Friday, November 22, 2024
Homeಬೆಂಗಳೂರುಬಿಡಿಎ ಅಧ್ಯಕ್ಷರ ಭೇಟಿ ನಂತರ ಕೆರೆ ಮಾಲಿನ್ಯ ಹೆಚ್ಚಳ

ಬಿಡಿಎ ಅಧ್ಯಕ್ಷರ ಭೇಟಿ ನಂತರ ಕೆರೆ ಮಾಲಿನ್ಯ ಹೆಚ್ಚಳ

Increase in lake pollution after BDA chairman's visit

ಮಹದೇವಪುರ,ಅ.24- ಬೆಳ್ಳಂದೂರು ಕೆರೆಗೆ ಬಿಡಿಎ ಅಧ್ಯಕ್ಷ ಹ್ಯಾರಿಸ್‌‍ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋದ ನಂತರ ಕೆರೆಯ ಮಾಲಿನ್ಯ ಹೆಚ್ಚಿದೆ ಎಂದು ಕೆರೆ ಸಂರಕ್ಷಕ ವೆಂಕಟೇಶ್‌ ಆರೋಪಿಸಿದರು

ಕೆರೆಗೆ ಬರದಂತೆ ಕೊಳಚೆ ನೀರಿಗೆ ಪ್ರತ್ಯೇಕ ಚಾನಲ್‌ ನಿರ್ಮಿಸಿ ಆ ನೀರಿಗೆ ಚಿಕಿತ್ಸೆ ನೀಡಿ ಕೋಲಾರಕ್ಕೆ ಪಾಸ್‌‍ ಮಾಡುವ ವಿಧಾನವಿದೆ. ಆದರೆ ಕೊಳಚೆ ನೋರಿನ ಚಾನಲ್‌ ಮಾರ್ಗವು ಮಳೆಯಿಂದ ಹೆಚ್ಚಿದ ಪರಿಣಾಮ ಅಧಿಕಾರಿಗಳ ಸಮುಖದಲ್ಲಿ ಅ ಕಟ್ಟೆಯನ್ನು ಒಡೆದು ಕಲುಷಿತ ನೀರನ್ನು ಕೆರೆಗೆ ಬಿಟ್ಟಿರುವಂತೆ ಮಾಡಿರುವುದು ಸರಿಯಲ್ಲ ಎಂದರು

ಕೆರೆಯಲ್ಲಿನ ಜೀವಚರಗಳಿಗೆ ಸಾವಾಗಬಹುದು ಮತ್ತು ಇಲ್ಲಿನ ಗ್ರಾಮಸ್ಥರಿಗೆ ಅನಾರೋಗ್ಯ ಉಂಟಾಗುತ್ತದೆ. ಇದನ್ನು ಕೂಡಲೆ ಅಧಿಕಾರಿಗಳು ಸರಿಪಡಿಸಬೇಕು ಎಂದು ಹೇಳಿದರು.

RELATED ARTICLES

Latest News