Saturday, July 27, 2024
Homeರಾಷ್ಟ್ರೀಯಭಾರತದ ರಕ್ಷಣಾ ಉತ್ಪನ್ನಗಳ ರಫ್ತು 21 ಸಾವಿರ ಕೋಟಿಗೆ ಏರಿಕೆ

ಭಾರತದ ರಕ್ಷಣಾ ಉತ್ಪನ್ನಗಳ ರಫ್ತು 21 ಸಾವಿರ ಕೋಟಿಗೆ ಏರಿಕೆ

ನವದೆಹಲಿ,ಮೇ 15- ಮೇಕ್‌ ಇನ್‌ ಇಂಡಿಯಾದ ಸಹಕಾರದಿಂದ ಈ ಬಾರಿ ಭಾರತ ರಕ್ಷಣಾ ಉತ್ಪನ್ನಗಳ ರ್ತ 21,083 ಕೋಟಿ ರೂ.ಗೆ ಏರಿಕೆಯಾಗಿದೆ.ಸ್ಟಾಕ್‌ಹೋಮ್‌ ಇಂಟರ್‌ನ್ಯಾಶನಲ್‌ ಪೀಸ್‌‍ ರಿಸರ್ಚ್‌ ಇನ್ಸ್ಟಿಟ್ಯೂಟ್‌ ಪ್ರಕಾರ, 2000 ಮತ್ತು 2023 ರ ನಡುವೆ ಮ್ಯಾನಾರ್‌ ಭಾರತದ ಶಸಾಸಗಳ ಅತಿದೊಡ್ಡ ಆಮದುದಾರ ಎಂದು ವರದಿ ಮಾಡಿದೆ. ಇದು ಭಾರತದ ರಫ್ತಿನ ಶೇ. 31 ಭಾಗ ಹೊಂದಿದೆ. ಶ್ರೀಲಂಕಾ ಶೇ. 19, ಮಾರಿಷಸ್‌‍, ನೇಪಾಳ, ಆರ್ಮೇನಿಯಾ, ವಿಯೆಟ್ನಾಂ ಮತ್ತು ಮಾಲ್ಡೀವ್‌್ಸ ಇತರ ಪ್ರಮುಖ ಆಮದುದಾರ ದೇಶಗಳಾಗಿವೆ.

ಖಾಸಗಿ ಕಂಪನಿಗಳು ಸಹ ಶಸಾಸಗಳನ್ನು ತಯಾರಿಸುತ್ತಿರುವ ಕಾರಣ ಭಾರತ ಹೆಚ್ಚು ಪ್ರಮಾಣದ ಶಸಾಸಗಳ ರ್ತ ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ರಫ್ತಿನ ಪ್ರಮಾಣ ಹೆಚ್ಚಾಗುತ್ತಿದೆ. ರಕ್ಷಣಾ ಸಚಿವಾಲಯದ ಪ್ರಕಾರ 2014-15ರಲ್ಲಿ 1,941 ಕೋಟಿ ರೂ., 2017-18ರಲ್ಲಿ 4,682 ಕೋಟಿ ರೂ., 2018-19ರಲ್ಲಿ 10,746 ಕೋಟಿ ರೂ., 2021-22ರಲ್ಲಿ 12,815 ಕೋಟಿ ರೂ., 2022-23ರಲ್ಲಿ 15,918 ಕೋಟಿ ರೂ. ಹಾಗೂ 2023-24ರಲ್ಲಿ 21,083 ಕೋಟಿ ರೂ. ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ಭಾರತ ರ್ತ ಮಾಡಿದೆ.

ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ. 32.5 ರಷ್ಟು ಹೆಚ್ಚಿನ ಬೆಳವಣಿಗೆಯಾಗಿದೆ.
2025ರ ವೇಳೆಗೆ ಭಾರತ 35 ಸಾವಿರ ಕೋಟಿ ರೂ. ಮೌಲ್ಯದ ಶಸಾಸಗಳನ್ನು ರ್ತ ಮಾಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದೇ ಬದ್ಧತೆಯಲ್ಲಿ ಭಾರತ ಮುಂದುವರಿದರೆ ಈ ಗುರಿಯನ್ನು ಮೀರಿ ಬೆಳೆಯುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಭಾರತೀಯ ಹಡಗುಗಳು ಅತ್ಯಂತ ಆಕರ್ಷಕ ರಕ್ಷಣಾ ಸರಕುಗಳಾಗಿವೆ. ಇದು ದೇಶದ ಒಟ್ಟು ರಕ್ಷಣಾ ರಫ್ತಿನ ಶೇ.61 ರಷ್ಟು ಭಾಗ ಹೊಂದಿದೆ. ಇದಾದ ನಂತರ ಶೇ.20 ರಷ್ಟು ವಿಮಾನಗಳು, ಶೇ. 14 ರಷ್ಟು ಸಂಪರ್ಕ ಸಾಧನಗಳು, ಶೇ. 2.8 ರಷ್ಟು ಶಸಸಜ್ಜಿತ ವಾಹನಗಳು ಮತ್ತು ಶೇ. 1.1 ರಷ್ಟು ಫಿರಂಗಿಗಳನ್ನು ಭಾರತ ರ್ತ ಮಾಡುತ್ತಿದೆ.

ಕಳೆದ ಐದು ವರ್ಷಗಳಲ್ಲಿ ರ್ತ ಮಾಡಲಾದ ಪ್ರಮುಖ ರಕ್ಷಣಾ ಸಾಧನಗಳಲ್ಲಿ ಸಿಮ್ಯುಲೇಟರ್‌, ಅಶ್ರುವಾಯು ಲಾಂಚರ್‌, ಹೆಲಿಕಾಪ್ಟರ್‌ಗಳು, ಟಾರ್ಪಿಡೊ-ಲೋಡಿಂಗ್‌ ಮೆಕ್ಯಾನಿಸಂ, ಅಲಾರ್ಮ್‌ ಮಾನಿಟರಿಂಗ್‌ ಮತ್ತು ಕಂಟೋಲ್‌‍, ನೈಟ್‌ ವಿಷನ್‌ ಮಾನೋಕ್ಯುಲರ್‌ ಮತ್ತು ಬೈನಾಕ್ಯುಲರ್‌, ಅಗ್ನಿಶಾಮಕ ನಿಯಂತ್ರಣ ವ್ಯವಸ್ಥೆಗಳು, ಶಸಸಜ್ಜಿತ ರಕ್ಷಣಾ ವಾಹನ, ಶಸಾಸಗಳನ್ನು ಪತ್ತೆ ಹಚ್ಚುವ ರಾಡಾರ್‌, ಆಕಾಶ್‌ ಕ್ಷಿಪಣಿ, ಹೈ ಫ್ರೀಕ್ವೆನ್ಸಿ ರೇಡಿಯೋ, ಡೋನ್‌ಗಳು ಇತ್ಯಾದಿಗಳನ್ನು ರ್ತ ಮಾಡಲಾಗಿದೆ.

ಇಟಲಿ, ಶ್ರೀಲಂಕಾ, ರಷ್ಯಾ, ಮಾಲ್ಡೀವ್ಸ್, ಮಾರಿಷಸ್‌‍, ನೇಪಾಳ,ಫ್ರಾನ್ಸ್, ಶ್ರೀಲಂಕಾ, ಈಜಿಪ್ಟ್, ಇಸ್ರೀಲ್‌‍, ಭೂತಾನ್‌, ಯುಎಇ, ಸೌದಿ ಅರೇಬಿಯಾ, ಇಥಿಯೋಪಿಯಾ, ಫಿಲಿಪೈನ್ಸ್, ಪೋಲೆಂಡ್‌, ಸ್ಪೇನ್‌ ಮತ್ತು ಚಿಲಿ ದೇಶಗಳು ರ್ತ ಪಟ್ಟಿಯಲ್ಲಿವೆ.

RELATED ARTICLES

Latest News