Saturday, December 28, 2024
Homeಕ್ರೀಡಾ ಸುದ್ದಿ | Sportsಕಪ್ಪು ಪಟ್ಟಿ ಧರಿಸಿ ಮನಮೋಹನ್‌ ಸಿಂಗ್‌ ಅವರ ನಿಧನಕ್ಕೆ ಗೌರವ ಸೂಚಿಸಿದ ಟೀಮ್ ಇಂಡಿಯಾ

ಕಪ್ಪು ಪಟ್ಟಿ ಧರಿಸಿ ಮನಮೋಹನ್‌ ಸಿಂಗ್‌ ಅವರ ನಿಧನಕ್ಕೆ ಗೌರವ ಸೂಚಿಸಿದ ಟೀಮ್ ಇಂಡಿಯಾ

Indian team wear black armbands in memory of former PM Manmohan Singh

ಮೆಲ್ಬೋರ್ನ್‌,ಡಿ.27- ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಗೌರವಾರ್ಥವಾಗಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನದಂದು ಭಾರತ ಕ್ರಿಕೆಟ್‌ ತಂಡವು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದೆ. ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ಸರಣಾರ್ಥ ಭಾರತ ತಂಡವು ಕೈಗೆ ಕಪ್ಪು ಪಟ್ಟಿಗಳನ್ನು ಧರಿಸಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಮನಮೋಹನ್‌ ಸಿಂಗ್‌ ಭಾರತ ಮತ್ತು ಪಾಕ್‌ ಜೊತೆ ಕ್ರಿಕೆಟ್‌ ನಂಟು ಆರಂಭಿಸಿದ್ದು ಮಾತ್ರವಲ್ಲದೇ ಪಾಕ್‌ ಪ್ರಧಾನಿ ಜೊತೆ ಕುಳಿತು ಎರಡೂ ದೇಶಗಳ ನಡುವಿನ ಪಂದ್ಯ ಸಹ ವೀಕ್ಷಿಸಿದ್ದರು.

ಭಾರತ ಪಾಕಿಸ್ತಾನ ಕ್ರಿಕೆಟ್‌ ಮ್ಯಾಚ್‌ ಅಂದರೆ ಎರಡೂ ದೇಶಗಳ ಅಭಿಮಾನಿಗಳಿಗೆ ಭಾವನಾತಕ ವಿಚಾರ. ಈಗ ಕೇವಲ ಐಸಿಸಿ, ಏಷ್ಯಾ ಕಪ್‌ನಲ್ಲಿ ಮಾತ್ರ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ. ಆದರೆ ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಉಭಯ ದೇಶಗಳ ಕ್ರಿಕೆಟ್‌ ಸಂಬಂಧ ಸುಧಾರಣೆಯಾಗಿತ್ತು.

2008ರ ಮುಂಬೈ ದಾಳಿ ಬಳಿಕ ಭಾರತ-ಪಾಕ್‌ ಕ್ರಿಕೆಟ್‌ ಸಂಬಂಧ ಬಹಳ ಹಳಸಿತ್ತು. ಈಗ ಹೇಗೆ ವಿರೋಧ ವ್ಯಕ್ತವಾಗಿತ್ತೋ ಆ ಸಮಯದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಎರಡು ದೇಶಗಳ ಮಧ್ಯೆ ಹಳಸಿದ್ದ ಕ್ರಿಕೆಟ್‌ ಸಂಬಂಧಕ್ಕೆ ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಚಾಲನೆ ಸಿಕ್ಕಿತ್ತು.

2011ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನು ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಆಯೋಜಿಸಿತ್ತು. ಪಾಕ್‌ ತಂಡ ಲೀಗ್‌ ಮತ್ತು ಕ್ವಾರ್ಟರ್‌ ಫೈನಲ್‌ ಪಂದ್ಯಗಳನ್ನು ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಆಡಿದ್ದರೂ ಭಾರತದ ವಿರುದ್ಧದ ಸೆಮಿಫೈನಲ್‌ ಪಂದ್ಯ ಆಡಲು ಭಾರತಕ್ಕೆ ಬರಲೇಬೇಕಿತ್ತು.

ಈ ಸಂದರ್ಭದಲ್ಲಿ ಮನಮೋಹನ್‌ ಸಿಂಗ್‌ ಅವರು ಪಾಕ್‌ ಪ್ರಧಾನಿ ಯೂಸುಫ್‌ರಝಾ ಗಿಲಾನಿ ಅವರಿಗೆ ಪಂದ್ಯ ವೀಕ್ಷಣೆಗೆ ಬರುವಂತೆ ಆಹ್ವಾನಿಸಿದ್ದರು. ಈ ಆಹ್ವಾನ ಸ್ವೀಕರಿಸಿದ ಗಿಲಾನಿ ಭಾರತಕ್ಕೆ ಆಗಮಿಸಿದ್ದರು. ಪಂಜಾಬಿನ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಇಬ್ಬರೂ ನಾಯಕರು ಎರಡು ತಂಡಗಳ ಆಟಗಾರರಿಗೆ ಕೈ ಕುಲುಕಿ ಶುಭ ಹಾರೈಸಿ ಒಟ್ಟಿಗೇ ಕುಳಿತು ಪಂದ್ಯ ವೀಕ್ಷಿಸಿದ್ದರು.

2012ರಲ್ಲಿ ಭಾರತ-ಪಾಕ್‌ ನಡುವೆ ಭಾರತದಲ್ಲಿ ದ್ವಿಪಕ್ಷೀಯ ಸರಣಿ ನಡೆದಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕ್‌ 2-1 ಅಂತರದಿಂದ ಗೆದ್ದರೆ ಎರಡು ಪಂದ್ಯಗಳ ಟಿ20 ಸರಣಿ 1-1ರಲ್ಲಿ ಡ್ರಾಗೊಂಡಿತ್ತು. ಎರಡೂ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿ ನಡೆದಿದ್ದು ಅದೇ ಕೊನೆ ಬಾರಿ.

RELATED ARTICLES

Latest News