ಕೋಲ್ಕತ್ತಾ, ನ. 16- ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಸಿಮೋನ್ ಹರ್ಮರ್ (4ವಿಕೆಟ್)ರ ಸ್ಪಿನ್ ಮೋಡಿಗೆ ಸಿಲುಕಿದ ಟೀಮ್ ಇಂಡಿಯಾ 30 ರನ್ ಗಳ ಹೀನಾಯ ಸೋಲು ಕಂಡು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಹಿನ್ನಡೆ ಕಂಡಿದೆ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಪಂದ್ಯ ಗೆಲ್ಲಲು 124 ರನ್ ಗಳ ಸಾಧಾರಣ ಗುರಿ ಪಡೆದ ಟೀಮ್ ಇಂಡಿಯಾ ಅಕ್ಷರ್ ಪಟೇಲ್ (26 ರನ್) ಹಾಗೂ ವಾಷಿಂಗ್ಟನ್ ಸುಂದರ್ (31ರನ್)ರ ಅಲ್ಪ ಕಾಣಿಕೆ ನಡುವೆಯೂ 93 ರನ್ ಗಳಿಗೆ ಸರ್ವಪತನ ಕಂಡು 30 ರನ್ ಗಳ ಸೋಲು ಕಂಡಿದೆ.
ನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದ ಮೊದಲ ಟೆಸ್ಟ್ ಪಂದ್ಯದಿಂದ ಹೊರ ನಡೆದಿದ್ದು ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣವಾಗಿದೆ. ಸಿಮೋನ್ ಹರ್ಮರ್ ಗೆ ಉತ್ತಮ ಬೆಂಬಲ ನೀಡಿದ ಮಾರ್ಕೊ ಯಾನ್ಸೆನ್ ಹಾಗೂ ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರೆ, ಐಡೆನ್ ಮಾರ್ಕ್ರಮ್ ಒಂದು ವಿಕೆಟ್ ಕಬಳಿಸಿದರು. ಪಂದ್ಯದಲ್ಲಿ ಒಟ್ಟು 8 ವಿಕೆಟ್ ಪಡೆದ ಸಿಮೋನ್ ಹರ್ಮರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ 159 ಹಾಗೂ 153, ಭಾರತ 189 ಮತ್ತು 93ರನ್.
