Saturday, July 27, 2024
Homeಅಂತಾರಾಷ್ಟ್ರೀಯನೇಪಾಳ ನದಿಯಲ್ಲಿ ಭಾರತೀಯ ನಂಬರ್‌ ಪ್ಲೇಟ್‌ ವಾಹನ ಪತ್ತೆ

ನೇಪಾಳ ನದಿಯಲ್ಲಿ ಭಾರತೀಯ ನಂಬರ್‌ ಪ್ಲೇಟ್‌ ವಾಹನ ಪತ್ತೆ

ಚಿತ್ವಾನ್,ಜ.16- ಇಂದು ಮುಂಜಾನೆ ನೇಪಾಳದ ಚಿತ್ವಾನ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಭಾರತೀಯ ನಂಬರ್ ಪ್ಲೇಟ್ ಹೊಂದಿರುವ ವಾಹನ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಇಕ್ಷ್ಯಕಾಮನ ಗ್ರಾಮ ಸಭೆ-5 ರ ಸ್ಥಳೀಯರು ಭಾರತೀಯ ನಂಬರ್ ಪ್ಲೇಟ್ ಹೊಂದಿದ್ದ ವಾಹನ ನದಿಗೆ ಬಿದ್ದಿದೆ ಎಂದು ಶಂಕಿಸಿ ನಮಗೆ ಕರೆ ಮಾಡಿದ್ದರು ಎಂದು ಜಿಲ್ಲಾ ಪೊಲೀಸ್ ಕಛೇರಿಯ ಚಿತ್ವಾನ್‍ನ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀರಾಮ್ ಭಂಡಾರಿ ತಿಳಿಸಿದ್ದಾರೆ.

85 ಮೀಟರ್ ದೂರ ನದಿಗೆ ಧುಮುಕುವ ವೇಳೆ ಜೀಪ್ ಪಲ್ಟಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಮುಳುಗಿದ ವಾಹನದಲ್ಲಿದ್ದ ಪ್ರಯಾಣಿಕರ ಪರಿಸ್ಥಿತಿ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅವರು ವಿವರಿಸಿದ್ದಾರೆ.

ಮನುಷ್ಯನ ದೇಹದಲ್ಲಿ ಮೈಕ್ರೋಚಿಪ್ ಆರೋಪ, ತನಿಖೆಗೆ ಕೋರ್ಟ್ ಸೂಚನೆ

ಏತನ್ಮಧ್ಯೆ, ಶುಕ್ರವಾರ ರಾತ್ರಿ ಮಧ್ಯ-ಪಶ್ಚಿಮ ನೇಪಾಳದ ಡ್ಯಾಂಗ್ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಭಾಲುಬಾಂಗ್‍ನಲ್ಲಿ ಸಂಭವಿಸಿದ ಅಪಘಾತದಲ್ಲಿ ಸತ್ತ ಎಂಟು ಮಂದಿಯ ಗುರುತು ಮಾತ್ರ ಪತ್ತೆಯಾಗಿದೆ.

RELATED ARTICLES

Latest News