Friday, May 3, 2024
Homeಅಂತಾರಾಷ್ಟ್ರೀಯಭಾರಿ ಮಳೆ : ಸದ್ಯಕ್ಕೆ ದುಬೈಗೆ ಬರದಂತೆ ಭಾರತೀಯರಿಗೆ ಸೂಚನೆ

ಭಾರಿ ಮಳೆ : ಸದ್ಯಕ್ಕೆ ದುಬೈಗೆ ಬರದಂತೆ ಭಾರತೀಯರಿಗೆ ಸೂಚನೆ

ಅಬುಧಾಬಿ,ಏ.20- ಭಾರೀ ಮಳೆಯಿಂದಾಗಿ ಅನಾಹುತ ಉಂಟಾಗಿರುವ ಹಿನ್ನೆಲೆಯಲ್ಲಿ ಸದ್ಯ ದುಬೈಗೆ ಬರುವ ಯೋಜನೆ ಇದ್ದರೆ ಮುಂದಕ್ಕೆ ಹಾಕಬೇಕೆಂದು ಎಂದು ಭಾರತೀಯ ನಾಗರಿಕರಿಗೆ ಭಾರತದ ರಾಯಭಾರಿ ಸೂಚನೆ ಕೊಟ್ಟಿದೆ. ಈ ವಾರ ದುಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಅಥವಾ ಆ ಮಾರ್ಗದಲ್ಲಿ ಹಾದುಹೋಗುವ ವಿಮಾನಗಳಲ್ಲಿ ಪ್ರಯಾಣಿಸುವ ಭಾರತೀಯ ಪ್ರಯಾಣಿಕರು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ದುಬೈ ಪ್ರಯಾಣವನ್ನು ಮುಂದೂಡಬೇಕೆಂದು ಎಂದು ರಾಯಭಾರ ಕಚೇರಿ ಪ್ರಕಟಣೆ ತಿಳಿಸಿದೆ.

ಈ ವಾರದ ಆರಂಭದಲ್ಲಿ ಸುರಿದ ಭಾರೀ ಮಳೆಯಿಂದ ಚೇತರಿಸಿಕೊಳ್ಳಲು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಯತ್ನಿಸುತ್ತಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಯುಎಇ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ವಿಮಾನಗಳ ನಿರ್ಗಮನ ದಿನಾಂಕ ಮತ್ತು ಸಮಯದ ಕುರಿತು ಆಯಾ ವಿಮಾನಯಾನ ಸಂಸ್ಥೆಗಳಿಂದ ಅಂತಿಮ ದೃಢೀಕರಣದ ನಂತರವೇ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ವಿಮಾನ ನಿಲ್ದಾಣದಿಂದ ಭಾರತ, ಪಾಕಿಸ್ತಾನ, ಸೌದಿ ಮತ್ತು ಯುನೈಟೆಡ್ ಕಿಂಗ್‍ಡಮ್ ಸೇರಿದಂತೆ ಹಲವು ದೇಶಗಳಿಗೆ ಏಪ್ರಿಲ್ 16 ರಂದು ವಿಮಾನಗಳ ಕಾರ್ಯಾಚರಣೆ ವಿಳಂಬವಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ದುಬೈನಲ್ಲಿನ ಪ್ರವಾಹ ದೃಶ್ಯದ ವೀಡಿಯೋ ಹಾಗೂ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು.

RELATED ARTICLES

Latest News