Tuesday, April 30, 2024
Homeಇದೀಗ ಬಂದ ಸುದ್ದಿತಾಯ್ನಾಡಿಗೆ ಹಿಂತಿರುಗಿದ ಮ್ಯಾನ್ಮಾರ್ ಸೈನಿಕರು

ತಾಯ್ನಾಡಿಗೆ ಹಿಂತಿರುಗಿದ ಮ್ಯಾನ್ಮಾರ್ ಸೈನಿಕರು

ಐಜ್ವಾಲï, ಜ 23 (ಪಿಟಿಐ) ಜನಾಂಗೀಯ ಬಂಡುಕೋರರ ಗುಂಪಿನೊಂದಿಗೆ ನಡೆದ ಗುಂಡಿನ ಚಕಮಕಿಯ ನಂತರ ಕಳೆದ ವಾರ ಮಿಜೋರಾಂಗೆ ಪಲಾಯನ ಮಾಡಿದ 184 ಮ್ಯಾನ್ಮಾರ್ ಸೈನಿಕರು ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ. ಕಳೆದ ವಾರ ಒಟ್ಟು 276 ಮ್ಯಾನ್ಮಾರ್ ಸೈನಿಕರು ಮಿಜೋರಾಂಗೆ ಪ್ರವೇಶಿಸಿದ್ದು, ಅವರಲ್ಲಿ 184 ಮಂದಿಯನ್ನು ಸೋಮವಾರ ವಾಪಸ್ ಕಳುಹಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ಧಿಅಧಿಕಾರಿ ತಿಳಿಸಿದ್ದಾರೆ.

ಅವರನ್ನು ಮ್ಯಾನ್ಮಾರ್ ವಾಯುಪಡೆಯ ವಿಮಾನಗಳಲ್ಲಿ ಐಜ್ವಾಲ್ ಬಳಿಯ ಲೆಂಗ್‍ಪುಯಿ ವಿಮಾನ ನಿಲ್ದಾಣದಿಂದ ನೆರೆಯ ದೇಶದ ರಾಖೈನ್ ರಾಜ್ಯದ ಸಿಟ್ವೆಗೆ ಕಳುಹಿಸಲಾಯಿತು ಎಂದು ಅವರು ಹೇಳಿದರು. ಉಳಿದ 92 ಸೈನಿಕರನ್ನು ಇಂದು ಸ್ವದೇಶಕ್ಕೆ ಕಳುಹಿಸಲಾಗುತ್ತಿದೆ.

ಮ್ಯಾನ್ಮಾರ್ ಸೈನಿಕರು ಜನವರಿ 17 ರಂದು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ದಕ್ಷಿಣದ ಮಿಜೋರಾಂನ ಭಾರತ-ಮ್ಯಾನ್ಮಾರ್-ಬಾಂಗ್ಲಾದೇಶ ಟ್ರೈಜಂಕ್ಷನ್‍ನಲ್ಲಿರುವ ಬಂಡುಕ್ಬಂಗಾ ಗ್ರಾಮದ ಮೂಲಕ ಭಾರತಕ್ಕೆ ಬಂದಿದ್ದರು. ಅವರ ಶಿಬಿರವನ್ನು ಅರಕನ್ ಆರ್ಮಿ ಯೋಧರು ವಶಪಡಿಸಿಕೊಂಡ ನಂತರ ಮ್ಯಾನ್ಮಾರ್ ಸೈನಿಕರು ಮಿಜೋರಾಂಗೆ ಓಡಿಬಂದಿದ್ದರು.

ಶ್ರೀರಾಮ ಪಾದ ಸ್ಥಾಪಿಸಿದ ಸ್ಥಳದ ಅಭಿವೃದ್ಧಿ : ಮೋಹನ್ ಯಾದವ್

ಮ್ಯಾನ್ಮಾರ್ ಸೈನಿಕರನ್ನು ಹತ್ತಿರದ ಪರ್ವಾದಲ್ಲಿರುವ ಅಸ್ಸಾಂ ರೈಫಲ್ಸ್ ಶಿಬಿರಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ಅವರಲ್ಲಿ ಹೆಚ್ಚಿನವರನ್ನು ಲುಂಗ್ಲೈಗೆ ಸ್ಥಳಾಂತರಿಸಲಾಗಿತ್ತು.ಅಂದಿನಿಂದ ಅವರು ಅಸ್ಸಾಂ ರೈಫಲ್ಸ್‍ನ ಮೇಲ್ವಿಚಾರಣೆಯಲ್ಲಿದ್ದಾರೆ.

ಈ 276 ಸೈನಿಕರನ್ನು ಲೆಂಗ್‍ಪುಯಿ ವಿಮಾನ ನಿಲ್ದಾಣದಿಂದ ಮ್ಯಾನ್ಮಾರ್‍ಗೆ ಸಾಗಿಸಲು ಶನಿವಾರ ಮತ್ತು ಭಾನುವಾರದಂದು ಐಜ್ವಾಲ್‍ಗೆ ಕರೆತರಲಾಯಿತು. ಗುಂಪು ಕರ್ನಲ್ ನೇತೃತ್ವದಲ್ಲಿದೆ ಮತ್ತು 36 ಅಧಿಕಾರಿಗಳು ಮತ್ತು 240 ಕೆಳ ಶ್ರೇಣಿಯ ಸಿಬ್ಬಂದಿಯನ್ನು ಹೊಂದಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News