ಅಹಮದಾಬಾದ್ : ಅ.14 : ಇಂದು ಅಹಮದಾಬಾದ್ ನಲ್ಲಿ ನಡೆದ ರೋಚಕ ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ಮೊದಲ ಇನ್ನಿಗ್ಸ್ ಮುಕ್ತಾಯಗೊಂಡಿದ್ದು, ಭಾರತಕ್ಕೆ ಪಾಕಿಸ್ತಾನ 192 ರನ್ ಗಳ ಸಾಧಾರಣ ಗುರಿ ನೀಡಿದೆ. ಟಾಸ್ ಸೋತು ಬ್ಯಾಂಟಿಂಗ್ ಗೆ ಇಳಿದ ಪಾಕ್ ರನ್ ಕಲೆಹಾಕಲು ಹರಸಾಹಸಪಟ್ಟಿತು, ಆರಂಭಿಕರಾಗಿ ಬ್ಯಾಟಿಂಗ್ ಗೆ ಇಳಿದ ಅಬ್ದುಕ್ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಉತ್ತಮ ರನ್ ಕಲೆಹಾಕಲು ಪರದಾಡಿದರು, ಅಬ್ದುಕ್ ಶಫೀಕ್ ಕೇವಲ 20ರನ್ ಗಳಿಸಿ ವಿಕೆಟ್ ಸಿರಾಜ್ ಗೆ ಒಪ್ಪಿಸಿದರೆ, 36 ರನ್ ಗಳಿಸಿದ ಇಮಾಮ್ ಹಾರ್ದಿಕ್ ಎಸೆತದಲ್ಲಿ ಕ್ಯಾಚ್ ಕೊಟ್ಟು ಹೊರನಡೆದರು.
ನಂತರ ಬಂದ ನಾಯಕ ಬಾಬರ್ ಅಜಂ ಶಾಂತಚಿತ್ತದಿಂದ ಇನ್ನಿಂಗ್ಸ್ ಕಟ್ಟುಲು ಪ್ರಯತ್ನಿಸಿದರೂ , ಅಜಂಗೆ ಸಾಥ್ ಕೊಟ್ಟ ಮೊಹಮ್ಮದ್ ರಿಜ್ವಾನ್ ಉತ್ತಮ ಜೊತೆಯಾಟ ಪ್ರದರ್ಶಿಸಿದರಾದರೂ. ನಾಯಕ ಬಾಬರ್ ಅರ್ಧ ಶತಕ ಸಿಡಿಡಿ ವಿಕೆಟ್ ಒಪ್ಪಿಸಿದರೆ ಅಹಮದ್ ರಿಜ್ವಾನ್ ಕೂಡ 49 ರನ್ ಗಳಿಸಿ ಅರ್ಧ ಶತಕ ವಂಚಿತರಾಗಿ ಹೊರನಡೆದರು.
ವಿಪಕ್ಷಗಳ ಮೇಲಷ್ಟೇ ಏಕೆ ಐಟಿ ದಾಳಿ..? : ಸಚಿವ ಪ್ರಿಯಾಂಕ್ ಖರ್ಗೆ
ನಂತರ ಬಂದ ಬ್ಯಾಟರ್ ಗಳು ಎರಡಂಕಿ ದಾಟಲೂ ಕೂಡ ಸಾಧ್ಯವಾಗದೆ ಒಬ್ಬರ ಹಿಂದೆ ಒಬ್ಬರು ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಸಾಗಿದರು. ಅಂತಿಮಗಾಗಿ ಪಾಕ್ 42.5 ಓವರ್ ನಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು.
ಇನ್ನು ಉತ್ತಮ ಪ್ರದರ್ಶನ ನೀಡಿದ ಭಾರತೀಯ ಬೌಲರ್ ಗಳಾದ ಬೂಮ್ರಾ, ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಈ ವರೆಗೂ ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಯಾವುದೇ ಪಂದ್ಯದಲ್ಲಿ ಸೋಲು ಕಂಡಿಲ್ಲ, ಅದೇ ರೀತಿ ಈ ಪಂದ್ಯದಲ್ಲೂ ಬೌಲಿಂಗ್ ಪ್ರದರ್ಶನ ನೀಡಿದ್ದು ಭಾರತ ಎಂದುನಂತೆ ಗೆಲುವು ಸಾಧಿಸಲಿದೆ ಎಂಬ ನಿರೀಕ್ಷೆಗಳಿವೆ.
ಸ್ಕೋರ್ :
ಪಾಕಿಸ್ತಾನ : 191(42.5)