ಹ್ಯಾಂಗ್ಝೌ,ಅ.1- ಶೂಟಿಂಗ್ ವಿಭಾಗದಲ್ಲಿ ಪದಕಗಳ ಸರಮಾಲೆಯನ್ನೇ ಪೋಣಿಸಿರುವ ಭಾರತದ ಶೂಟರ್‍ಗಳು ತಮ್ಮ ಬತ್ತಳಿಕೆಗೆ ಮತ್ತೊಂದು ಚಿನ್ನದ ಪದಕವನ್ನು ಸೇರಿಸಿಕೊಂಡಿದ್ದಾರೆ. ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 2023ನೇ ಸಾಲಿನ ಏಷ್ಯಾನ್ ಗೇಮ್ಸ್‍ನಲ್ಲಿ ಇದುವರೆಗೂ 7 ಚಿನ್ನದ ಪದಕಗಳನ್ನು ಗೆದ್ದು ಸಂಭ್ರಮಿಸಿದ್ದು, ಇಂದು ನಡೆದ ಪುರುಷರ ಟ್ರಾಪ್ ವಿಭಾಗದಲ್ಲೂ ಮತ್ತೊಂದು ಸ್ವರ್ಣದ ಪದಕ ಲಭಿಸಿದೆ.
ಪುರುಷರ ಟ್ರಾಪ್ ವಿಭಾಗದ ಫೈನಲ್ ಸುತ್ತಿನಲ್ಲಿ ಭಾರತವನ್ನು ಪ್ರತಿನಿಸಿದ್ದ ಕನ್ನನ್ ಚೆನಯ್, ಜೊರವರ್ ಸಿಂಗ್ ಸಂಧು ಮತ್ತು ಪೃಥ್ವಿರಾಜ್ ತೊಂಡೈಮನ್ ಅವರು ಒಟ್ಟು 361 ಅಂಕಗಳನ್ನು ಕಲೆ ಹಾಕುವುದರೊಂದಿಗೆ ಸ್ವರ್ಣ ಪದಕವನ್ನು ಜಯಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ
ಕುವೈತ್‍ನ ಶೂಟರ್‍ಗಳು 352 ಅಂಕ ಹಾಗೂ ಚೀನಾ 346 ಅಂಕಗಳನ್ನು ಕಲೆ ಹಾಕುವ ಮೂಲಕ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದು ಸಂಭ್ರಮಿಸಿದರು.
ಮಹಿಳಾ ಶೂಟರ್‍ಗಳಿಗೆ ಬೆಳ್ಳಿ ಬೆಡಗಿ:
ಇಂದು ಬೆಳಗ್ಗೆ ನಡೆದ ಮಹಿಳೆಯರ ಟ್ರಾಪ್ ವಿಭಾಗದಲ್ಲಿ ಭಾರತದ ರಾಜೇಶ್ವರಿ ಕುಮಾರಿ, ಮನಿಶಾ ಕೈರ್, ಪ್ರೀತಿ ರಜಾಕ್ ಅವರು 337 ಅಂಕಗಳನ್ನು ಕಲೆ ಹಾಕುವ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಭಾರತದ ಮಹಿಳಾ ಶೂಟರ್‍ಗಳಿಗೆ ಪ್ರಬಲ ಪೈಪೋಟಿ ನೀಡಿದ ಚೀನಾ ಚಿನ್ನದ ಪದಕವನ್ನು ಗೆದ್ದು ಸಂಭ್ರಮಿಸಿದೆ.