Saturday, July 27, 2024
Homeರಾಷ್ಟ್ರೀಯವಿಶ್ವ ದಾಖಲೆ ಬರೆದ ಭಾರತದ ಮತದಾರರು

ವಿಶ್ವ ದಾಖಲೆ ಬರೆದ ಭಾರತದ ಮತದಾರರು

ನವದೆಹಲಿ, ಜೂ.3- ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದ 18ನೇ ಲೋಕಸಭೆ ಚುನಾವಣೆಯ ಏಳು ಹಂತದದಲ್ಲಿ 64.2 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುವುದರೊಂದಗೆ ವಿಶ್ವ ದಾಖಲೆ ಬರೆದಿದ್ದಾರೆ.

31.2 ಕೋಟಿ ಮಹಿಳೆಯರು ಸೇರಿದಂತೆ ಈ ಬಾರಿ ಒಟ್ಟು 64.2 ಕೋಟಿ ಮತದಾರರು ಮತ ಚಲಾಯಿಸಿದ್ದು ಹಿಂದಿನ ಎಲ್ಲಾ ಚುನಾವಣೆಗಳ ಶೇಕಡವಾರು ಮತದಾನವನ್ನು ಈ ಬಾರಿ ಮುರಿದು ಹಾಕಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ಕುಮಾರ್‌ ಅವರು, ಪ್ರಜಾತಂತ್ರದ ಅತಿದೊಡ್ಡ ಹಬ್ಬ ಎನಿಸಿದ ಮತದಾನದಲ್ಲಿ ಈ ಬಾರಿ ಮತದಾರರು ಉತ್ಸುಕತೆಯಿಂದಲೇ ಭಾಗವಹಿಸಿದ್ದಾರೆ. ಅತಿಹೆಚ್ಚು ಮತದಾನವಾಗಿರುವುದು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮತದಾನದಲ್ಲಿ ಭಾಗಿಯಾದ ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸಿದ ಅವರು ಮುಕ್ತ ಮತ್ತು ನ್ಯಾಯಸಮತ ಮತದಾನಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. 68 ಸಾವಿರ ಉಸ್ತುವಾರಿ ತಂಡಗಳು, 1.5 ಕೋಟಿ ಭದ್ರತಾ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ವಿಶ್ವದ ಯಾವುದೇ ರಾಷ್ಟ್ರವು ಇಷ್ಟು ದೊಡ್ಡ ಪ್ರಮಾಣದಲ್ಲಿ ಭದ್ರತೆಗೆ ನಿಯೋಜನೆ ಮಾಡಿರುವ ಉದಾಹರಣೆಗಳಿಲ್ಲ. ಭಾಗಿಯಾದ ಎಲ್ಲರಿಗೂ ಆಯೋಗ ಕೃತಜ್ಞತೆ ಸಲ್ಲಿಸುತ್ತದೆ ಎಂದು ತಿಳಿಸಿದರು.

ಕಣಿವೆ ರಾಜ್ಯವಾದ ಜಮುಕಾಶೀರದಲ್ಲಿ ಈ ಬಾರಿ ನಾಲ್ಕು ದಶಕಗಳ ನಂತರ ಶೇ.58.58 ಮತದಾನವಾಗಿದೆ. ಈವರೆಗೂ ಅಲ್ಲಿ 51.05 ಮಾತ್ರ ಮತದಾನವಾಗಿತ್ತು. ಮತದಾರರು ಭಾಗಿಯಾಗಿ ಹಕ್ಕು ಚಲಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.ಜಮುಕಾಶೀರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ವಿಧಾನಸಭೆ ಚುನಾವಣೆಯನ್ನು ನಡೆಸುತ್ತೇವೆ ಈಗಾಗಲೇ ಆಯೋಗ ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.

2024ರ ಲೋಕಸಭೆ ಚುನಾವಣೆಗೆ ಸುಮಾರು ನಾಲ್ಕು ಲಕ್ಷ ವಾಹನಗಳು, 135 ವಿಶೇಷ ರೈಲುಗಳು ಮತ್ತು 1,692 ಹವಾ ನಿಯಂತ್ರಿತ ರೈಲುಗಳನ್ನು ಬಳಸಲಾಗಿದೆ ಎಂದು ಹೇಳಿದರು.2019ರಲ್ಲಿ 540 ಮತಗಟ್ಟೆಗಳಲ್ಲಿ ಮರುಮತದಾನ ನಡೆದಿದ್ದರೆ ಈ ಬಾರಿ ಕೇವಲ 39 ಕೇಂದ್ರಗಳಲ್ಲಿ ಮರುಮತದಾನ ನಡೆದಿವೆ ಎಂದು ಅವರು ತಿಳಿಸಿದರು.

2019ರಲ್ಲಿ 3,500 ಕೋಟಿ ರೂ.ಗಳಿಗೆ ಹೋಲಿಸಿದರೆ 2024ರ ಚುನಾವಣೆಯಲ್ಲಿ ನಗದು, ಉಚಿತ ವಸ್ತುಗಳು, ಡ್ರಗ್‌್ಸ ಮತ್ತು ಮದ್ಯ ಸೇರಿದಂತೆ 10,000 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

RELATED ARTICLES

Latest News