Monday, December 2, 2024
Homeರಾಷ್ಟ್ರೀಯ | Nationalರಕ್ಷಣಾ ಸಾಧನಗಳ ಪ್ರಮುಖ ರಫ್ತುದಾರರಲ್ಲಿ ಒಂದಾದ ಭಾರತ

ರಕ್ಷಣಾ ಸಾಧನಗಳ ಪ್ರಮುಖ ರಫ್ತುದಾರರಲ್ಲಿ ಒಂದಾದ ಭಾರತ

India will be among leading exporters of defence equipment in 10 years, says DRDO chairman

ಮುಂಬೈ,ಅ.6-ಭಾರತವು ಕಳೆದ ಹತ್ತು ವರ್ಷಗಳಲ್ಲಿ ರಕ್ಷಣಾ ಸಾಧನಗಳ ಪ್ರಮುಖ ರಫ್ತುದಾರರಲ್ಲಿ ಒಂದಾಗಿದೆ ಮತ್ತು ಆಮದು ಶೇ.5ರಿಂದ 10 ರಷ್ಟು ಇಳಿಯಲಿದೆ ಎಂದು ಡಿಆರ್‌ಡಿಒ ಅಧ್ಯಕ್ಷ ಸಮೀರ್‌ ವಿ ಕಾಮತ್‌ ಹೇಳಿದ್ದಾರೆ.

ದೇಶದ ರಕ್ಷಣಾ ಆಮದುಗಳು ಕಡಿಮೆಯಾಗುತ್ತಿವೆ ಮತ್ತು ಕಳೆದ ವರ್ಷ ಬಜೆಟ್‌ನಲ್ಲಿ ಸುಮಾರು 90 ಪ್ರತಿಶತ ಸ್ಥಳೀಯ ವ್ಯವಸ್ಥೆಗಳಲ್ಲಿ ಬಳಸಲಾಗಿದೆ ಎಂದು ಕಾಮತ್‌ ತಿಳಿಸಿದ್ದಾರೆ.

ಇಲ್ಲಿನ ಛತ್ರಪತಿ ಶಾಹು ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ನಲ್ಲಿ ಮರಾಠವಾಡದಲ್ಲಿ ಆಯೋಜಿಸಿದ್ದ ಡಿಫೆನ್ಸ್ ಇನ್ನೋವೇಶನ್‌ ಚಾಲೆಂಜ್‌ ಫಾರ್‌ ಎಕ್ಸಲೆನ್ಸ್ ಸಮೇಳನ (ಡೈಸ್‌‍) ಉದ್ಘಾಟಿಸಿ ಅವರು ಮಾತನಾಡಿದರು.

ಹತ್ತು ವರ್ಷಗಳ ಹಿಂದೆ, ನಾವು ರಕ್ಷಣಾ ವ್ಯವಸ್ಥೆಗಳಲ್ಲಿ ಆಮದುದಾರರಲ್ಲಿ ಮುಂಚೂಣಿಯಲ್ಲಿದ್ದೆವು ಆದರೆಕಾಲ ಬದಲಾಗಿದೆ ಕಳೆದ ವರ್ಷದ ಅಂಕಿಅಂಶಗಳನ್ನು ನೋಡಿದರೆ, ನಮ ಬಂಡವಾಳದಲ್ಲಿ ಸುಮಾರು 90 ಪ್ರತಿಶತವನ್ನು ಸ್ವದೇಶಿ ವ್ಯವಸ್ಥೆಗಳಿಗೆ ಬಳಸಲಾಗಿದೆ. ನನಗೆ ವಿಶ್ವಾಸವಿದೆ ಇನ್ನು ಕೆಳವೇ ವರ್ಷದಲ್ಲಿ ಆಮದು ಪ್ರಮಾಣ ಅತ್ಯಲ್ಪವಾಗಿರುತ್ತವೆ ಎಂದರು.

ಈ ನಡುವೆ 10 ವರ್ಷಗಳಲ್ಲಿ ಭಾರತವು ರಕ್ಷಣಾ ಸಾಧನಗಳನ್ನು ರಫ್ತು ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತ 2028 ರ ವೇಳೆಗೆ 50,000 ಕೋಟಿ ಮತ್ತು 2035 ರ ವೇಳೆಗೆ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಫ್ತು ಸಾಧಿಸುವ ಗುರಿಯನ್ನು ಹೊಂದಿದೆ ಎಂದರು.

ರಕ್ಷಣೆಗೆ ಸಂಬಂಧಿಸಿದ ಸಂಶೋಧನೆಗೆ ಖರ್ಚು ಹೆಚ್ಚು ಮಾಡುತ್ತಿದ್ದೇವೆ ನಿಜ . ಆದರೆ, ನಾವು ಇನ್ನೂ ಅಭಿವೃದ್ಧಿ ಹೊಂದಿದ ದೇಶವಾಗಿಲ್ಲ, ಮತ್ತು ಇತರ ಆದ್ಯತೆಗಳಿವೆ. ನಾವು ತಂತ್ರಜ್ಞಾನದಲ್ಲಿ ಹೆಚ್ಚು ಹೂಡಿಕೆ ಮಾಡಬೇಕು ಎಂದು ಅವರು ಹೇಳಿದರು. ಇನ್ನೋವೇಶನ್‌ ಚಾಲೆಂಜ್‌ಗೆ ಅರ್ಜಿಗಳು ಅಕ್ಟೋಬರ್‌ 31 ರವರೆಗೆ ತೆರೆದಿರುತ್ತವೆ ಮತ್ತು ಅಂತಿಮ ಸುತ್ತು ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಮ್ಯಾಜಿಕ್‌ನ ನಿರ್ದೇಶಕ ಪ್ರಸಾದ್‌ ಕೋಕಿಲ್‌‍ ತಿಳಿಸಿದರು.

RELATED ARTICLES

Latest News