ಬೆಂಗಳೂರು,ಮೇ.15– ಉಷ್ಣಾಂಶ ಏರಿಕೆಯಿಂದ ತತ್ತರಿಸಿ ಹೋಗಿರುವ ನಗರದ ಜನತೆಗೆ ಇದೀಗ ಡೆಂಘೀ ಭೀತಿ ಆರಂಭವಾಗಿದೆ.ಹೀಟ್ ವೇವ್ ತಡೆಯಲಾರದೆ ಪರಿತಪಿಸುತ್ತಿದ್ದ ಜನರಿಗೆ ಕಲರಾ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವುದು ಗಾಬರಿ ತರಿಸಿದೆ.
ಉಷ್ಣಾಂಶ ಹೆಚ್ಚಳದ ನಡುವೆಯೇ ನಗರದಲ್ಲಿ ಮಳೆಯಾಗುತ್ತಿರುವುದರಿಂದ ಪ್ರತಿನಿತ್ಯ ನೂರಾರು ಡೆಂಘೀ ಪ್ರಕರಣಗಳು ದಾಖಲಾಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಡೆಂಘೀ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದೆ.
ಏಪ್ರಿಲ್ ನಿಂದ ಮೇ 10ರವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 930 ಡೆಂಘೀ ಪ್ರಕರಣ ದಾಖಲಾಗಿದ್ದವು. ಇದುವರೆಗೂ 1974 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದ್ದು 930 ಜನರಿಗೆ ಡೆಂಘಿ ಪಾಸಿಟಿವ್ ಆಗಿದೆ.ನಗರದ ದಕ್ಷಿಣ ವಲಯದಲ್ಲಿ ಅತಿಹೆಚ್ಚು ಡೆಂಘೀ ಸೋಂಕು ದಾಖಲಾಗಿರುವುದು ವಿಶೇಷವಾಗಿದೆ.
ಎಲ್ಲೆಲ್ಲಿ ಎಷ್ಟು ಡೆಂಘೀ ಪ್ರಕರಣಗಳು:
ಬೊಮನಹಳ್ಳಿ- 20 ಪ್ರಕರಣ
ದಾಸರಹಳ್ಳಿ – 2 ಪ್ರಕರಣ
ಈಸ್ಟ್- 224 ಪ್ರಕರಣ
ಮಹದೇವಪುರ-97 ಪ್ರಕರಣ
ಆರ್ ಆರ್ ನಗರ – 18 ಪ್ರಕರಣ
ಸೌತ್ – 453 ಪ್ರಕರಣ
ವೆಸ್ಟ್ – 99 ಪ್ರಕರಣ
ಹಾಗೂ ಯಲಹಂಕದಲ್ಲಿ 17 ಡೆಂಘೀ ಪ್ರಕರಣಗಳು ದಾಖಲಾಗಿರುವುದು ಆರೋಗ್ಯ ಇಲಾಖೆ ನಿದ್ದೆಗೆಡಿಸಿದೆ.