Wednesday, December 4, 2024
Homeರಾಷ್ಟ್ರೀಯ | Nationalಪಾಕಿಸ್ತಾನಿ ಕ್ವಾಡ್‌ಕಾಪ್ಟರ್‌ಗಳ ಮೇಲೆ ಬಿಎಸ್ಎಫ್ ಗುಂಡಿನ ದಾಳಿ

ಪಾಕಿಸ್ತಾನಿ ಕ್ವಾಡ್‌ಕಾಪ್ಟರ್‌ಗಳ ಮೇಲೆ ಬಿಎಸ್ಎಫ್ ಗುಂಡಿನ ದಾಳಿ

ಜಮ್ಮು, ಫೆ.16:ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಎರಡು ವಿಭಿನ್ನ ಸ್ಥಳಗಳಲ್ಲಿ ಪಾಕಿಸ್ತಾನದ ಕ್ವಾಡ್‍ಕಾಪ್ಟರ್ ಹರುಬರುತ್ತಿದ್ದನ್ನು ಪತ್ತೆ ಮಡಿದ ಬಿಎಸ್ಎಫ್ ಸೇನಾ ಪಡೆಗಳು ಗುಂಡಿನ ದಾಳಿ ನಡೆಸಿದೆ. ಬಾಲ್ನೋಯ್-ಮೆಂಧರ್ ಮತ್ತು ಗುಲ್ಪುರ್ ಸೆಕ್ಟರ್‍ಗಳಲ್ಲಿನ ಭಾರತದ ಭೂಪ್ರದೇಶದ ಮೇಲೆ ಸಂಕ್ಷಿಪ್ತವಾಗಿ ಸುಳಿದಾಡಿದ ನಂತರ ಪಾಕಿಸ್ತಾನದ ಕಡೆಗೆ ಮರಳಿದವು ಎಂದು ಅವರು ಅಧಿಕಾರಿಗಳು ಹೇಳಿದರು.

ಕ್ವಾಡ್‍ಕಾಪ್ಟರ್‍ಗಳಿಂದ ಶಸ್ತ್ರಾಸ್ತ್ರಗಳು ಅಥವಾ ಮಾದಕ ದ್ರವ್ಯಗಳನ್ನು ತಂದಿದೆಯ ಎಂದು ಖಚಿತಪಡಿಸಿಕೊಳ್ಳಲು ಎರಡೂ ವಲಯಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಸಿದ್ದಾರೆ.

ಇಂದು ಬೆಳಗ್ಗೆ 6.30ರ ಸುಮಾರಿಗೆ ಮೆಂಧರ್‍ನ ಬಲ್ನೋಯಿ ಪ್ರದೇಶಕ್ಕೆ ಎರಡು ಕ್ವಾಡ್‍ಕಾಪ್ಟರ್‍ಗಳು ಪ್ರವೇಶಿಸುತ್ತಿರುವುದನ್ನು ಗಮನಿಸಿದ ನಮ್ಮ ಪಡೆಗಳು ಗುಂಡು ಹಾರಿಸಿದವು ಆದರೆ ರಿಮೋಟ್‍ನಿಂದ ನಿಯಂತ್ರಿತ ಯಂತ್ರಗಳು ಹಿಂತಿರುಗಿದವು ಅಂತೆಯೇ, ಅದೇ ಸಮಯದಲ್ಲಿ ಗುಲ್ಪುರ್ ಸೆಕ್ಟರ್ ಮೇಲೆ ತೂಗಾಡುತ್ತಿದ್ದ ಒಂದೆರಡು ಕ್ವಾಡ್ಕಾಪ್ಟಗಳು ಭಾರತೀಯ ಸೈನಿಕರ ಗುಂಡಿನ ದಾಳಿ ನಂತರ ಹಿಂತಿರುಗಿವೆ.

ಅಮೇರಿಕಾದಲ್ಲಿ ಭಾರತೀಯ ಮೂಲದ ಮೋಟೆಲ್ ಮಾಲೀಕನ ಗುಂಡಿಕ್ಕಿ ಹತ್ಯೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಬಿಡಲು ಪಾಕಿಸ್ತಾನವು ಡ್ರೋನ್‍ಗಳನ್ನು ಬಳಸುತ್ತಿದೆ.ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇತ್ತೀಚೆಗೆ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಬೀಳಿಸುವ ಉದ್ದೇಶದಿಂದ ಗಡಿಯಾಚೆಯಿಂದ ಹಾರಿಸಲಾದ ಡ್ರೋನ್‍ಗಳ ಬಗ್ಗೆ ಮಾಹಿತಿ ನೀಡುವವರಿಗೆ ಮೂರು ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.

RELATED ARTICLES

Latest News