Sunday, October 6, 2024
Homeಅಂತಾರಾಷ್ಟ್ರೀಯ | Internationalಅಮೆರಿಕದ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಅನುಮಾನಾಸ್ಪದ ಸಾವು

ಅಮೆರಿಕದ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಅನುಮಾನಾಸ್ಪದ ಸಾವು

Indian Embassy official found dead at mission premises in Washington DC

ವಾಷಿಂಗ್ಟನ್‌,ಸೆ.21- ಅಮೆರಿಕದ ಭಾರತೀಯ ರಾಯಭಾರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ನಿಧನರಾಗಿದ್ದಾರೆ.ನಮ ಸದಸ್ಯರೊಬ್ಬರು ಸೆಪ್ಟೆಂಬರ್‌ 18 ರಂದು ನಿಧನರಾದರು ಎಂದು ಯುನೈಟೆಡ್‌ ಸ್ಟೇಟ್ಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಮತದೇಹವನ್ನು ಭಾರತಕ್ಕೆ ತ್ವರಿತವಾಗಿ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಿತ ಏಜೆನ್ಸಿಗಳು ಮತ್ತು ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ಆಳವಾದ ವಿಷಾದದೊಂದಿಗೆ, 2024 ರ ಸೆಪ್ಟೆಂಬರ್‌ 18 ರ ಸಂಜೆ ಭಾರತೀಯ ರಾಯಭಾರ ಕಚೇರಿಯ ಸದಸ್ಯರೊಬ್ಬರು ನಿಧನರಾದರು ಎಂದು ನಾವು ದಢೀಕರಿಸಲು ಬಯಸುತ್ತೇವೆ ಎಂದು ಅಮೆರಿಕದಲ್ಲಿನ ಭಾರತೀಯ ರಾಯಭಾರ ಕಚೇರಿ ಹೇಳಿದೆ.

ಕುಟುಂಬದ ಗೌಪ್ಯತೆಯ ಕಾಳಜಿಯಿಂದ ಮತರ ಬಗ್ಗೆ ಹೆಚ್ಚುವರಿ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಈ ದುಃಖದ ಸಮಯದಲ್ಲಿ ನಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಕುಟುಂಬದೊಂದಿಗೆ ಇವೆ ಎಂದು ಅದು ಸೇರಿಸಿದೆ.

RELATED ARTICLES

Latest News