ನವದೆಹಲಿ, ಜೂ.11- ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲೆರಡು ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಭಾರತ ತಂಡವು ಈ ಬಾರಿ ಫೈನಲ್ ಹಂತಕ್ಕೆ ಅರ್ಹತೆ ಪಡೆಯದಿದ್ದರೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ವತಿಯಿಂದ 12.30 ಕೋಟಿ ಬಹುಮಾನ ಮೊತ್ತ ಸಿಗಲಿದೆ. ಇಂಗ್ಲೆಂಡ್‌ನ ಲಾರ್ಡ್‌್ಸನಲ್ಲಿ ಇಂದಿನಿಂದ ಪ್ಯಾಟ್ ಕಮಿನ್‌್ಸ ಸಾರಥ್ಯದ ಆಸ್ಟ್ರೇಲಿಯಾ ಹಾಗೂ ಟಿಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ನಡುವೆ 3ನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ 30.88 ಕೋಟಿ ಸಿಕ್ಕರೆ, ರನ್ನರ್ ಅಪ್ ತಂಡಕ್ಕೆ 18.50 ಕೋಟಿ ಸಿಗಲಿದ್ದು, 3ನೇ ಸ್ಥಾನಿಯಾಗಿರುವ ಭಾರತಕ್ಕೆ 12.30 ಕೋಟಿ ಸಿಗಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಮೂಲಕ ಟ್ರೋಫಿ ಬರ ನೀಗಿಸಿಕೊಳ್ಳುವತ್ತ ದಕ್ಷಿಣ ಆಫ್ರಿಕಾ ಹೆಜ್ಜೆ ಇಟ್ಟಿದ್ದರೆ, ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಲೆಕ್ಕಾಚಾರವನ್ನು ಆಸ್ಟ್ರೇಲಿಯಾ ಹಾಕಿಕೊಂಡಿದೆ. ಸತತ 3ನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡಬೇಕೆಂಬ ಕನಸು ಹೊತ್ತಿದ್ದ ಭಾರತ ತಂಡವು ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ರಿಂದ ವೈಟ್‌ವಾಶ್ ಹಾಗೂ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ3-1 ರಿಂದ ಸೋಲು ಕಂಡಿದ್ದರಿಂದ ಟ್ರೋಫಿ ಸುತ್ತು ತಲುಪುವಲ್ಲಿ ಟೀಂ ಇಂಡಿಯಾ ಎಡವಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಟೀಂಇಂಡಿಯಾವು ನ್ಯೂಜಿಲೆಂಡ್ (2021) ವಿರುದ್ಧ ಹಾಗೂ 2023ರಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಸಾರಥ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಸೋಲು ಕಾಣುವ ಮೂಲಕ ಟೆಸ್ಟ್ ಚಾಂಪಿಯನ್ ಶಿಪ್ ಗೆಲ್ಲುವಲ್ಲಿ ಮುಗ್ಗರಿಸಿತ್ತು.