Friday, November 22, 2024
Homeಕ್ರೀಡಾ ಸುದ್ದಿ | Sportsಪ್ಯಾರಾ ಏಷ್ಯನ್ ಗೇಮ್ಸ್​​ನಲ್ಲಿ ಭಾರತೀಯರ ಪದಕ ಭೇಟೆ ಶುರು

ಪ್ಯಾರಾ ಏಷ್ಯನ್ ಗೇಮ್ಸ್​​ನಲ್ಲಿ ಭಾರತೀಯರ ಪದಕ ಭೇಟೆ ಶುರು

ಹ್ಯಾಂಗ್‍ಝೌ, ಅ.23 -ಪುರುಷರ ಹೈಜಂಪ್ ಟಿ 63 ಮತ್ತು ಪುರುಷರ ಕ್ಲಬ್ ಥ್ರೋ ಎಫ್51 ಸ್ಪರ್ಥೆಗಳಲ್ಲಿ ಭಾರತ ಎಲ್ಲಾ ಮೂರು ಪದಕಗಳನ್ನು ಗೆದ್ದು ಬೀಗಿದೆ.ಶೈಲೇಶ್ ಕುಮಾರ್ ಮತ್ತು ಪ್ರಣವ್ ಸೂರ್ಮಾ ಆಯಾ ವಿಭಾಗಗಳಲ್ಲಿ ಚಿನ್ನವನ್ನು ಗೆದ್ದು ಹ್ಯಾಂಗ್‍ಝೌ ಏಷ್ಯನ್ ಪ್ಯಾರಾ ಗೇಮ್ಸ್‍ನಲ್ಲಿ ಅಬ್ಬರ ಆರಂಭಿಸಿದ್ದಾರೆ.

ಮೊದಲಿಗೆ ಶೈಲೇಶ್‍ಕುಮಾರ್ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಹೊಸ ದಾಖಲೆ ಮಾಡಿದ್ದು 1.82 ಮೀ ಎತ್ತರ ಜಿಗಿದು ಚಿನ್ನ ಗೆದ್ದರೆ, ಮರಿಯಪ್ಪನ್ ತಂಗವೇಲು (1.80 ಮೀ) ಮತ್ತು ಗೋವಿಂದಭಾಯ್ ರಾಮಸಿಂಗ್ ಭಾಯಿ ಪಾಯಾರ್ (1.78 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.ವಿಶೇಷವೆಂದೆ ಈ ವಿಭಾದ ಸ್ಪರ್ಧೆಯಲ್ಲಿ ಮೂವರು ಭಾರತೀಯರು ಮಾತ್ರ ಸ್ರ್ಪಧಿಗಳಾಗಿದ್ದರು.

ಪುರುಷರ ಕ್ಲಬ್ ಥ್ರೋ ಎಫ್ 51 ಸ್ಪರ್ಧೆಯಲ್ಲಿ, ಸೂರ್ಮಾ ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆ ನಿರ್ಮಿಸಿ 30.01 ಮೀಟರ್ ದೂರ ಡಿಸ್ಕ್ ಎಸೆದು ಚಿನ್ನ ಗೆದ್ದರೆ, ಧರಂಬೀರ್ (28.76 ಮೀ) ಮತ್ತು ಅಮಿತ್ ಕುಮಾರ್ (26.93 ಮೀ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳಲು ಕೇರಳ ಘಟಕ ತೀರ್ಮಾನ

ಈವೆಂಟ್‍ನಲ್ಲಿ ಕೇವಲ ನಾಲ್ವರು ಸ್ರ್ಪಧಿಗಳು ಇದ್ದರು, ಸೌದಿ ಅರೇಬಿಯಾದ ರಾ ಅಲಿ ಅಲ್ಹರ್ತಿ 23.77 ಮೀಟರ್ ಎಸೆದು ಕೊನೆಯ ಸ್ಥಾನ ಪಡೆದರು. ಪುರುಷರ ಶಾಟ್‍ಪುಟ್ ಎಫ್11 ಸ್ಪರ್ಧೆಯಲ್ಲಿ ಮೋನು ಘಂಗಾಸ್ 12.33 ಮೀಟರ್ ದೂರ ಕ್ರಮಿಸಿ ಕಂಚಿನ ಪದಕ ಗೆದ್ದರು.ಮಹಿಳೆಯರ ಕ್ಯಾನೋ ಸ್ಪರ್ಧೆಯಲ್ಲಿ, ಪ್ರಾಚಿ ಯಾದವ್ 1:03.147 ಸಮಯದೊಂದಿಗೆ ಬೆಳ್ಳಿ ಗೆದ್ದರು

RELATED ARTICLES

Latest News