Friday, October 4, 2024
Homeಕ್ರೀಡಾ ಸುದ್ದಿ | Sportsಬಾಂಗ್ಲಾದೇಶವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ : ರೈನಾ ಎಚ್ಚರಿಕೆ

ಬಾಂಗ್ಲಾದೇಶವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ : ರೈನಾ ಎಚ್ಚರಿಕೆ

IND vs BAN: Suresh Raina warns India not to take Bangladesh lightly

ಚೆನ್ನೈ, ಸೆ.18- ಬಾಂಗ್ಲಾದೇಶ ವಿರುದ್ಧ ನಾಳೆಯಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು ಈ ನಡುವೆ ರೋಹಿತ್ಶರ್ಮಾ ಪಡೆಗೆ ಮಾಜಿ ಕ್ರಿಕೆಟಿಗ ಸುರೇಶ್ರೈನಾ ಆವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬಾಂಗ್ಲಾದೇಶ ತಂಡವು ಇತ್ತೀಚೆಗಷ್ಟೇ ಪಾಕಿಸ್ತಾನ ವಿರುದ್ಧ ಟೆಸ್್ಟ ಸರಣಿ ಜಯಿಸಿರುವುದರಿಂದ ಆ ತಂಡವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಮಿಸ್ಟರ್ ಐಪಿಎಲ್ ತಿಳಿಸಿದ್ದಾರೆ.

ಬಾಂಗ್ಲಾದೇಶ ತಂಡ ಬಹುತೇಕ ಆಟಗಾರರು ಭಾರತದ ಪಿಚ್ಗಳ ಗುಣಗಳನ್ನು ತುಂಬಾ ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಅಲ್ಲದೆ ಭಾರತ ವಿರುದ್ಧ ಸಾಕಷ್ಟು ಪಂದ್ಯಗಳನ್ನು ಆಡಿದೆ. ಆ ತಂಡದಲ್ಲೂ ಇಬ್ಬರು ಉತ್ತಮ ಸ್ಪಿನ್ನರ್ಗಳಿದ್ದಾರೆ. ಆದರೆ ನಮ್ಮಲ್ಲಿ ಸ್ಪಿನ್ ದಾಳಿ ವಿರುದ್ಧ ಉತ್ತಮವಾಗಿ ಬ್ಯಾಟ್ ಮಾಡಬಲ್ಲ ಆಟಗಾರರಿದ್ದಾರೆ.

ರೋಹಿತ್, ವಿರಾಟ್ಕೊಹ್ಲಿ, ಕೆ.ಎಲ್.ರಾಹುಲ್ ಕೂಡ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಾರೆ. ಒಂದು ವೇಳೆ ಮಳೆ ಇಲ್ಲದಿದ್ದರೆ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ಸಿಗಲಿದೆ’ ಎಂದು ರೈನಾ ಹೇಳಿದ್ದಾರೆ.

RELATED ARTICLES

Latest News