Friday, November 22, 2024
Homeಅಂತಾರಾಷ್ಟ್ರೀಯ | Internationalಸಿಂಗಾಪುರದಲ್ಲಿ ವಿಷಾನಿಲ ಸೇವಿಸಿ ಭಾರತೀಯ ಮೂಲದ ವ್ಯಕ್ತಿ ಸಾವು

ಸಿಂಗಾಪುರದಲ್ಲಿ ವಿಷಾನಿಲ ಸೇವಿಸಿ ಭಾರತೀಯ ಮೂಲದ ವ್ಯಕ್ತಿ ಸಾವು

ಸಿಂಗಾಪುರ, ಮೇ 29 (ಪಿಟಿಐ) ಸಿಂಗಾಪುರದಲ್ಲಿ ವಿಷಕಾರಿ ಹೊಗೆಯನ್ನು ಸೇವಿಸಿ ಸಾವನ್ನಪ್ಪಿದ ಭಾರತೀಯ ಮೂಲದ ವ್ಯಕ್ತಿಯ ಮತದೇಹವನ್ನು ಅಂತಿಮ ವಿಧಿವಿಧಾನಗಳಿಗಾಗಿ ಭಾರತದಲ್ಲಿನ ಅವರ ಸ್ವಗ್ರಾಮಕ್ಕೆ ತರಲಾಗಿದೆ.ಶ್ರೀನಿವಾಸನ್‌ ಶಿವರಾಮನ್‌ ಸೂಪರ್‌ಸಾನಿಕ್‌ ನಿರ್ವಹಣೆ ಸೇವೆಗಳ ಕ್ಲೀನಿಂಗ್‌ ಆಪರೇಷನ್‌ ವ್ಯಾನೇಜರ್‌ ಶ್ರೀನಿವಾಸನ್‌ ಶಿವರಾಮನ್‌ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ಈತ ಮೇ 23 ರಂದು ರಾಷ್ಟ್ರೀಯ ವಾಟರ್‌ ಏಜೆನ್ಸಿ ಪಬ್‌ನ ಚೋ ಚು ಕಾಂಗ್‌ ವಾಟರ್‌ವರ್ಕ್‌್ಸನಲ್ಲಿ ಟ್ಯಾಂಕ್‌ ಅನ್ನು ಶುಚಿಗೊಳಿಸುವಾಗ ವಿಷಕಾರಿ ಹೊಗೆಯನ್ನು ಉಸಿರಾಡಿ ಸಾವನ್ನಪ್ಪಿದ್ದರು ಎನ್ನಲಾಗಿದೆ.

ಅವರು ಮತ್ತು ಇಬ್ಬರು ಮಲೇಷಿಯಾದ ಕೆಲಸಗಾರರು ಅನಿಲವನ್ನು ಉಸಿರಾಡಿದ ನಂತರ ಬೆಳಿಗ್ಗೆ 11.15 ರ ಸುಮಾರಿಗೆ ಪಬ್‌ ಸೌಲಭ್ಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅದೇ ದಿನ ಆಸ್ಪತ್ರೆಯಲ್ಲಿ ಅವರು ಮತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಮಲೇಷಿಯಾದ ಕಾರ್ಮಿಕರು ಇನ್ನೂ ತೀವ್ರ ನಿಗಾದಲ್ಲಿದ್ದಾರೆ ಎಂದು ಕಾರ್ಮಿಕರಲ್ಲಿ ಒಬ್ಬರನ್ನು ನೇಮಿಸಿಕೊಂಡಿರುವ ಸ್ಟಾರ್‌ಗ್ರೂಪ್‌ ಎಸ್ಟ್‌ ತಿಳಿಸಿದೆ.

ನೀರಿನ ಸಂಸ್ಕರಣೆಯ ಉಪ-ಉತ್ಪನ್ನವಾದ ಹೈಡ್ರೋಜನ್‌ ಸಲ್ಫೈಡ್‌ ಅನಿಲವನ್ನು ಕಾರ್ಮಿಕರು ಉಸಿರಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ ಎಂದು ಹೇಳಲಾಗಿದೆ.ಶಿವರಾಮನ್‌ ಅವರ ಪಾರ್ಥಿವ ಶರೀರವನ್ನು ಮೇ 28 ರಂದು ಅಂತಿಮ ವಿಧಿವಿಧಾನಗಳಿಗಾಗಿ ಭಾರತಕ್ಕೆ ಕೊಂಡೊಯ್ಯಲಾಯಿತು ಮೇ 26 ರಂದು ನಡೆದ ಸಭೆಯಲ್ಲಿ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಒಳಗೊಂಡ ಸುಮಾರು 50 ಜನರು ಅಂತಿಮ ನಮನ ಸಲ್ಲಿಸಿದರು.

RELATED ARTICLES

Latest News