ನವದೆಹಲಿ, ಮಾ.25 -ಭಾರತವು ವಿಶ್ವದ ಹಾಲು ಉತ್ಪಾದಕರಲ್ಲಿ ಆಗ್ರಸ್ಥಾನದಲ್ಲಿದೆ ಮತ್ತು ಈಗಿನ 239 ಎಂಎಂಟಿಯಿಂದ ಮುಂದಿನ ಐದು ವರ್ಷಗಳಲ್ಲಿ 300 ಮಿಲಿಯನ್ ಮೆಟ್ರಿಕ್ ಟನ್ ಹಾಲು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಮೋದಿ ಸರ್ಕಾರವು 2014 ರಲ್ಲಿ ರಾಷ್ಟ್ರೀಯ ಗೋಕುಲ್ ಮಿಷನ್ ಅನ್ನು ಪ್ರಾರಂಭಿಸಿದಾಗಿನಿಂದ, ದೇಶದಲ್ಲಿ ಹಾಲಿನ ಉತ್ಪಾದನೆಯು 63.5 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಅದನ್ನು 15 ಪ್ರತಿಶತದಷ್ಟು ಹೆಚ್ಚಿಸುವ ಭರವಸೆಯನ್ನು ಸರ್ಕಾರ ಹೊಂದಿದೆ ಎಂದು ಸಿಂಗ್ ಹೇಳಿದರು. ಭಾರತವು ಈಗ ವಿಶ್ವದ ಅಗ್ರ ಹಾಲು ಉತ್ಪಾದಕ ರಾಷ್ಟ್ರವಾಗಿದೆ. ದೇಶದಲ್ಲಿ ಸುಮಾರು 10 ಕೋಟಿ ಜನರು ಹಾಲು ಉತ್ಪಾದನೆಯಲ್ಲಿ ತೊಡಗಿದ್ದು, ಅದರಲ್ಲಿ ಶೇ.75 ಮಹಿಳೆಯರು ಇದ್ದಾರೆ ಎಂದು ಸಚಿವರು ಹೇಳಿದರು.
ಭಾರತದಲ್ಲಿ ಪ್ರತಿ ವ್ಯಕ್ತಿಯ ಹಾಲಿನ ಬಳಕೆ 471 ಗ್ರಾಂ ಎಂದು ಅವರು ಹೇಳಿದರು.ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ರಾಷ್ಟ್ರೀಯ ಗೋಕುಲ್ ಮಿಷನ್ ಅನ್ನು ಅನುಷ್ಠಾನಗೊಳಿಸುತ್ತಿದೆ. ಸ್ಥಳೀಯ ತಳಿಗಳ ಅಭಿವೃದ್ಧಿ ಮತ್ತು ಸಂರಕ್ಷಣೆ, ಗೋವಿನ ಜನಸಂಖ್ಯೆಯ ಆನುವಂಶಿಕ ಉನ್ನತೀಕರಣ ಮತ್ತು ಹಾಲಿನ ಉತ್ಪಾದನೆ ಮತ್ತು ಗೋವಿನ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಹಾಲು ಉತ್ಪಾದನೆಯನ್ನು ರೈತರಿಗೆ ಹೆಚ್ಚು ಲಾಭದಾಯಕವಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
2014 ರಲ್ಲಿ ಪ್ರಾರಂಭಿಸಲಾದ ಯೋಜನೆಯು 2021-2022 ರಿಂದ 2025-2026 ರವರೆಗೆ ಇಲಾಖೆಯ ಪರಿಷ್ಕೃತ ಮರುಜೋಡಣೆ ಯೋಜನೆಗಳ ಅಡಿಯಲ್ಲಿ ಮುಂದುವರಿಯುತ್ತದೆ.
ದನಗಳ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಸುಸ್ಥಿರ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಾಲಿನ ಉತ್ಪಾದನೆಯನ್ನು ಸುಸ್ಥಿರವಾಗಿ ಹೆಚ್ಚಿಸುವುದು ಮತ್ತು ಸಂತಾನೋತ್ಪತ್ತಿ ಉದ್ದೇಶಗಳಿಗಾಗಿ ಹೆಚ್ಚಿನ ಆನುವಂಶಿಕ ಅರ್ಹತೆ ಹೊಂದಿರುವ ಬುಲ್‌ಗಳ ಬಳಕೆಯನ್ನು ಪ್ರಚಾರ ಮಾಡುವುದು ಇದರ ಉದ್ದೇಶಗಳಾಗಿವೆ.
ಸಂತಾನೋತ್ಪತ್ತಿ ಜಾಲವನ್ನು ಬಲಪಡಿಸುವ ಮೂಲಕ ಮತ್ತು ಕೃತಕ ಗರ್ಭಧಾರಣೆಯ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಕೃತಕ ಗರ್ಭಧಾರಣೆಯ ವ್ಯಪ್ತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು.