ಷಣ / ಕರಣ: ಭವ

ಸೂರ್ಯೋದಯ : ಬೆ.06.34
ಸೂರ್ಯಾಸ್ತ : 05.57
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಹಳೆಯ ಸ್ನೇಹಿತರಿಂದ ಶುಭ ಸುದ್ದಿ ಕೇಳು ವಿರಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ವೃಷಭ: ಮುಂದೆ ಯಾವಾಗಲೋ ಹಣ ಬರಲಿದೆ ಎಂಬ ನಿರೀಕ್ಷೆಯಿಟ್ಟುಕೊಂಡು ಸಾಲ ಮಾಡದಿರಿ.
ಮಿಥುನ: ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುವರು.

ಕಟಕ: ಅಂದುಕೊಳ್ಳದ ರೀತಿಯಲ್ಲಿ ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ.
ಸಿಂಹ: ಬಾಕಿ ಇರುವ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಲು ಬಹಳ ಕಷ್ಟಪಡಬೇಕಾಗುತ್ತದೆ.
ಕನ್ಯಾ: ವ್ಯವಹಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಿ.

ತುಲಾ: ಅನುಕೂಲಕ್ಕಾಗಿ ಹೆಚ್ಚುವರಿ ಹಣ ಖರ್ಚು ಮಾಡುವುದನ್ನು ತಪ್ಪಿಸಿ.
ವೃಶ್ಚಿಕ: ಕುಟುಂಬ ಸದಸ್ಯರ ನಡುವೆ ಹೊಂದಾಣಿಕೆ ಕೊರತೆ ಇರುತ್ತದೆ.
ಧನುಸ್ಸು: ಸಂಗಾತಿ ಮತ್ತು ಕುಟುಂಬದೊಂದಿಗಿನ ಸಂಬಂಧ ಸಾಮರಸ್ಯದಿಂದ ಕೂಡಿರುತ್ತದೆ.

ಮಕರ: ಪ್ರತಿಸ್ರ್ಪಧಿಗಳು ಕಠಿಣ ಸ್ಪರ್ಧೆ ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಪ್ರತಿ ಹೆಜ್ಜೆಯನ್ನು ಚಿಂತನಶೀಲವಾಗಿ ಇಡಬೇಕಾಗುತ್ತದೆ.
ಕುಂಭ: ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.
ಮೀನ: ವೈಯಕ್ತಿಕ ವಿಷಯಗಳಲ್ಲಿ ಯಾವುದೇ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡಲು ಬಿಡಬೇಡಿ.

RELATED ARTICLES

Latest News