Friday, May 17, 2024
Homeರಾಜ್ಯಕಿಯೊನಿಕ್ಸ್ ನಲ್ಲಿ ಮುಕ್ತ ಟೆಂಡರ್ ವ್ಯವಸ್ಥೆಗೆ ಚಾಲನೆ

ಕಿಯೊನಿಕ್ಸ್ ನಲ್ಲಿ ಮುಕ್ತ ಟೆಂಡರ್ ವ್ಯವಸ್ಥೆಗೆ ಚಾಲನೆ

ಬೆಂಗಳೂರು,ಅ.14- ಕಿಯೊನಿಕ್ಸ್ ಸಂಸ್ಥೆಯಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಂಡು ಸಾರ್ವಜನಿಕ ಸಂಪನ್ಮೂಲವನ್ನು ರಕ್ಷಿಸುವ ಸಲುವಾಗ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಆಡಿಟ್ ಜನರಲ್ ಕಚೇರಿ ಇತ್ತೀಚೆಗೆ ಕಿಯೊನಿಕ್ಸ್ ಸಂಸ್ಥೆಯ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಹಲವು ಲೋಪಗಳನ್ನು ಗುರುತಿಸಿದೆ. ಅವುಗಳನ್ನು ಗಮನಿಸಲಾಗಿದ್ದು, ಭವಿಷ್ಯದಲ್ಲಿ ಸುಸ್ಥಿರತೆ ಹಾಗೂ ಪಾರದರ್ಶಕತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಕಿಯೊನಿಕ್ಸ್ ಸಂಸ್ಥೆಯು ವಿವಿಧ ಸರ್ಕಾರಿ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಿಗೆ ಒದಗಿಸಿದ ಹೆಚ್ಚಿನ ಸರಕುಗಳು ಮತ್ತು ಸೇವೆಗಳಿಗೆ ಮೂರನೇ ವ್ಯಕ್ತಿಯ ತಪಾಸಣೆ ನಡೆಸದೆ ಬಿಲ್ ಪಾವತಿಸಲಾಗಿತ್ತು. ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿ ಅಕ್ರಮ ಪಾವತಿಗಳು, ಕೆಲವು ಒಪ್ಪಂದಗಳಲ್ಲಿ ಮೂಲ ದರವನ್ನು ತಪ್ಪಾಗಿ ಅಳವಡಿಸುವುದು, ಎಂಪ್ಯಾನಲ್ಮೆಂಟ್ ಉಲ್ಲಂಘನೆಗಳು, ಬಿಲ್ಡರ್‍ಗಳು ಸಲ್ಲಿಸಿದ್ದ ಆಸಕ್ತಿಯ ಅಭಿವ್ಯಕ್ತಿಯ ಮೌಲ್ಯಮಾಪನಕ್ಕೆ ಸಮಿತಿಗಳನ್ನು ರಚಿಸದಿರುವುದು, ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಮಾಹಿತಿ ತಂತ್ರಜ್ಞಾನ ಸಂಬಂಧಿಸಿದ ಸರಬರಾಜುಗಳ ಸಂಗ್ರಹಣೆ, ಪ್ರಮಾಣಿತ ಟೆಂಡರ್ ದಾಖಲೆಗಳನ್ನು ಅಳವಡಿಸಿಕೊಳ್ಳದಿರುವುದು, ಟೆಂಡರ್ ವಿಭಜನೆ, ಒಪ್ಪಂದಗಳಲ್ಲಿ ಕಾರ್ಯಕ್ಷಮತೆಯ ಭದ್ರತೆಯನ್ನು ಗಮನಿಸಿದಿರುವುದು, ಬಿಲ್ಡರ್ಸ್‍ಗಳಿಂದ ಇಎಂಡಿ ಸಂಗ್ರಹ ಸೇರಿದಂತೆ ಹಲವು ಲೋಪಗಳು ನಡೆದಿವೆ ಎಂದು ವಿವರಿಸಲಾಗಿದೆ.

ನಾಳೆ ನಾಡಹಬ್ಬ ದಸರಾಗೆ ಚಾಲನೆ ನೀಡಲಿದ್ದಾರೆ ನಾದಬ್ರಹ್ಮ ಹಂಸಲೇಖ

ಕಿಯೊನಿಕ್ಸ್‍ನಲ್ಲಿ ಬಾಕಿ ಇರುವ ಬಿಲ್‍ಗಳಿಗಾಗಿ ವೆಂಡರ್‍ಗಳು ಮತ್ತು ಭಾದ್ಯಸ್ಥರು ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ. ಅವುಗಳನ್ನು ಆದ್ಯತೆ ಮತ್ತು ಲೆಕ್ಕಪರಿಶೋಧನೆಗಳ ಅವಲೋಕನಗಳ ಆಧಾರದ ಮೇಲೆ ಪರಿಶೀಲಿಸಲಾಗುವುದು. ಹಣಕಾಸು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಸರಣೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸುಗಮ ವ್ಯವಹಾರಕ್ಕಾಗಿ ಜಿಎಸ್‍ಟಿ ಪುರಾವೆಯನ್ನು ಸಮರ್ಪಕವಾಗಿ ಪರಿಶೀಲಿಸಲಾಗುತ್ತಿದೆ. ಆಡಿಟ್ ವರದಿಯಲ್ಲಿನ ಅಂಶಗಳು ಮರುಪರಿಶೀಲನೆಗೆ ಒಳಪಡಿಸಿದ್ದು, ಸರ್ಕಾರಕ್ಕೆ ಯಾವುದೇ ನಷ್ಟವಾಗದಂತೆ ಎಚ್ಚರಿಕೆ ವಹಿಸಲಾಗುವುದು. ಕರ್ನಾಟಕ ಪಾರದರ್ಶಕ ಕಾಯ್ದೆ ನಿಬಂಧನೆಗಳನ್ನು ಅನುಸರಿಸಲಾಗುವುದು.

ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ 235 ಭಾರತೀಯರು

2023 ರ ಅಕ್ಟೋಬರ್ 11 ರಂದು ನಡೆದ ಟೆಂಡರ್ ಪರಿಶೀಲನಾ ಸಂಸ್ಥೆಯ ಮೊದಲ ಸಭೆಯಲ್ಲಿ ಟೆಂಡರ್ ಪ್ರಸ್ತಾವನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ ಎಂದು ವಿವರಿಸಿದ್ದಾರೆ. 4 ಜಿ ವಿನಾಯಿತಿಯಲ್ಲಿ ಕೆಲವು ಲೋಪಗಳು ಕಂಡುಬಂದಿವೆ. ಅವುಗಳನ್ನು ಸರಿಪಡಿಸಲು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಜೊತೆಗೆ ಮುಕ್ತ ಟೆಂಡರ್ ವ್ಯವಸ್ಥೆಯನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.

RELATED ARTICLES

Latest News